Ind vs WI: ಕುಲ್ದೀಪ್ ಯಾದವ್, ಇಶಾನ್ ಕಿಶನ್ ಭರ್ಜರಿ ಆಟ: ಭಾರತಕ್ಕೆ 5 ವಿಕೆಟ್‌ಗಳ ಗೆಲುವು
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ನೀಡಿದ 115 ರನ್‌ಗಳ ಸುಲಭ ಸವಾಲನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕೆಲ ವಿಕೆಟ್‌ಗಳನ್ನು ಅಗ್ಗಕ್ಕೆ ಕಳೆದುಕೊಂಡರೂ ಸುಲಭವಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮುನ್ನಡೆ ಸಾಧಿಸಿದೆ.
ಸ್ಪಿನ್ನರ್‌ಗಳಿಗೆ ಅದ್ಭುತವಾಗಿ ನೆರವು ನೀಡುತ್ತಿದ್ದ ಈ ಪಿಚ್‌ನಲ್ಲಿ ಎರಡು ತಂಡಗಳ ಬ್ಯಾಟರ್‌ಗಳು ಕೂಡ ರನ್‌ಗಳಿಸಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಸುಲಭ ಗುರಿಯನ್ನು ಪಡೆದುಕೊಂಡಿದ್ದ ಟೀಮ್ ಇಂಡಿಯಾ ಪರವಾಗಿ ಈ ಪಂದ್ಯದಲ್ಲಿ ಆರಂಬಿಕರಾಗಿ ಇಶಾನ್ ಕಿಶನ್ ಹಾಗೂ ಶುಬ್ಮನ್ ಗಿಲ್ ಕಣಕ್ಕಿಳಿದರು. ಆದರೆ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ 7 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿದಿದ್ದು 19 ರನ್‌ಗಳ ಕೊಡುಗೆ ನೀಡಲು ಮಾತ್ರವೇ ಯಶಸ್ವಿಯಾದರು.

ಇನ್ನು ನಂತರ ಬಂದ ಹಾರ್ದಿಕ್ ಪಾಂಡ್ಯ 5 ರನ್‌ಗಳನ್ನು ಗಳಿಸಿ ಔಟಾದರೆ ಅರ್ಧ ಶತಕ ಸಿಡಿಸಿದ ಇಶಾನ್ ಕಿಶನ್ ಅರ್ಧ ಶತಕ ಸಿಡಿಸಿದ್ದು 46 ಎಸೆತಗಳಲ್ಲಿ 52 ರನ್‌ಗಳನ್ನು ವಿಕೆಟ್ ಕಳೆದುಕೊಂಡರು. ನಂತರ ಶಾರ್ದೂಕ್ ಠಾಕೂರ್ 1 ರನ್‌ಗೆ ವಿಕೆಟ ಕಳೆದುಕೊಂಡರು. ಬಳಿಕ ರವೀಂದ್ರ ಜಡೇಜಾ ಹಾಗೂ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
ಇನ್ನು ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ವಿಂಡೀಸ್ ಪಡೆ ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನ ನೀಡಿತು. ಟೀಮ್ ಇಂಡಿಯಾದ ಶಿಸ್ತಿನ ಬೌಲಿಂಗ್ ದಾಳಿಯ ವಿರುದ್ಧ ವೆಸ್ಟ್ ಇಂಡಿಸ್ ತಂಡದ ಯಾವ ದಾಂಡಿಗ ಕೂಡ ನೆಲೆಯೂರಲು ವಿಫಲವಾಗಿದ್ದು ಕೇವಲ 23 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಗಿದ್ದರು.
ವೆಸ್ಟ್ ಇಂಡೀಸ್ ವಿರುದ್ಧ ಆರಂಭದಿಂದಲೇ ಟೀಮ್ ಇಂಡಿಯಾ ಮೇಲುಗೈ ಸಾಧಿಸುತ್ತಾ ಸಾಗಿತು. ನಾಯಕ ಶಾಯ್ ಹೋಪ್ ಮಾತ್ರವೇ ತಂಡದ ಪರವಾಗಿ ಕೆಲ ಕಾಲ ಹೋರಾಟದ ಪ್ರದರ್ಶನ ನೀಡಿದ್ದು 43 ರನ್‌ಗಳನ್ನು ಗಳಿಸಿದರು.ಉಳಿದಂತೆ ಅಲಿಕ್ ಅತನಜೆ ಅವರ 22 ರನ್ ತಂಡದ ಪರ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಎನಿಸಿಕೊಂಡಿದೆ.
ಇನ್ನು ಟೀಮ್ ಇಂಡಿಯಾ ಪರವಾಗಿ ಕುಲ್‌ದೀಪ್ ಯಾದವ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದು ಕೇವಲ 6 ರನ್‌ಗಳನ್ನು ನೀಡಿ 4 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ರವೀಂದ್ರ ಜಡೇಜಾ ಮೂರು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು ಉಮ್ರಾನ್ ಮಲಿಕ್ ಹೊರತುಪಡಿಸಿದರೆ ಉಳಿದ ಎಲ್ಲಾ ಬೌಲರ್‌ಗಳು ಕೂಡ ಒಂದೊಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದೇ ಮೊದಲ ಪಂದ್ಯವನ್ನಾಡುತ್ತಿರುವ ಮುಕೇಶ್ ಕುಮಾರ್ ಅಲಿಕ್ ಅತನಜೆ ವಿಕೆಟ್ ಪಡೆಯುವ ಮೂಲಕ ಚೊಚ್ಚಲ ಏಕದಿನ ವಿಕೆಟ್ ಸಂಪಾದಿಸಿದರು.
ವೆಸ್ಟ್ ಇಂಡೀಸ್ ಆಡುವ ಬಳಗ: ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಅಲಿಕ್ ಅಥಾನಾಜೆ, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ರೊಮಾರಿಯೊ ಶೆಫರ್ಡ್, ಯಾನಿಕ್ ಕ್ಯಾರಿಯಾ, ಡೊಮಿನಿಕ್ ಡ್ರೇಕ್ಸ್, ಜೇಡನ್ ಸೀಲ್ಸ್, ಗುಡಾಕೇಶ್ ಮೋಟಿ
ಬೆಂಚ್: ಕೀಸಿ ಕಾರ್ಟಿ, ಅಲ್ಜಾರಿ ಜೋಸೆಫ್, ಒಶಾನೆ ಥಾಮಸ್, ಕೆವಿನ್ ಸಿಂಕ್ಲೇರ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್
ಬೆಂಚ್: ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್, ಜಯದೇವ್ ಉನದ್ಕತ್, ಅಕ್ಷರ್ ಪಟೇಲ್, ಋತುರಾಜ್ ಗಾಯಕ್ವಾಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications