ನಿರಾಸೆಯಾಗಿದೆ, ಆದರೆ.. : 3 ರನ್‌ನಿಂದ ಶತಕ ತಪ್ಪಿಸಿಕೊಂಡ ಬಗ್ಗೆ ಧವನ್ ಹೇಳಿದ್ದಿಷ್ಟು!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಪರವಾಗಿ ನಾಯಕ ಶಿಖರ್ ಧವನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಶುಬ್ಮನ್ ಗಿಲ್ ಜೊತೆಗೆ ಕಣಕ್ಕಿಳಿದ ಧವನ್ ಮೊದಲ ವಿಕೆಟ್‌ಗೆ 119 ರನ್‌ಗಳ ಜೊತೆಯಾಟವನ್ನು ನೀಡಿದರು. ನಂತರ ಶ್ರೇಯಸ್ ಐಯ್ಯರ್ ಜೊತೆಗೆ ಕೂಡ ದೊಡ್ಡ ಜೊತೆಯಾಟದಲ್ಲಿ ಭಾಗಿಯಾದ ಧವನ್ ತಂಡದ ದೊಡ್ಡ ಮೊತ್ತ ಗಳಿಸಲು ಕಾರಣವಾದರು.
ಆದರೆ ಈ ಪಂದ್ಯದಲ್ಲಿ ಶಿಖರ್ ಧವನ್ ಅದ್ಭುತ ಶತಕವನ್ನು ಗಳಿಸುವ ಅತ್ಯುತ್ತಮ ಅವಕಾಶವನ್ನು ಕಳೆದುಕೊಂಡಿದ್ದಾರೆ. 97 ರನ್‌ಗಳಿಸಿದ್ದ ವೇಳೆ ಧವನ್ ಗುಡಕೇಶ್ ಮೋಟಿ ಎಸೆತದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಇನ್ನಿಂಗ್ಸ್ ಅಂತ್ಯಗಳಿಸಿದರು. ಹೀಗಾಗಿ ಕೇವಲ ಮೂರು ರನ್‌ಗಳ ಅಂತರದಿಂದ ಶತಕ ವಂಚಿತವಾಗಿದ್ದಾರೆ. ಈ ವಿಚಾರವಾಗಿ ಶಿಖರ್ ಧವನ್ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ್ದು ಶತಕವನ್ನು ಗಳಿಸಲು ಸಾಧ್ಯವಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬೇಸರವಾಗಿದೆ, ಆದರೆ..
ಶತಕವನ್ನು ಗಳಿಸಲು ಸಾಧ್ಯವಾಗದ ಬಗ್ಗೆ ಪಂದ್ಯದ ಮುಕ್ತಾಯದ ಬಳಿಕ ಪ್ರಶ್ನೆ ಕೇಳಿದಾಗ ಶಿಖರ್ ಧವನ್ ಬೇಸರವಾದೆ ಎಂಬ ಮಾತನ್ನು ಹೇಳಿದ್ದಾರೆ. ಆದರೆ 97 ರನ್ ಗಳಿಸಲು ಸಾರ್ಧಯವಾದ ಬಗ್ಗೆ ತೃಪ್ತಿಯಿದೆ ಎಂದಿದ್ದಾರೆ. "ಅದು ನಿಜಕ್ಕೂ ಬೇಸರದ ಸಂಗತಿ. ಆದರೆ 97 ರನ್‌ಗಳಿಸಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ. ಈ ಆಟವನ್ನು ನಾನು ಆನಂದಿಸಿದ್ದೇನೆ. ಚೆಂಡು ತಡೆದು ಹಾಗೂ ತಿರುವು ಪಡೆದು ಬರುತ್ತಿದ್ದ ಕಾರಣ ಸುಲಭವಾಗಿರಲಿಲ್ಲ. ಆದರೆ ಶುಬ್ಮನ್, ಶ್ರೇಯಸ್ ಜೊತೆಗೆ ನಡೆಸಿದ ಬ್ಯಾಟಿಂಗ್‌ನಿಂದಾಗಿ ಉಳಿದ ಬ್ಯಾಟರ್‌ಗಳಿಗೆ ಸುಲಭವಾಯಿತು" ಎಂದಿದ್ದಾರೆ ಶಿಖರ್ ಧವನ್.

ಇಷ್ಟು ಸನಿಹಕ್ಕೆ ಬರುತ್ತಾರೆ ಎಂದುಕೊಂಡಿರಲಿಲ್ಲ
ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ತಂಡ ರನ್ ಬೆನ್ನಟ್ಟುವ ಸಂದರ್ಭದಲ್ಲಿ ಇಷ್ಟು ಸನಿಹಕ್ಕೆ ಬರುತ್ತಾರೆ ಎಂದು ಭಾವಿಸಿರಲಿಲ್ಲ ಎಂದಿದ್ದಾರೆ ಶಿಖರ್ ಧವನ್. ಯಾವಾಗಲೂ ನಾವು ಅಂದುಕೊಂಡಂತೆಯೇ ನಡೆಯುವುದಿಲ್ಲ. ನಾವು ಮತ್ತಷ್ಟು ಉತ್ತಮವಾಗಬೇಕಿದೆ ಎಂದು ಪಂದ್ಯದಲ್ಲಿ 3 ರನ್‌ಗಳಿಂದ ಗೆಲುವು ಸಾಧಿಸಿದ ಬಳಿಕ ಭಾರತ ತಂಡದ ನಾಯಕ ಶಿಖರ್ ಧವನ್ ಹೇಳಿಕೊಂಡಿದ್ದಾರೆ.

ಭಾನುವಾರ ನಡೆಯಲಿದೆ ಎರಡನೇ ಪಂದ್ಯ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯ ಕೂಡ ಪೋರ್ಟ್ ಆಫ್ ಸ್ಪೈನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದ್ದು ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಭಾರತ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಈಗಾಗಲೇ ಮೇಲುಗೈ ಸಾಧಿಸಿದ್ದು ಸರಣಿಯನ್ನು ವಶಕ್ಕೆ ಪಡೆಯುವ ಅವಕಾಶ ಹೊಂದಿದೆ. ಆದರೆ ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಭಾನುವಾರದ ಪಂದ್ಯ ಬಹಳ ಮುಖ್ಯವಾಗಿದ್ದು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಸರಣಿಯಲ್ಲಿ ಜೀವಂತವಾಗುಳಿಯಲು ಸಾಧ್ಯವಾಗಲಿದೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಗುಡಕೇಶ್ ಮೋಟಿ, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್, ಕೀಸಿ ಕಾರ್ಟಿ, ಕೀಮೋ ಪಾಲ್
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಋತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಇಶಾನ್ ಕಿಶನ್, ಆವೇಶ್ ಖಾನ್, ಅರ್ಷದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications