IND vs WI: ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಗಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ; ಕೊಹ್ಲಿ ಯಾವಾಗ ಸೇರೋದು?
ಬಹು ಮಾದರಿಯ ಸರಣಿಗಾಗಿ ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು, ಮೊದಲಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಾರ್ಬಡೋಸ್‌ನಲ್ಲಿ ಸೋಮವಾರದಿಂದ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದೆ.
ನಾಯಕ ರೋಹಿತ್ ಶರ್ಮಾ, ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ಈಗಾಗಲೇ ಪ್ರತ್ಯೇಕ ವಿಮಾನಗಳ ಮೂಲಕ ಕೆರಿಬಿಯನ್ ನಾಡಿಗೆ ಬಂದಿಳಿದಿದ್ದಾರೆ.
ಇನ್ನು ಮಂಗಳವಾರದ ವೇಳೆಗೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸೇರಿದಂತೆ ಉಳಿದ ಆಟಗಾರರು ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ. ಬಹು ನಿರೀಕ್ಷಿತ ಭಾರತ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯು ಜುಲೈ 12ರಂದು ಪ್ರಾರಂಭವಾಗಲಿದೆ.

ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಡೊಮಿನಿಕಾಗೆ ತೆರಳುವ ಮುನ್ನ ಬಾರ್ಬಡೋಸ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಒಳಗೊಂಡಿರುವ ಒಂದು ವಾರದ ಅವಧಿಯ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.
ಎಲ್ಲ ಆಟಗಾರರು ಜುಲೈ 3ರೊಳಗೆ ಬಾರ್ಬಡೋಸ್‌ನಲ್ಲಿರುವ ಭಾರತ ತಂಡದ ಶಿಬಿರಕ್ಕೆ ವಾಪಸ್ಸಾಗುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡ್ಡಾಯಗೊಳಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ನಂತರ ಯುರೋಪ್ ಪ್ರವಾಸದಲ್ಲಿದ್ದ ನಾಯಕ ರೋಹಿತ್ ಶರ್ಮಾ ಶನಿವಾರ ಬಾರ್ಬಡೋಸ್‌ಗೆ ಆಗಮಿಸಿದರು.
ಇದೇ ವೇಳೆ ಭಾರತೀಯ ಕಾಲಮಾನದ ಪ್ರಕಾರ, ಮಂಗಳವಾರ ವಿರಾಟ್ ಕೊಹ್ಲಿಯೂ ತಂಡವನ್ನು ಸೇರುವ ನಿರೀಕ್ಷೆಯಿದೆ. ಭಾರತವು ಜುಲೈ 6ರಂದು ಸ್ಥಳೀಯ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಅದು ಪ್ರಥಮ ದರ್ಜೆ ಸ್ಥಾನಮಾನವನ್ನು ಹೊಂದಿರುವುದಿಲ್ಲ.
ಪ್ರಥಮ ದರ್ಜೆ ಪಂದ್ಯಗಳಿಗೆ ಭಾರತ ತಂಡದ ಮ್ಯಾನೇಜ್‌ಮೆಂಟ್ ವಿನಂತಿಯ ಹೊರತಾಗಿಯೂ, ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸುವ ಕೆಲವು ಸ್ಥಳೀಯ ಆಟಗಾರರೊಂದಿಗೆ ಮಿಶ್ರಣ ತಂಡವಾಗಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧಿಕಾರಿಗಳ ಪ್ರಕಾರ, ಟೆಸ್ಟ್ ಸರಣಿಯ ಮೊದಲು ಡೊಮಿನಿಕಾಗೆ ಭಾರತೀಯ ತಂಡವು ತೆರಳುವ ಮುನ್ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ತರಬೇತಿ ಪಡೆಯಲಿದೆ. ಇನ್ನು ವೆಸ್ಟ್ ಇಂಡೀಸ್ ತಂಡವು ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿರುವ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ತಮ್ಮ ಅಭ್ಯಾಸ ಶಿಬಿರವನ್ನು ನಡೆಸಲಿದೆ.
ನಂತರ ವೆಸ್ಟ್ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಡೊಮಿನಿಕಾಗೆ ಪ್ರಯಾಣಿಸಲಿದೆ. ಪ್ರಸ್ತುತ 2023ರ ವಿಶ್ವಕಪ್ ಕ್ವಾಲಿಫೈಯರ್‌ಗಳಲ್ಲಿ ಭಾಗವಹಿಸಿರುವ ಕೆಲವು ಬಹು-ಮಾದರಿಯ ಆಟಗಾರರು ನೇರವಾಗಿ ಡೊಮಿನಿಕಾದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications