Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs WI: ಎರಡನೇ ಏಕದಿನ ಪಂದ್ಯದಲ್ಲಿ ಫ್ಲಾಪ್ ಆದ ಟೀಮ್ ಇಂಡಿಯಾ ಸ್ಟಾರ್‌ಗಳು ಇವರೇ!!

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಭರ್ಜರಿಯಾಗಿ ಗೆದ್ದು ಆತ್ಮವಿಶ್ವಾಸದಿಂದಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ವಿಚಿತ್ರ ಪ್ರಯೋಗಕ್ಕೆ ಮುಂದಾಗಿ ಸೋಲು ಕಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದ್ದು ಈ ಸೋಲಿಗೆ ಪ್ರಮುಖ ಕಾರಣವಾಯಿತು.

ಇನ್ನು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದರು. ಹೀಗಾಗಿ ತಂಡದ ಉಳಿದ ಆಟಗಾರರ ಮೇಲೆ ಹೆಚ್ಚಿನ ಜವಾಬ್ಧಾರಿಯಿತ್ತು. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾದ ಕಾರಣ ಟೀಮ್ ಇಂಡಿಯಾ ಈ ಆಘಾತಕಾರಿ ಸೋಲು ಕಾಣುವಂತಾಗಿದೆ. ಹಾಗಾದರೆ ಈ ಪಂದ್ಯದಲ್ಲಿ ಸಂಪೂರ್ಣ ವಿಫಲವಾದ ಮೂವರು ಪ್ರಮುಖ ಆಟಗಾರರು ಯಾರು ಇಲ್ಲಿದೆ ಮಾಹಿತಿ ಮುಂದೆ ಓದಿ..

Ind vs WI: These 3 Indian cricketers flopped in 2nd ODI against West Indies

ಹಾರ್ದಿಕ್ ಪಾಂಡ್ಯ

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿದ್ದು ಹಾರ್ದಿಕ್ ಪಾಂಡ್ಯ. ಆದರೆ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡ ಹಂಗಾಮಿ ನಾಯಕ ಹಾರ್ದಿಕ್‌ಗೆ ನಂತರ ಸಂಕಷ್ಟಕಳು ಎದುರಾಯಿತು. ಮೊದಲ ವಿಕೆಟ್‌ಗೆ ಟೀಮ್ ಇಂಡಿಯಾ 90 ರನ್‌ಗಳ ಅದ್ಭುತ ಆರಂಭ ಪಡೆದುಕೊಂಡ ಬಳಿಕ ಮೂರು ಓವರ್‌ಗಳ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಾಗ ಹಾರ್ದಿಕ್ ಮೇಲೆ ಹೆಚ್ಚಿನ ಜವಾಬ್ಧಾರಿಯಿತ್ತು. ಆದರೆ ಈ ಜವಾಬ್ಧಾರಿಯನ್ನು ನಿರ್ವಹಿಸಲು ಹಾರ್ದಿಕ್ ವಿಫಲವಾದರು. ಹಾರ್ಡ್ ಲೆಂತ್ ಎಸೆತ ಹಾರ್ದಿಕ್‌ಗೆ ಇಲ್ಲಿ ಮತ್ತೊಮ್ಮೆ ಆಘಾತ ನೀಡಿದ್ದು ಫುಲ್ ಮಾಡಲು ಹೋಗಿ ಹಾರ್ದಿಕ್ ವಿಕೆಟ್ ಕಳೆದುಕೊಂಡರು. 14 ಎಸೆತ ಎದುರಿಸಿದ ಹಾರ್ದಿಕ್ ಪಾಂಡ್ಯ ಗಳಿಸಿದ್ದು 7 ರನ್‌ಗಳನ್ನು ಮಾತ್ರ.

ಸಂಜು ಸ್ಯಾಮ್ಸನ್

ಸಾಕಷ್ಟು ಸಮಯಗಳ ಬಳಿಕ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದರು. ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕು ಎಂದು ಅವರ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಒತ್ತಾಯಿಸುತ್ತಿದ್ದರೂ ಮೊದಲ ಪಂದ್ಯದಲ್ಲಿ ಅವಕಾಶ ಪಡೆಯದ ಕಾರಣ ಎರಡನೇ ಪಂದ್ಯದಲ್ಲಿಯೂ ಸಂಜುಗೆ ಅವಕಾಶ ದೊರೆಯುವ ಸಾಧ್ಯತೆ ಬಹಳ ಕಡಿಮೆಯಿತ್ತು. ಆದರೆ ಕೊಹ್ಲಿ ಹಾಗೂ ರೋಹಿತ್ ಆಡುವ ಬಳಗದಿಂದ ಹೊರಗುಳಿಯಲು ನಿರ್ಧರಿಸಿದ ಕಾರಣ ಸಂಜು ಸ್ಯಾಮ್ಸನ್‌ಗೆ ಈ ಪಂದ್ಯದಲ್ಲಿ ಅವಕಾಶ ದೊರೆಯಿತು.

ಆದರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಂಜು ಸ್ಯಾಮ್ಸನ್ ಮತ್ತೊಮ್ಮೆ ವಿಫಲವಾಗಿದ್ದಾರೆ. 17ನೇ ಓವರ್‌ನಲ್ಲಿ ಶುಬ್ಮನ್ ಗಿಲ್ ಹಾಗೂ ಇಶಾನ್ ಕಿಶನ್ 90 ರನ್‌ಗಳ ಅದ್ಭುತ ಜೊತೆಯಾದ ನೀಡಿದ ಬಳಿಕ ಕಣಕ್ಕಿಳಿದ ಸಂಜು ಸ್ಯಾಮ್ಸನ್ 19 ಎಸೆತಗಳನ್ನು ಎದುರಿಸಿದ್ದು 9 ರನ್‌ಗಳನ್ನು ಮಾತ್ರವೇ ಗಳಿಸಲು ಸಫಲವಾದರು. ಸಂಜು ಅವರ ಈ ವೈಫಲ್ಯ ಕೂಡ ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣವಾಯಿತು.

ಉಮ್ರಾನ್ ಮಲಿಕ್

ವೇಗದ ಬೌಲರ್ ಆಗಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಆಟಗಾರ ಉಮ್ರಾನ್ ಮಲಿಕ್. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಮ್ರಾನ್ ಮಲಿಕ್ ಅವರಿಂದ ನಿರೀಕ್ಷಿತ ಪ್ರದರ್ಶನ ಈವರೆಗೆ ಬಂದಿಲ್ಲ. ಮೊದಲ ಪಂದ್ಯದಲ್ಲಿ ಕೇವಲ ಮೂರು ಓವರ್‌ಗಳ ಬೌಲಿಂಗ್ ನಡೆಸಿದ್ದ ಇವರು ಎರಡನೇ ಪಂದ್ಯದಲ್ಲಿ ಬಲು ದುಬಾರಿಯೆನಿಸಿದರು. ಈ ಪಂದ್ಯದಲ್ಲಿಯೂ ಉಮ್ರಾನ್ ಮೂರು ಓವರ್‌ಗಳ ಬೌಲಿಂಗ್ ಮಾತ್ರವೇ ನಡೆಸಿದ್ದರೂ ಇಲ್ಲಿ ಬರೊಬ್ಬರಿ 27 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಉಮ್ರಾನ್ ಮಲಿಕ್ ಅವರನ್ನು 'X ಫ್ಯಾಕ್ಟರ್' ಎಂದು ನೋಡಲಾಗುತ್ತಿದ್ದು ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಲು ಆಯ್ಕೆ ಮಂಡಳಿ ಉತ್ಸಾಹ ತೋರಿದಂತಿದೆ. ಆದರೆ ಅದು ಸಾಧ್ಯವಾಗಬೇಕಿದ್ದರೆ ಈ ಅವಕಾಶವನ್ನು ಅವರು ಅದ್ಭುತವಾಗಿ ಬಳಸಿಕೊಳ್ಳಬೇಕಾಗಿತ್ತು.

Story first published: Sunday, July 30, 2023, 10:29 [IST]
Other articles published on Jul 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+