For Quick Alerts
ALLOW NOTIFICATIONS  
For Daily Alerts
 

ನೀವೆಲ್ಲಾ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ: ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆಗೆ ರೋಹಿತ್ ಮತ್ತೆ ಕಿಡಿ!

Ind vs WI: Rohit Sharma defends Virat Kohli and slams media for their scrutiny

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಅಂತ್ಯವಾಗಿದ್ದು ಈಗ ಟಿ20 ಸರಣಿಗೆ ಎರಡು ತಂಡಗಳು ಕೂಡ ಸಜ್ಜಾಗಿದೆ. ಬುಧವಾರದಿಂದ ಟಿ20 ಸರಣಿ ಆರಂಭವಾಗಲಿದ್ದು ಕೊಲ್ಕತ್ತಾದ ಈಡನ್ ಗಾರ್ಡನ್ ಈ ಚುಟುಕು ಮಾದರಿಯ ಸರಣಿಗೆ ಆತಿಥ್ಯ ವಹಿಸಲಿದೆ. ಈ ಚುಟುಕು ಸರಣಿಯ ಆರಂಭಕ್ಕೆ ಮುನ್ನಾದಿನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಮಾಧ್ಯಮಗಳ ಜೊತೆಗೆ ನಾಯಕ ರೋಹಿತ್ ಶರ್ಮಾ ಮಾತನಾಡುವ ಸಂದರ್ಭದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ರೋಹಿತ್ ಶರ್ಮಾಗೆ ಎದುರಾಯಿತು. ಈ ಬಗ್ಗೆ ರೋಹಿತ್ ಶರ್ಮಾ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳು ಸುಮ್ಮನಿದ್ದರೆ ಸಾಕು ಎಲ್ಲವೂ ಸರಿಯಾಗಲಿದೆ ಎಂದು ರೋಹಿತ್ ಖಡಕ್ಕಾಗಿ ಉತ್ತರವನ್ನು ನೀಡಿದ್ದಾರೆ.

ಹಾಗಾದರೆ ರೋಹಿತ್ ಶರ್ಮಾಗೆ ಎದುರಾದ ಪ್ರಶ್ನೆಯೇನು? ರೋಹಿತ್ ಶರ್ಮಾ ನೀಡಿದ ಉತ್ತರವೇನು? ಮುಂದೆ ಓದಿ..

ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ವೈಫಲ್ಯ

ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ವೈಫಲ್ಯ

ವೆಸ್ಟ್ ಇಂಡೀಸ್ ವಿರುದ್ಧಧ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿಯೂ ಆಡಿದ್ದ ವಿರಾಟ್ ಕೊಹ್ಲಿ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದರು. ಆಡಿದ ಮೂರು ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 26 ರನ್ ಮಾತ್ರ. 2015ರ ರ ಬಳಿಕ ದ್ವಿಪಕ್ಷೀಯ ಏಕದಿನ ಸರಣಿಯೊಂದರಲ್ಲಿ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ರನ್‌ಗಳಿಗಿಂತ ಕಡಿಮೆ ರನ್ ಗಳಿಸಿದ್ದರು. ಆದರೆ ತವರಿನಲ್ಲಿ ನಡೆದ ಈ ಸರಣಿಗೂ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಮೂರು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಎರಡು ಅರ್ಧ ಶತಕ ಸಿಡಿಸಿದ್ದರು. ಆದರೆ ಈ ಎರಡು ಪಂದ್ಯಗಳಲ್ಲಿ ಕೂಡ ತಂಡ ಸೋಲು ಅನುಭವಿಸಿತ್ತು.

ಪತ್ರಕರ್ತರಿಂದ ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆ

ಪತ್ರಕರ್ತರಿಂದ ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆ

ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವೈಫಲ್ಯವನ್ನು ಅನುಭವಿಸಿದ ವಿಚಾರವಾಗಿ ನಾಯಕ ರೋಹಿತ್ ಶರ್ಮಾ ಬಳಿ ಪದೇ ಪದೇ ಪ್ರಶ್ನೆಗಳು ಕೇಳಿ ಬರುತ್ತಿದೆ. ಟಿ20 ಸರಣಿಯ ಆರಂಭಕ್ಕೂ ಮುನ್ನಾದಿನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮತ್ತೊಮ್ಮೆ ಇದೇ ಪ್ರಶ್ನೆ ಕೇಳಿ ಬಂದಿದೆ. ಈ ಪ್ರಶ್ನೆಗೆ ರೋಹಿತ್ ಶರ್ಮಾ ಖಡಕ್ಕಾಗಿಯೇ ಉತ್ತರವನ್ನು ನೀಡಿದ್ದಾರೆ.

ನೀವು ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ

ನೀವು ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ

ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮಾ "ನನ್ನ ಪ್ರಕಾರ ಇದೆಲ್ಲವೂ ನಿಮ್ಮಿಂದಲೇ(ಮಾಧ್ಯಮ) ಆಗುತ್ತಿದೆ. ನೀವು ಈ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಎಲ್ಲವೂ ಕೂಡ ಸರಿಯಾಗಲಿದೆ" ಎಂದಿದ್ದಾರೆ. ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ ಕೊಹ್ಲಿಯನ್ನು ಬೆಂಬಲಿಸಿ ಖಡಕ್ ಉತ್ತರವನ್ನು ನೀಡಿದ್ದಾರೆ. "ನಾನು ನೋಡುತ್ತಿರುವಂತೆ ಅವರು ಉತ್ತಮವಾದ ಸ್ಥಳಾವಕಾಶದಲ್ಲಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಂತಾರಾಷ್ಟ್ರೀಯ ತಂಡವೊಂದರ ಭಾಗವಾಗಿದ್ದಾರೆ. ಹಾಗಾಗಿ ಅವರಿಗೆ ಒತ್ತಡವನ್ನು ಮೆಟ್ಟಿ ನಿಲ್ಲುವುದು ಹೇಗೆಂದು ತಿಳಿದಿದೆ. ಹಾಗಾಗಿ ಎಲ್ಲವೂ ಕೂಡ ನಿಮ್ಮಿಂದಲೇ(ಮಾಧ್ಯಮ) ಆರಂಭವಾಗುತ್ತಿದೆ ಎನಿಸುತ್ತದೆ. ನೀವು ಸ್ವಲ್ಪ ಕಾಲ ಸುಮ್ಮನಿದ್ದುಬಿಟ್ಟರೆ ಎಲ್ಲವೂ ಸರಿಯಾಗಲಿದೆ" ಎಂದು ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ರೋಹಿತ್ ಶರ್ಮಾ ಹೇಳಿದ್ದಾರೆ. ವಿರಾಟ್ ಕೊಹ್ಲಿಯ ಅಸ್ಥಿರ ಫಾರ್ಮ್ ಅನ್ನು ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಹೇಗೆ ಎದುರಿಸಲಿದ್ದೀರಿ ಎಂಬ ಪ್ರಶ್ನೆಗೆ ರೋಹಿತ್ ಈ ಉತ್ತರವನ್ನು ನೀಡಿದರು.

Virat ಫಾರ್ಮ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ Rohit ಕೊಟ್ಟ ಉತ್ತರ ಸಖತ್!! | Oneindia Kannada
ನಾಯಕನಾಗಿ ಶರ್ಮಾ ಕೊಹ್ಲಿಯನ್ನು ಬೆಂಬಲಿಸುತ್ತಿರುವುದು ಮೊದಲೇನಲ್ಲ

ನಾಯಕನಾಗಿ ಶರ್ಮಾ ಕೊಹ್ಲಿಯನ್ನು ಬೆಂಬಲಿಸುತ್ತಿರುವುದು ಮೊದಲೇನಲ್ಲ

ರೋಹಿತ್ ಶರ್ಮಾ ಟೀಮ್ ಇಂಡಿಯಾ ವೈಟ್ ಬಾಲ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಕೊಹ್ಲಿ ಫಾರ್ಮ್ ಬಗ್ಗೆ ಇದೇ ಮೊದಲ ಬಾರಿಗೆ ಪ್ರಶ್ನೆ ಕೇಳಿ ಬರುತ್ತಿಲ್ಲ. ಏಕದಿನ ಸರಣಿಯ ಅಂತ್ಯವಾದ ಬಳಿಕ ಮಾಧ್ಯಮಗಳು ವಿರಾಟ್ ಕೊಹ್ಲಿ ಆತ್ಮವಿಶ್ವಾಸದ ಬಗ್ಗೆ ಪ್ರಶ್ನೆಗಳನ್ನು ರೋಹಿತ್ ಶರ್ಮಾ ಮುಂದಿಟ್ಟವು. ಈ ಬಗ್ಗೆ ರೋಹಿತ್ ಶರ್ಮಾ ನಗುತ್ತಾ "ವಿರಾಟ್ ಕೊಹ್ಲಿಗೆ ಮತ್ತಷ್ಟು ಆತ್ಮವಿಶ್ವಾಸದ ಅಗತ್ಯವಿದೆ ಅನಿಸುತ್ತಾ? ವಿರಾಟ್ ಕೊಹ್ಲಿಗೆ ಆತ್ಮವಿಶ್ವಾಸದ ಕೊರತೆಯಿದ್ದರೆ ತಂಡದ ಯಾವ ಆಟಗಾರನಿಗೆ ಆತ್ಮವಿಶ್ವಾಸವಿದೆ? ವಿರಾಟ್ ಬಹಳ ಕಾಲದಿಂದ ಶತಕ ಬಾರಿಸಿಲ್ಲ ಎಂದು ನನಗೆ ಗೊತ್ತಿದೆ. ಆದರೆ ಆತ ಅರ್ಧ ಶತಕಗಳನ್ನು ಬಾರಿಸುತ್ತಾ ಬಂದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿಯೂ ಕೊಹ್ಲಿ ಮೂರು ಪಂದ್ಯಗಳಲ್ಲಿ ಎರಡು ಅರ್ಧ ಶತಕ ಬಾರಿಸಿದ್ದಾರೆ" ಎಂದು ರೋಹಿತ್ ಶರ್ಮಾ ಉತ್ತರ ನೀಡಿದ್ದರು.

Story first published: Tuesday, February 15, 2022, 17:49 [IST]
Other articles published on Feb 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+