ಭಾರತದ ಈ ಮೈನಸ್ ಪಾಯಿಂಟ್ ನಮ್ಮ ಕೆಲಸವನ್ನು ಸುಲಭಗೊಳಿಸಿದೆ; ಎಚ್ಚರಿಕೆ ನೀಡಿದ ವಿಂಡೀಸ್ ನಾಯಕ

ಇಂಗ್ಲೆಂಡ್ ಪ್ರವಾಸವನ್ನು ಮುಕ್ತಾಯಗೊಳಿಸಿರುವ ಟೀಮ್ ಇಂಡಿಯಾ ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಜಯಗಳಿಸಿ ಇದೀಗ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟವಾಗಿದ್ದ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಬಹುತೇಕರು ಈ ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೂ ಕೂಡ ಪಾಲ್ಗೊಳ್ಳುತ್ತಿದ್ದು, ಇತ್ತಂಡಗಳ ನಡುವೆ ಮೊದಲಿಗೆ ನಡೆಯಲಿರುವ ಏಕದಿನ ಸರಣಿಗೆ ನಾಯಕ ರೋಹಿತ್ ಶರ್ಮಾ ವಿಶ್ರಾಂತಿಯ ಕಾರಣದಿಂದ ಹೊರಗುಳಿದಿದ್ದು ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ.
ಧವನ್ ನಾಯಕತ್ವದ ಟೀಮ್ ಇಂಡಿಯಾ ಈಗಾಗಲೇ ವೆಸ್ಟ್ ಇಂಡೀಸ್ ತಲುಪಿದ್ದು, ಕೆರಿಬಿಯನ್ನರನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ ಪ್ರೀತ್ ಬೂಮ್ರಾ ಹಾಗೂ ರಿಷಭ್ ಪಂತ್ ರೀತಿಯ ಬಲಿಷ್ಠ ಆಟಗಾರರು ವಿಶ್ರಾಂತಿಯ ಕಾರಣದಿಂದಾಗಿ ಗೈರಾಗುತ್ತಿದ್ದಾರೆ.
ಈ ಕುರಿತಾಗಿ ಇದೀಗ ಏಕದಿನ ಸರಣಿಯ ಆರಂಭಕ್ಕೂ ಮುನ್ನ ಮಾತನಾಡಿರುವ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೊಲಸ್ ಪೂರನ್ ಟೀಮ್ ಇಂಡಿಯಾದ ಮೈನಸ್ ಪಾಯಿಂಟ್ ಒಂದು ತಮ್ಮ ಕೆಲಸವನ್ನು ಸುಲಭಗೊಳಿಸಿದೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಟೀಮ್ ಇಂಡಿಯಾಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ.

ಟೀಮ್ ಇಂಡಿಯಾದಲ್ಲಿ ಪ್ರಮುಖ ಆಟಗಾರರು ಇಲ್ಲದೇ ಇರುವುದು ವಿಂಡೀಸ್ ತಂಡಕ್ಕೆ ಪ್ಲಸ್ ಪಾಯಿಂಟ್
ಏಕದಿನ ಸರಣಿಗೆ ಪ್ರಕಟಿಸಲಾಗಿರುವ ಟೀಮ್ ಇಂಡಿಯಾದ ಕುರಿತು ಮಾತನಾಡಿರುವ ನಿಕೋಲಸ್ ಪೂರನ್ ಟೀಮ್ ಇಂಡಿಯಾದಲ್ಲಿ ಹಲವು ಆಟಗಾರರು ಇಲ್ಲದೇ ಇರುವುದು ನಮ್ಮ ಕೆಲಸವನ್ನು ಸುಲಭಗೊಳಿಸಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಬಲಿಷ್ಠ ಆಟಗಾರರಿಲ್ಲದ ಟೀಮ್ ಇಂಡಿಯಾವನ್ನು ತಾವು ಸಮರ್ಥವಾಗಿ ಎದುರಿಸಿ ಗೆಲ್ಲುವ ವಿಶ್ವಾಸವನ್ನು ನಿಕೋಲಸ್ ಪೂರನ್ ಪರೋಕ್ಷವಾಗಿ ವ್ಯಕ್ತಪಡಿಸಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಆದರೂ ಟೀಮ್ ಇಂಡಿಯಾವನ್ನು ಸುಲಭವಾಗಿ ತೆಗೆದುಕೊಳ್ಳಲಾಗುವುದಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ನಿಕೋಲಸ್ ಪೂರನ್ ಪ್ರಮುಖ ಆಟಗಾರರಿಲ್ಲ ಎಂಬ ಕಾರಣಕ್ಕೆ ಭಾರತ ತಂಡವನ್ನು ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ, ಏಕೆಂದರೆ ತಂಡಕ್ಕೆ ಬಲಿಷ್ಠ ಆಟಗಾರರ ರೀತಿ ಆಸರೆಯಾಗಬಲ್ಲ ಸಾಮರ್ಥ್ಯವಿರುವ ಹಲವಾರು ಆಟಗಾರರು ಭಾರತ ತಂಡದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಟಿ ಟ್ವೆಂಟಿ ಸರಣಿಯಲ್ಲಿ ಬಲಿಷ್ಠ ತಂಡಕ್ಕೆ ಪೈಪೋಟಿ ಒಡ್ಡಲಿದ್ದೇವೆ ಎಂದ ಪೂರನ್
ಏಕದಿನ ಸರಣಿ ಮುಕ್ತಾಯವಾದ ನಂತರ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟ್ವೆಂಟಿ ಸರಣಿಯ ಕುರಿತಾಗಿ ಮಾತನಾಡಿರುವ ನಿಕೋಲಸ್ ಪೂರನ್ ಭಾರತ ತಂಡದಲ್ಲಿ ಉತ್ತಮ ಬೌಲರ್ ಮತ್ತು ಬ್ಯಾಟ್ಸ್‌ಮನ್‌ಗಳಿದ್ದಾರೆ ಹಾಗೂ ಅವರನ್ನು ನಾವು ಗುಂಪಾಗಿ ಫ್ಲೋರಿಡಾ ಕ್ರೀಡಾಂಗಣದಲ್ಲಿ ದಿಟ್ಟವಾಗಿ ಎದುರಿಸಲಿದ್ದೇವೆ ಮತ್ತು ಇದು ವಿಶ್ವ ಕ್ರಿಕೆಟ್‌ಗೆ ಹೊಸದೊಂದು ಸಂದೇಶವಾಗಲಿವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ
• ಪ್ರಥಮ ಏಕದಿನ ಪಂದ್ಯ ಜುಲೈ 22ರಂದು ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
• ದ್ವಿತೀಯ ಏಕದಿನ ಪಂದ್ಯ ಜುಲೈ 24ರಂದು ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
• ತೃತೀಯ ಏಕದಿನ ಪಂದ್ಯ ಜುಲೈ 27ರಂದು ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿಯ ವೇಳಾಪಟ್ಟಿ
• ಪ್ರಥಮ ಟಿ ಟ್ವೆಂಟಿ ಪಂದ್ಯ ಜುಲೈ 29ರಂದು ಟರೌಬಾದ ಬ್ರಿಯಾನ್ ಲಾರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
• ದ್ವಿತೀಯ ಟಿ ಟ್ವೆಂಟಿ ಪಂದ್ಯ ಆಗಸ್ಟ್ 1ರಂದು ಬಾಸೆಟೆರೆಯ ವಾರ್ನರ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
• ಮೂರನೇ ಟಿ ಟ್ವೆಂಟಿ ಪಂದ್ಯ ಆಗಸ್ಟ್ 2ರಂದು ಬಾಸೆಟೆರೆಯ ವಾರ್ನರ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
• ನಾಲ್ಕನೇ ಟಿ ಟ್ವೆಂಟಿ ಪಂದ್ಯ ಆಗಸ್ಟ್ 6ರಂದು ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
• ಐದನೇ ಟಿ ಟ್ವೆಂಟಿ ಪಂದ್ಯ ಆಗಸ್ಟ್ 7ರಂದು ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications