ಯಾವುದೇ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗಲ್ಲ ಭಾರತ vs ವಿಂಡೀಸ್ ಸರಣಿ; ಪಂದ್ಯ ವೀಕ್ಷಿಸಲು ಇದೊಂದೇ ದಾರಿ!

ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಆಂಗ್ಲರ ವಿರುದ್ಧದ ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಜಯ ಸಾಧಿಸುವುದರ ಮೂಲಕ ತನ್ನ ಪ್ರವಾಸವನ್ನು ಮುಕ್ತಾಯಗೊಳಿಸಿರುವ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸಲು ಕೆರಿಬಿಯನ್ ಪ್ರವಾಸವನ್ನು ಕೈಗೊಳ್ಳಲಿದೆ.
ಮೊದಲಿಗೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಏಕದಿನ ಸರಣಿ ನಡೆಯಲಿದ್ದು, ಈ ಸರಣಿಯಿಂದ ವಿಶ್ರಾಂತಿಯ ಸಲುವಾಗಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಬಹುತೇಕ ಸ್ಟಾರ್ ಆಟಗಾರರು ಹೊರಗುಳಿದಿದ್ದಾರೆ ಮತ್ತು ತಂಡವನ್ನು ನಾಯಕನಾಗಿ ಶಿಖರ್ ಧವನ್ ಮುನ್ನಡೆಸಲಿದ್ದಾರೆ.
ಈಗಾಗಲೇ ಏಕದಿನ ಸರಣಿಗೆ ಎರಡೂ ತಂಡಗಳು ಸಹ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಟೀಮ್ ಇಂಡಿಯಾ ಮಂಗಳವಾರ ( ಜುಲೈ 19 ) ಟ್ರಿನಿಡಾಡ್ ಮತ್ತು ಟೊಬಾಗೋ ತಲುಪಲಿದ್ದು ಅಭ್ಯಾಸವನ್ನು ಆರಂಭಿಸಲಿದೆ. ಜುಲೈ 22ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿ ಆರಂಭವಾಗಲಿದ್ದು, ಇತ್ತಂಡಗಳ ನಡುವಿನ ಈ ಸರಣಿಯ ನೇರಪ್ರಸಾರವನ್ನು ಯಾವ ಚಾನೆಲ್ ಮೂಲಕ ವೀಕ್ಷಿಸಬಹುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಟೀಮ್ ಇಂಡಿಯಾದ ಈ ಹಿಂದಿನ ಸರಣಿಗಳ ರೀತಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಹಣಾಹಣಿಯ ನೇರಪ್ರಸಾರವನ್ನು ಖಾಸಗಿ ಚಾನೆಲ್ ಮೂಲಕ ವೀಕ್ಷಿಸಲಾಗುವುದಿಲ್ಲ. ಹಾಗಿದ್ದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಗಳನ್ನು ಭಾರತದಲ್ಲಿ ಯಾವ ಚಾನೆಲ್ ಮೂಲಕ ವೀಕ್ಷಿಸಬಹುದು ಎಂಬುದರ ಕುರಿತಾದ ಮಾಹಿತಿ ಮುಂದಿದೆ ಓದಿ.

ಈ ಚಾನೆಲ್‌ನಲ್ಲಿ ಮಾತ್ರ ನೇರ ಪ್ರಸಾರ
ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕಣಕ್ಕಿಳಿಯದ ಕಾರಣ ಹೆಚ್ಚಿನ ಬೇಡಿಕೆ ಇಲ್ಲ ಎನ್ನಲಾಗುತ್ತಿದೆ. ಹಾಗೂ ಈ ಸರಣಿಯ ನೇರ ಪ್ರಸಾರದ ಹಕ್ಕು ಫ್ಯಾನ್ ಕೋಡ್ ಪಾಲಾಗಿದ್ದು, ಇದು ಓಟಿಟಿ ಪ್ಲ್ಯಾಟ್ ಫಾರ್ಮ್ ಆಗಿದೆ ಹಾಗೂ ಯಾವುದೇ ಚಾನೆಲ್ ಹೊಂದಿಲ್ಲ. ಹೀಗಾಗಿ ಈ ಪಂದ್ಯಗಳ ನೇರಪ್ರಸಾರದ ಹಕ್ಕು ಭಾರತದ ಯಾವುದೇ ಖಾಸಗಿ ಚಾನೆಲ್ ಪಾಲಾಗದೇ ಇದ್ದು, ಡಿಡಿ ಪ್ರಸಾರ ಭಾರತಿಯ ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಈ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ ಮತ್ತು ಫ್ಯಾನ್ ಕೋಡ್ ಅಪ್ಲಿಕೇಶನ್‌ನಲ್ಲಿಯೂ ವೀಕ್ಷಿಸಬಹುದಾಗಿದೆ. ಈ ಮೂಲಕ ಈ ಬಾರಿಯ ನೇರಪ್ರಸಾರವನ್ನು ದೂರದರ್ಶನದಲ್ಲಿ ವೀಕ್ಷಿಸಲು ಇರುವ ಏಕೈಕ ಮಾರ್ಗ ಡಿಡಿ ಸ್ಪೋರ್ಟ್ಸ್ ಚಾನೆಲ್ ಆಗಿದ್ದು, ಈ ಹಿಂದಿನ ಸರಣಿಗಳ ರೀತಿ ಸೋನಿ ಸ್ಪೋರ್ಟ್ಸ್, ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಓಟಿಟಿ ಅಪ್ಲಿಕೇಶನ್‌ಗಳಾದ ಹಾಟ್ ಸ್ಟಾರ್ ಮತ್ತು ಸೋನಿ ಲಿವ್ ರೀತಿಯ ಖಾಸಗಿ ಪ್ಲಾಟ್ ಫಾರ್ಮ್‌ಗಳಲ್ಲಿ ನೇರಪ್ರಸಾರ ಲಭ್ಯವಿರುವುದಿಲ್ಲ.

ಏಕದಿನ ಸರಣಿಗೆ ಪ್ರಕಟವಾದ ತಂಡಗಳು
ಭಾರತ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ( ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ವೆಸ್ಟ್ ಇಂಡೀಸ್ ತಂಡ: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್, ಜೇಡನ್ ಸೀಲ್ಸ್

ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿಯ ವೇಳಾಪಟ್ಟಿ
• ಪ್ರಥಮ ಏಕದಿನ ಪಂದ್ಯ ಜುಲೈ 22ರಂದು ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
• ದ್ವಿತೀಯ ಏಕದಿನ ಪಂದ್ಯ ಜುಲೈ 24ರಂದು ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
• ತೃತೀಯ ಏಕದಿನ ಪಂದ್ಯ ಜುಲೈ 27ರಂದು ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications