Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind Vs WI Test: ಅಶ್ವಿನ್ ಮೋಡಿಗೆ ಮಕಾಡೆ ಮಲಗಿದ ವಿಂಡೀಸ್: ಭಾರತಕ್ಕೆ ಭಾರಿ ಗೆಲುವು

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಸೋಲಿನ ಕಹಿಯೊಂದಿಗೆ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭಿಸಿದ ಭಾರತ ತಂಡ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದೆ. ವೆಸ್ಟ್ ಇಂಡೀಸ್ ವಿರುದ್ದ ಅವರ ನೆಲದಲ್ಲೇ ಇನ್ನಿಂಗ್ಸ್ ಮತ್ತು 141 ರನ್‌ಗಳ ಗೆಲುವು ಸಾಧಿಸಿದೆ.

ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಗಳ ದಾಳಿಗೆ ವಿಂಡೀಸ್ ಪಡೆ ಕಂಗಾಲಾಯಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು.

 Ind Vs WI Test: Ashwins 12 Wickets Drive India To Innings Victory, Leading 1-0 In Series

ಮೊದಲ ಇನ್ನಿಂಗ್ಸ್‌ನಲ್ಲೇ ವಿಂಡೀಸ್ ಬ್ಯಾಟಿಂಗ್ ಪಡೆ ಭಾರತದ ಸ್ಪಿನ್ ದಾಳಿಗೆ ನಲುಗಿತು. ಕೇವಲ 130 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಅಶ್ವಿನ್, ಜಡೇಜಾ ವಿಂಡೀಸ್ ಬ್ಯಾಟರ್ ಗಳನ್ನು ಕಂಗೆಡಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಅಶ್ವಿನ್ ವಿಂಡೀಸ್ ವಿರುದ್ಧ ಮಿಂಚು ಹರಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ 21.3 ಓವರ್ ಬೌಲಿಂಗ್ ಮಾಡಿದ ಅಶ್ವಿನ್ 71 ರನ್ ನೀಡಿ 7 ವಿಕೆಟ್ ಪಡೆದರು. ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದು ಮಿಂಚಿದರು.

ರೋಹಿತ್-ಜೈಸ್ವಾಲ್ ಶತಕ

ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ಬೃಹತ್ ಮೊತ್ತ ಕಲೆಹಾಕಿತು. 421 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿದ್ದಲ್ಲದೆ ಅಮೋಘ ಶತಕ (103) ಸಿಡಿಸಿದರು. ಭಾರತದ ಪರವಾಗಿ ಚೊಚ್ಚಲ ಪಂದ್ಯವನ್ನಾಡಿದ ಯಶಸ್ವೀ ಜೈಸ್ವಾಲ್ ಮಿಂಚು ಹರಿಸಿದರು.

ಮೊದಲ ಪಂದ್ಯದಲ್ಲೇ 16 ಬೌಂಡರಿ ಒಂದು ಸಿಕ್ಸರ್ ಸಹಿತ 171 ರನ್ ಗಳಿಸಿದ ಅವರು ಹಲವು ದಾಖಲೆಗಳನ್ನು ಬರೆದರು. ವಿರಾಟ್ ಕೊಹ್ಲಿ ಕೂಡ 76 ರನ್ ಗಳಿಸಿ ಬೃಹತ್ ಮೊತ್ತ ಗಳಿಸಲು ಸಹಾಯ ಮಾಡಿದರು. ರವೀಂದ್ರ ಜಡೇಜಾ ಅಜೇಯ 37 ರನ್ ಗಳಿಸಿದರು. 5 ವಿಕೆಟ್ ಕಳೆದುಕೊಂಡು 421 ರನ್ ಗಳಿಸಿದ್ದಾಗ ಭಾರತ 291 ರನ್‌ಗಳ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿತು.

ಅಶ್ವಿನ್-ಜಡೇಜಾ ಸ್ಪಿನ್ ಅಸ್ತ್ರ

ಎರಡನೇ ಇನ್ನಿಂಗ್ಸ್‌ನಲ್ಲೂ ವಿಂಡೀಸ್ ಬ್ಯಾಟರ್ ಗಳಿದೆ ಅಶ್ವಿನ್-ಜಡೇಜಾ ಮಾರಕವಾದರು. ಅಶ್ವಿನ್ 5 ವಿಕೆಟ್ ಪಡೆದರೆ, ಜಡೇಜಾ 3 ವಿಕೆಟ್ ಪಡೆದರು. ಜಯದೇವ್ ಉನಾದ್ಕತ್ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.

150 ರನ್ ಗಳಿಸುವಷ್ಟರಲ್ಲಿ ವೆಸ್ಟ್ ಇಂಡೀಸ್ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯಶಸ್ವೀ ಜೈಸ್ವಾಲ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಭಾರತ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು ಸರಣಿಯ ಕೊನೆಯ ಟೆಸ್ಟ್ ಜುಲೈ 20ರಂದು ಟ್ರಿನಿಡಾಡ್‌ನಲ್ಲಿ ನಡೆಯಲಿದೆ.

Story first published: Saturday, July 15, 2023, 8:19 [IST]
Other articles published on Jul 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+