For Quick Alerts
ALLOW NOTIFICATIONS  
For Daily Alerts
 

Ind vs WI, 3ನೇ ಟಿ20: ಭಾರತಕ್ಕೆ ಗೆಲ್ಲಲು ಸವಾಲಿನ ಗುರಿ ನೀಡಿದ ವೆಸ್ಟ್ ಇಂಡೀಸ್

ಭಾರತ ಹಾಗೂ ವೆಸ್ಟ್ ಇಂಡೀಸ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಗಯಾನಾದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಂಡೀಸ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿದ್ದು 160 ರನ್‌ಗಳ ಗುರಿ ನಿಗದಿಪಡಿಸಿದೆ. ಬೌಲಿಂಗ್‌ಗೆ ನೆರವು ನೀಡುವ ಪಿಚ್‌ನಲ್ಲಿ ಭಾರತ ಈ ಮೊತ್ತವನ್ನು ಬೆನ್ನಟ್ಟಲಿದೆಯಾ ಎಂಬುದು ಈಗಿನ ಪ್ರಶ್ನೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿತು. ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 7.4 ಓವರ್‌ಗಳಲ್ಲಿ 55 ರನ್‌ಗಳನ್ನು ಕಲೆ ಹಾಕಿ ಬೇರ್ಪಟ್ಟಿತು. ಬ್ರೆಂಡನ್ ಕಿಂಗ್ ಹಾಗೂ ಕೇಲ್ ಮೇಯರ್ಸ್ ಆರಂಭದಲ್ಲಿ ವೇಗವಾಗಿ ರನ್‌ಗಳಿಸುವ ಸೂಚನೆ ನೀಡಿದರಾದರೂ ಅವರ ವೇಗಕ್ಕೆ ತಡೆ ಹಾಕುವಲ್ಲಿ ಭಾರತೀಯ ಸ್ಪಿನ್ನರ್‌ಗಳು ಯಶಸ್ವಿಯಾಗಿದ್ದು ಇಲ್ಲಿ ಗಮನಾರ್ಹ ಅಂಶ. ಕೇಲ್ ಮೇಯರ್ಸ್ 25 ರನ್‌ಗಳಿಸಿದರೆ ಬ್ರೆಂಡನ್ ಕಿಂಗ್ 42 ರನ್‌ಗಳನ್ನು ಗಳಿಸಿದರು.

Ind vs WI: Team India need 160 runs to win against West Indies in 3rd t20I

ಇನ್ನು ಜಾನ್ಸನ್ ಜಾರ್ಲ್ಸ್ 12 ರನ್‌ಗಳಿಸಿ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸುವ ಮೂಲಕ ತನ್ನ ಆಟವನ್ನು ಮುಗಿಸಿದರು. ಇನ್ನು ಪ್ರಚಂಡ ಫಾರ್ಮ್‌ನಲ್ಲಿರುವ ನಿಕೋಲಸ್ ಪೂರನ್ 12 ಎಸೆತಗಳಲ್ಲಿ 20 ರನ್‌ಗಳಸಿದ್ದಾಗ ಕುಲ್‌ದೀಪ್ ಸ್ಪಿನ್ ಮೋಡಿಗೆ ಸ್ಟಂಪ್ ಔಟ್ ಅಗಿ ಫೆವಿಲಿಯನ್‌ಗೆ ಸೇರಿದರು. ಶಿಮ್ರಾನ್ ಹೆಟ್ಮೇಯರ್ ಅವರನ್ನು ಕೂಡ ಒಂದಂಕಿಗೆ ಔಟ್ ಮಾಡುವಲ್ಲಿ ಭಾರತ ಯಶಸ್ವಿಯಾದರು ಕೂಡ ಕೊನೆಯ ಹಂತದಲ್ಲಿ ನಾಯಕ ರೋವ್ಮನ್ ಪೋವೆಲ್ ಅಬ್ಬರಿಸಿದರು. ಪೋವೆಲ್ ಕೇವಲ 19 ಎಸೆತಗಳಲ್ಲಿ 40 ರನ್‌ಗಳಿಸಿದರು. ಹೀಗಾಗಿ ವೆಸ್ಟ್ ಇಂಡೀಸ್ ತಂಡ 159 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಬೌಲಿಂಗ್‌ನಲ್ಲಿ ಅಬ್ಬರಿಸಿದ್ದು ಕುಲ್‌ದೀಪ್ ಯಾದವ್. ನಾಲ್ಕು ಓವರ್‌ಗಳ ಬೌಲಿಂಗ್ ದಾಳಿಯಲ್ಲಿ ಕುಲ್‌ದೀಪ್ ಯಾದವ್ ಕಢವಲ 28 ರನ್‌ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಒಂದು ವಿಕೆಟ್ ಅಕ್ಷರ್ ಪಟೇಲ್ ಹಾಗೂ ಮತ್ತೊಂದು ವಿಕೆಟ್ ಮುಕೇಶ್ ಕುಮಾರ್ ಪಾಲಾಗಿದೆ

ವೆಸ್ಟ್ ಇಂಡೀಸ್ ಆಡುವ ಬಳಗ: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರೊಮಾರಿಯೋ ಶೆಫರ್ಡ್, ರೋಸ್ಟನ್ ಚೇಸ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್

ಬೆಂಚ್: ಶಾಯ್ ಹೋಪ್, ಒಶಾನೆ ಥಾಮಸ್,ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್

ಟೀಮ್ ಇಂಡಿಯಾ ಆಡುವ ಬಳಗ: ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ಮುಖೇಶ್ ಕುಮಾರ್, ಕುಲದೀಪ್ ಯಾದವ್
ಬೆಂಚ್: ಉಮ್ರಾನ್ ಮಲಿಕ್, ಅವೇಶ್ ಖಾನ್, ರವಿ ಬಿಷ್ಣೋಯ್

Story first published: Tuesday, August 8, 2023, 21:44 [IST]
Other articles published on Aug 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+