Ind vs WI: ವಿಭಿನ್ನ ರೀತಿಯಲ್ಲಿ ಕ್ಯಾಚ್ ಅಭ್ಯಾಸ ಮಾಡಿದ ಟೀಮ್ ಇಂಡಿಯಾ: ವಿಡಿಯೋ ನೋಡಿ
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸರಣಿಯ ಮೊದಲ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ ಡೆಮೆನಿಕಾಗೆ ತೆರಳಿದ್ದು ಕೊನೆಯ ಹಂತದ ಅಭ್ಯಾಸಗಳನ್ನು ನಡೆಸುತ್ತಿದೆ. ಆತಿಥೆಯ ವೆಸ್ಟ್ ಇಂಡಿಸ್ ವಿರುದ್ಧ ಸರ್ವ ರೀತಿಯ ಸವಾಲನ್ನು ಎದುರಿಸಲೂ ಟೀಮ್ ಇಂಡಿಯಾ ಸಿದ್ಧವಾಗುತ್ತಿದೆ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಟಗಾರರು ವಿಭಿನ್ನವಾಗಿ ಫಿಲ್ಡಿಂಗ್ ಅಭ್ಯಾಸ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಇಶಾನ್ ಕಿಶನ್ ಮತ್ತು ಅಜಿಂಕ್ಯಾ ರಹಾನೆ ಮತ್ತು ಇನ್ನೂ ಕೆಲ ಆಟಗಾರರು ಡಿಸ್ಕ್‌ವೊಂದನ್ನು ಹಾರಿಸಿ ಅದನ್ನು ಒಂದು ಕೈನಲ್ಲಿ ಹಿಡಿಯುವ ಮೂಲಕ ಅಭ್ಯಾಸ ಮಾಡಿದ್ದಾರೆ. ಈ ಆಟಗಾರರು ತ್ರಿಕೋನದ ಡಿಸ್ಕ್ ಮೂಲಕ ಈ ಕ್ಯಾಚ್ ಅಭ್ಯಾಸ ಮಾಡಿದ್ದು ಇದರ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿದ ನಂತರ ಟೀಮ್ ಇಂಡಿಯಾ ಈ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮತ್ತು ಅಜಿಂಕ್ಯ ರಹಾನೆ ಸೇರಿದಂತೆ ಹಿರಿಯ ಆಟಗಾರರು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುತ್ತಿದ್ದು ಉತ್ತಮ ಪ್ರದರ್ಶನವನ್ನು ನಿರೀಕ್ಚಿಸಲಾಗುತ್ತಿದೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನೂತನ ಆವೃತ್ತಿಗೆ ಟೀಮ್ ಇಂಡಿಯಾದ ಅಭಿಯಾನ ಈ ಮೂಲಕ ಆರಂಭವಾಗಲಿದೆ.
ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು ಎಲ್ಲಾ ಮಾದರಿಯಲ್ಲಿಯೂ ಸರಣಿಯನ್ನಾಡಲಿದೆ. ಮೊದಲಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು ಜುಲೈ 12ರಿಂದ ಈ ಸರಣಿ ಆರಂಭಗೊಳ್ಳಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಅನುಭವಿ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಯಿದೆ.
ಟೀಮ್ ಇಂಡಿಯಾ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications