ಭಾರತ vs ವೆಸ್ಟ್ ಇಂಡೀಸ್: ಟಿ20 ಸರಣಿಗಾಗಿ ಟ್ರಿನಿಡಾಡ್‌ನಲ್ಲಿ ಬಂದಿಳಿದ ಘಟಾನುಘಟಿಗಳು!

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ನಡೆಯುತ್ತಿದ್ದು ಏಕದಿನ ಸರಣಿಯ ಮುಕ್ತಾಯದ ಬಳಿಕ ಟಿ20 ಸರಣಿ ಆಯೋಜನೆಯಾಗಲಿದೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಪಡೆಯೊಂದಿಗೆ ಮುಖಾಮುಖಿಯಾಗಲಿದೆ. ಭಾರತ ತಂಡದಲ್ಲಿ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕೆಲ ಪ್ರಮುಖ ಆಟಗಾರರು ಟಿ20 ಸರಣಿಯಲ್ಲಿ ಆಡಲಿದ್ದು ಈ ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾಗಿಯಾಗಲಿರುವ ಆಟಗಾರರು ಈಗಾಗಲೇ ಕೆರಿಬಿಯನ್ ದ್ವೀಪಕ್ಕೆ ಬಂದಿಳಿದಿದ್ದಾರೆ. ಏಕದಿನ ಸರಣಿಯಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್, ದಿನೇಶ್ ಕಾರ್ತಿಕ್, ಆರ್ ಅಶ್ವಿನ್, ರಿಷಭ್ ಪಂತ್ ಈಗಾಗಲೇ ಟ್ರಿನಿಡಾಸಸ್‌ಗೆ ಬಂದಿಳಿದಿದ್ದು ಚುಟುಕು ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಚುಟುಕು ಸರಣಿಯಲ್ಲಿ ಮುನ್ನಡೆಸಲಿದ್ದಾರೆ ರೋಹಿತ್
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಿದ್ದರು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ಮುಕ್ತಾಯವಾಗಿದ್ದು ಎರಡರಲ್ಲಿಯೂ ಭಾರತ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಏಕದಿನ ಸರಣಿಯನ್ನು ಭಾರತ ತನ್ನ ವಶಕ್ಕೆ ಪಡೆದುಕೊಂಡಾಗಿದೆ. ಇದೀಗ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಖಾಯಂ ನಾಯಕ ರೋಹಿತ್ ಶರ್ಮಾ ಅವರೇ ಮುನ್ನಡೆಸಲಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದೆ.
ವಿಡಿಯೋ ಹಂಚಿಕೊಂಡ ಬಿಸಿಸಿಐ
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರು ಟಿ20 ಸರಣಿಗಾಗಿ ಟ್ರಿನಿಡಾಡ್‌ಗೆ ಬಂದಿಳಿದಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ನಾಯಕ ರೋಹಿತ್ ಶರ್ಮಾ ತಂಡದ ಸಹ ಆಟಗಾರರ ಜೊತೆಗೆ ಹೋಟೆಲ್‌ಗೆ ಬಂದಿಳಿದಿದ್ದಾರೆ. ದಿನೇಶ್ ಕಾರ್ತಿಕ್, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ಕುಲ್ದೀಪ್ ಯಾದವ್ ಈ ವಿಡಿಯೋದಲ್ಲಿದ್ದಾರೆ.

ಐದು ಪಂದ್ಯಗಳ ಟಿ20 ಸರಣಿ
ಇನ್ನು ಈ ಟಿ20 ಸರಣಿ ಐದು ಪಂದ್ಯಗಳ ಸರಣಿಯಾಗಿದೆ ಎಂಬುದು ಗಮನಾರ್ಹ ಅಂಶ. ಜುಲೈ 29 ಶುಕ್ರವಾರದಿಂದ ಈ ಸರಣಿ ಆರಂಭವಾಗಲಿದೆ. ಇನ್ನು ಈ ಸರಣಿಯ ಅಂತಿಮ ಎರಡು ಪಂದ್ಯಗಳು ಯುನೈಟೆಡ್ ಸ್ಟೇಟ್ಸ್‌ನ ಫ್ಲೋರಿಡಾದಲ್ಲಿ ನಡೆಯಲಿದೆ. ಟ್ರಿನಿಡಾಸ್‌ನ ಟರೌಬಾ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆದರೆ 2 ಹಾಗೂ 3ನೇ ಪಂದ್ಯ ಸೈಂಟ್ ಕಿಟ್ಸ್ ದ್ವೀಪದಲ್ಲಿರುವ ವಾರ್ನರ್ ಪಾರ್ಕ್‌ನಲ್ಲಿ ನಡೆಯಲಿದೆ. ಕೊನೆಯ ಎರಡು ಪಂದ್ಯಗಳು ಫ್ಲೋರಿಡಾದಲ್ಲಿರುವ ಸೆಂಟ್ರಲ್ ಬ್ರೊವಾರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಸ್ಕ್ವಾಡ್ ಹೀಗಿದೆ
ಭಾರತ T20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ರವಿ ಬಿಷ್ಣೋಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications