For Quick Alerts
ALLOW NOTIFICATIONS  
For Daily Alerts
 

IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಎನ್‌ಸಿಎಗೆ ಆಗಮಿಸಲಿರುವ ಕಿಶನ್ ಇಶಾನ್; ಕಾರಣವೇನು?

ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮತ್ತು ಇತರ ಕೆಲವು ಆಟಗಾರರು ಮುಂದಿನ ವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಭೇಟಿ ನೀಡಲಿದ್ದಾರೆ.

ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಬಹು ಮಾದರಿಯ ಸರಣಿ ಪ್ರವಾಸಕ್ಕಾಗಿ ಕೆರಿಬಿಯನ್ ದ್ವೀಪಕ್ಕೆ ಭಾರತೀಯ ರಾಷ್ಟ್ರೀಯ ತಂಡದ ನಿರ್ಗಮಿಸುವ ಮೊದಲು ಸಾಮರ್ಥ್ಯ ಮತ್ತು ಕಂಡೀಷನಿಂಗ್ ಸಂಬಂಧಿತ ತರಬೇತಿಗಾಗಿ ಎನ್‌ಸಿಎಗೆ ಬರಲಿದ್ದಾರೆ.

India vs West Indies

ಜುಲೈ 12ರಿಂದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದು, ಇದಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ತಂಡ ಜುಲೈ 3ರಂದು ಕೆರಿಬಿಯನ್ ದ್ವೀಪಕ್ಕೆ ತೆರಳಲಿದೆ.

ಸಾಮಾನ್ಯವಾಗಿ ಎರಡು ಅಂತರಾಷ್ಟ್ರೀಯ ಸರಣಿಗಳ ನಡುವೆ ಅಂತರವಿದ್ದಾಗ, ಯಾವುದೇ ದೇಶೀಯ ಪಂದ್ಯಾವಳಿಗಳ ಭಾಗವಾಗಿರದ ಕೇಂದ್ರೀಯ ಗುತ್ತಿಗೆ ಆಟಗಾರರನ್ನು ತಮ್ಮ ಫಿಟ್‌ನೆಸ್ ಸ್ಥಿತಿಯನ್ನು ನವೀಕರಿಸಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಕರೆಸಿಕೊಳ್ಳಲಾಗುತ್ತದೆ.

ಇನ್ನು ದುಲೀಪ್ ಟ್ರೋಫಿ ಜೂನ್ 28ರಿಂದ ಬೆಂಗಳೂರಿನಲ್ಲಿ ನಡೆಯಲಿದ್ದು, ಜುಲೈ 12ರಿಂದ 16ರವರೆಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಆದರೆ ಇಶಾನ್ ಕಿಶನ್ ಈ ದೇಶೀಯ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಬೆಂಗಳೂರಿನ ಆಲೂರಿನಲ್ಲಿ ನಡೆಯುವ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ಪೂರ್ವ ವಲಯವು ಕೇಂದ್ರ ವಲಯವನ್ನು ಎದುರಿಸುವಾಗ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ತೆರಳುವ ಮುನ್ನ 24 ವರ್ಷದ ಇಶಾನ್ ಕಿಶನ್ ಕೆಂಪು ಚೆಂಡಿನೊಂದಿಗೆ ಒಂದು ಪಂದ್ಯವನ್ನು ಆಡುವ ಅವಕಾಶ ಪಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

India vs West Indies

ದುಲೀಪ್ ಟ್ರೋಫಿಯ ಒಂದು ಪಂದ್ಯವು ಇಶಾನ್ ಕಿಶನ್‌ಗೆ ಭಾರತ ಟೆಸ್ಟ್ ತಂಡದಲ್ಲಿ ಆಯ್ಕೆಗಾಗಿ ತನ್ನ ಸಾಮರ್ಥ್ಯವನ್ನು ಸಮರ್ಥಿಸಲು ಒಂದು ಅವಕಾಶವನ್ನು ನೀಡುತ್ತಿತ್ತು. ಏಕೆಂದರೆ, ಪ್ರಸ್ತುತ ಕೆಎಸ್ ಭರತ್ ಅವರೊಂದಿಗೆ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ.

ಕೆಎಸ್ ಭರತ್‌ಗಿಂತ ಮೊದಲು ಡಬ್ಲ್ಯುಟಿಸಿ ಫೈನಲ್‌ ಪಂದ್ಯದಲ್ಲಿ ಇಶಾನ್ ಕಿಶನ್ ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ ದುಲೀಪ್ ಟ್ರೋಫಿಯಿಂದಲೂ ಹೊರಗುಳಿದಿದ್ದರು. ಅವರ ಆ ನಿರ್ಧಾರವು ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಆಡುವ ಅವರ ಬಯಕೆಯ ಬಗ್ಗೆ ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ.

ಆದರೂ, ಸದ್ಯ ಭಾರತ ಟೆಸ್ಟ್ ತಂಡದಲ್ಲಿ ಎರಡನೇ ಕೀಪರ್ ಆಗಿ ಇಶಾನ್ ಕಿಶನ್ ಸ್ಥಾನಕ್ಕೆ ಸವಾಲು ಮಾಡುವವರು ಯಾರೂ ಇಲ್ಲ ಮತ್ತು ಆಯ್ಕೆಗಳ ಕೊರತೆಯಿಂದಾಗಿ ಕಿಶನ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಕೆಲಸದ ಹೊರೆ ನಿರ್ವಹಣೆಗೆ ಸಂಬಂಧಿಸಿದಂತೆ ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಆಡುವ 11ರ ಬಳಗದಲ್ಲಿ ಆಯ್ಕೆಯಾಗದಿದ್ದರೆ, ಆ ಬಳಿಕ ಎರಡು ತಿಂಗಳ ಕಾಲ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡದೆ ವೈಟ್ ಬಾಲ್ ಸರಣಿಗೆ ಹೋಗಲಿದ್ದಾರೆ.

ಮೇ 26ರಂದು ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅವರ ಕೊನೆಯ ಸ್ಪರ್ಧಾತ್ಮಕ ಪಂದ್ಯವಾಗಿತ್ತು. ಅವರು ಟೆಸ್ಟ್‌ ಪಂದ್ಯಕ್ಕೆ ಆಡಲು ಆಯ್ಕೆಯಾಗದಿದ್ದರೆ, ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಆಡಬೇಕಾಗುತ್ತದೆ.

Story first published: Saturday, June 17, 2023, 19:38 [IST]
Other articles published on Jun 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+