For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಇಬ್ಬರು ಕನ್ನಡಿಗರ ಅಬ್ಬರ; ದ್ವಿತೀಯ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

IND vs WI: Team India beats West Indies by 44 runs in the second ODI
West Indies ವಿರುದ್ಧ‌ದ ಪಂದ್ಯದಲ್ಲಿ ಮಿಂಚಿದ ಕನ್ನಡಿಗರು | IND vs WI 2nd ODI | Oneindia Kannada

ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಸೋಲುವುದರ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಸದ್ಯ ಕೆರಿಬಿಯನ್ನರ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡು ಕಮ್ ಬ್ಯಾಕ್ ಮಾಡಿದೆ.

ಹೌದು, ಕಳೆದ ಭಾನುವಾರದಂದು ನಡೆದ ಇತ್ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಹೀಗೆ ಸರಣಿಯಲ್ಲಿ ಶುಭಾರಂಭ ಮಾಡುವ ಮೂಲಕ ಮುನ್ನಡೆಯನ್ನು ಕಾಯ್ದುಕೊಂಡಿದ್ದ ಟೀಮ್ ಇಂಡಿಯಾ ಇದೀಗ ಇಂದು ( ಫೆಬ್ರವರಿ 9 ) ನಡೆದಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಕೂಡ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ.

ವೆಸ್ಟ್ ಇಂಡೀಸ್ ತಂಡಕ್ಕೆ 238 ರನ್ ಗುರಿ

ವೆಸ್ಟ್ ಇಂಡೀಸ್ ತಂಡಕ್ಕೆ 238 ರನ್ ಗುರಿ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಜೋಡಿಯನ್ನು ಕಣಕ್ಕಿಳಿಸುವುದರ ಮೂಲಕ ಪ್ರಯೋಗವೊಂದನ್ನು ಮಾಡಲಾಯಿತು. ಆದರೆ ಈ ಪ್ರಯೋಗ ಟೀಮ್ ಇಂಡಿಯಾಗೆ ದೊಡ್ಡ ಫಲ ನೀಡುವಲ್ಲಿ ವಿಫಲವಾಗಿದೆ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 8 ರನ್, ರಿಷಭ್ ಪಂತ್ 18 ರನ್ ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ 18 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಹೀಗೆ 12 ಓವರ್‌ಗಳಿಗೆ ತಂಡದ ಮೂವರು ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಕೇವಲ 43 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಜತೆಯಾದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 91 ರನ್‌ಗಳ ಜತೆಯಾಟವನ್ನು ಆಡುವುದರ ಮೂಲಕ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು. ಕೆಎಲ್ ರಾಹುಲ್ 49 ರನ್ ಮತ್ತು ಸೂರ್ಯಕುಮಾರ್ ಯಾದವ್ 64 ರನ್ ಕಲೆಹಾಕಿ ತಂಡಕ್ಕೆ ಆಪತ್ಬಾಂಧವರಾದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ 24, ದೀಪಕ್ ಹೂಡಾ 29, ಶಾರ್ದೂಲ್ ಠಾಕೂರ್ 8, ಮೊಹಮ್ಮದ್ ಸಿರಾಜ್ 3, ಯುಜುವೇಂದ್ರ ಚಾಹಲ್ ಅಜೇಯ 11 ಹಾಗೂ ಪ್ರಸಿದ್ಧ್ ಕೃಷ್ಣ ಔಟ್ ಆಗದೆ 0 ರನ್ ಕಲೆಹಾಕಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಕಲೆಹಾಕಿದ್ದು ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 238 ರನ್‌ಗಳ ಗುರಿಯನ್ನು ನೀಡಿತು.

ಗುರಿ ಮುಟ್ಟುವಲ್ಲಿ ವಿಫಲವಾದ ವಿಂಡೀಸ್

ಗುರಿ ಮುಟ್ಟುವಲ್ಲಿ ವಿಫಲವಾದ ವಿಂಡೀಸ್

ಟೀಮ್ ಇಂಡಿಯಾ ನೀಡಿದ ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡದ ಪರ ಶಾಮ್ರಾ ಬ್ರೂಕ್ಸ್, ಅಂತಿಮ ಹಂತದಲ್ಲಿ ಓಡಿಯನ್ ಸ್ಮಿತ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ದೊಡ್ಡ ರನ್ ಬಾರಿಸುವಲ್ಲಿ ಯಶಸ್ವಿಯಾಗಲಿಲ್ಲ. ಶಾಯ್ ಹೋಪ್ 27, ಬ್ರ್ಯಾಂಡನ್ ಕಿಂಗ್ 18, ಡರೆನ್ ಬ್ರಾವೊ 1, ಶಾಮ್ರಾ ಬ್ರೂಕ್ಸ್ 44, ನಿಕೋಲಸ್ ಪೂರನ್ 9, ಜೇಸನ್ ಹೋಲ್ಡರ್ 2, ಅಖೇಲ್ ಹುಸೇನ್ 34, ಫ್ಯಾಬಿಯನ್ ಅಲೆನ್ 13, ಓಡಿಯನ್ ಸ್ಮಿತ್‌ 24, ಕೆಮರ್ ರೋಚ್ ೦ ಮತ್ತು ಅಜಾರಿ ಜೋಸೆಫ್ ಅಜೇಯ 7 ರನ್ ಕಲೆ ಹಾಕಿದರು. ಈ ಮೂಲಕ ವೆಸ್ಟ್ ಇಂಡೀಸ್ 46 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲ್ ಔಟ್ ಆಯಿತು.

ಅಬ್ಬರಿಸಿದ ಕನ್ನಡಿಗರು

ಅಬ್ಬರಿಸಿದ ಕನ್ನಡಿಗರು

ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ವಿಭಾಗದಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡುವುದರ ಮೂಲಕ ಆಪದ್ಬಾಂಧವನಾದರು ಹಾಗೂ ಮತ್ತೋರ್ವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್ ವಿಭಾಗದಲ್ಲಿ ಮಿಂಚುವ ಮೂಲಕ ತಂಡಕ್ಕೆ ಆಸರೆಯಾದರು. ಬ್ಯಾಟಿಂಗ್ ವಿಭಾಗದಲ್ಲಿ ಕೆಎಲ್ ರಾಹುಲ್ 48 ಎಸೆತಗಳಲ್ಲಿ 49 ರನ್ ಬಾರಿಸಿ ತಂಡಕ್ಕೆ ಆಸರೆಯಾದರೆ, 9 ಓವರ್ ಬೌಲಿಂಗ್ ಮಾಡಿ 3 ಮೇಡನ್ ಓವರ್ ಜತೆಗೆ ಕೇವಲ 12 ರನ್ ನೀಡಿದ ಪ್ರಸಿದ್ಧ್ ಕೃಷ್ಣ ವೆಸ್ಟ್ ಇಂಡೀಸ್ ತಂಡದ 4 ವಿಕೆಟ್ ಪಡೆಯುವುದರ ಮಿಂಚಿದರು.

Story first published: Thursday, February 10, 2022, 9:59 [IST]
Other articles published on Feb 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+