ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಭಾರತ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದೆ. ಮತ್ತೊಂದು ಅದ್ಭುತ ಆರಂಭ ಪಡೆದ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲಿ ಉತ್ತಮ ಮೊತ್ತಗಳಿಸುವಲ್ಲಿ ಯಶಸ್ವಿಯಾಗಿದೆ. ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಮತ್ತೊಂದು ಶತಕದ ಜೊತೆಯಾಟದಲ್ಲಿ ಭಾಗುಯಾಗಿದ್ದು ಇಬ್ಬರು ಆಟಗಾರರು ಕೂಡ ಅರ್ಧ ಶತಕ ಸಿಡಿಸಿದ್ದಾರೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡ ಟೀಮ್ ಇಂಡಿಯಾ ಪರವಾಗಿ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಭರ್ಜರಿ 139 ರನ್‌ಗಳ ಜೊತೆಯಾಟ ನೀಡಿದ ಬಳಿಕ ಜೈಸ್ವಾಲ್ 57 ರನ್‌ಗಳಿಸಿ ಔಟಾದರು. ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅರ್ಮೋ ಶತಕ ಸಿಡಿಸಿದ ಜೈಸ್ವಾಲ್ ಎರಡನೇ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನಿಡಿ ಗಮನಸೆಳೆದಿದ್ದಾರೆ. ಇನ್ನು ನಾಯಕ ರೋಹಿತ್ ಶರ್ಮಾ ಕೂಡ 80 ರನ್‌ಗಳ ಕೊಡುಗೆ ನೀಡಿ ವಿಂಡೀಸ್ ಬೌಲರ್‌ಗಳನ್ನು ದಂಡಿಸಿದ್ದಾರೆ.

ಇನ್ನು ಆರಂಭಿಕ ಜೋಡಿ ಬೇರ್ಪಟ್ಟ ಬಳಿಕ ಶುಬ್ಮನ್ ಗಿಲ್ ಹಾಗೂ ಅಜಿಂಕ್ಯಾ ರಹಾನೆ ಅವರನ್ನು ಅಗ್ಗಕ್ಕೆ ಕಳೆದುಕೊಂಡಿತು ಟೀಮ್ ಇಂಡಿಯಾ. ನಂತರ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜೊತೆಯಾಗಿದ್ದು ಮತ್ತೊಂದು ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಕೊಹ್ಲಿ ಭರ್ಜರಿ 161 ಎಸೆತಗಳನ್ನು ಎದುರಿಸಿದ್ದು 87 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ. ಈ ಮೂಲಕ 76ನೇ ಅಂಥಾರಾಷ್ಟ್ರೀಯ ಶತಕದ ಸನಿಹದಲ್ಲಿದ್ದಾರೆ. ಈ ಮೂಲಕ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವತ್ತ ಹೆಜ್ಜೆಯಿಟ್ಟಿದ್ದಾರೆ.
ಇನ್ನು ಕೊಹ್ಲಿಗೆ ಉತ್ತಮವಾಗಿ ಸಾಥ್ ನೀಡಿರುವ ರವೀಂದ್ರ ಜಡೇಜಾ 84 ಎಸೆತಗಳಲ್ಲಿ 36 ರನ್‌ಗಳನ್ನು ಗಳಿಸಿ ಕೊಹ್ಲಿ ಜೊತೆಗೆ ಎರಡನೇ ದಿನದಾಟ ಮುಂದುವರಿಸಲಿದ್ದಾರೆ. ಮೊದಲ ದಿನದಾಟದ ಅಂತ್ಯದಲ್ಲಿ ಭಾರತ ತಂಡ 288 ರನ್‌ಗಳನ್ನು ಗಳಿಸಿದ್ದು 4 ವಿಕೆಟ್ ಕಳೆದುಕೊಂಡಂತಾಗಿದೆ. ವೆಸ್ಟ್ ಇಂಡೀಸ್ ಪರವಾಗಿ ಕೇಮರ್ ರೋಚ್, ಶನಾನ್ ಗೇಬ್ರಿಯಲ್, ಜೋಮಲ್ ವಾರಿಕನ್ ಮತ್ತು ಜೇಸನ್ ಹೋಲ್ಡರ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕನ್, ಶಾನನ್ ಗೇಬ್ರಿಯಲ್
ಬೆಂಚ್: ಕೆವಿನ್ ಸಿಂಕ್ಲೇರ್, ರಹಕೀಮ್ ಕಾರ್ನ್ವಾಲ್
ಟೀಮ್ ಇಂಡಿಯಾ ಆಡುವ ಬಳಗ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಮುಖೇಶ್ ಕುಮಾರ್, ಮೊಹಮ್ಮದ್ ಸಿರಾಜ್
ಬೆಂಚ್: ಋತುರಾಜ್ ಗಾಯಕ್ವಾಡ್, ಶ್ರೀಕರ್ ಭರತ್, ಅಕ್ಸರ್ ಪಟೇಲ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್