ಭಾರತ vs ವಿಂಡೀಸ್: ತಮ್ಮ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಬೇಕಿದೆ ಈ 3 ಭಾರತೀಯರು!

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧದ ವೈಟ್‌ಬಾಲ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನಿಡಿರುವ ಆತ್ಮವಿಶ್ವಾಸದಲ್ಲಿರುವ ಭಾರತ ಈ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಿಂದ ಗೆಲುವು ಸಾಧಿಸಿ ಇದೀಗ ಕೆರಿಬಿಯನ್ ನಾಡಿಗೆ ಕಾಲಿಟ್ಟಿದೆ.
ಆದರೆ ಈ ಸರಣಿ ಭಾರತದ ಕೆಲ ಆಟಗಾರರ ಪಾಲಿಗೆ ಅಗ್ನಿ ಪರೀಕ್ಷೆಯ ಸರಣಿಯೂ ಹೌದು. ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ಸಾಕಷ್ಟು ಆಟಗಾರರು ಪೈಪೋಟಿ ನಡೆಸುತ್ತಿರುವ ಸಂದರ್ಭದಲ್ಲಿ ಭವಿಷ್ಯದಲ್ಲಿ ಭಾರತದ ತಂಡದಲ್ಲಿ ಸ್ಥಾನವನ್ನು ಭದ್ರಗೊಳಿಸಬೇಕಿದ್ದರೆ ಈ ಆಟಗಾರರು ತಮ್ಮ ಸಾಮರ್ಥ್ಯವನ್ನು ಮತ್ತೆ ಸಾಬಿತುಪಡಿಸಬೇಕಿದೆ. ಹಾಗಿದ್ದರೆ ಮಾತ್ರವೇ ಏಕದಿನ ತಂಡದಲ್ಲಿ ಈ ಆಟಗಾರರು ಮುಂದುವರಿಯಲು ಅವಕಾಶವಿದೆ.
ಹಾಗಾದರೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಒತ್ತಡದಲ್ಲಿರುವ ಆ ಮೂವರು ಆಟಗಾರರು ಯಾರು? ಮುಂದೆ ಓದಿ..

ಆಲ್‌ರೌಂಡರ್ ಅಕ್ಷರ್ ಪಟೇಲ್
ಅಕ್ಷರ್ ಪಟೇಲ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಿ ಮಿಂಚಿರುವ ಕ್ರಿಕೆಟಿಗ. ತಮ್ಮ ಆಲ್‌ರೌಂಡರ್ ಸಾಮರ್ಥ್ಯದಿಂದಾಗಿ ಭಾರತ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ರವೀಂದ್ರ ಜಡೇಜಾ ತಂಡದಲ್ಲಿರುವ ಕಾರಣ ಅಕ್ಷರ್ ಹೆಚ್ಚಿನ ಕಾಲ ಬೆಂಚ್ ಕಾದು ಕಾಲ ಕಳೆದಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದ ಸಂದರ್ಭದಲ್ಲಿಯೂ ಅಕ್ಷರ್ ಜಡೇಜಾ ಜೊತೆಗೆ ಹೆಚ್ಚುವರಿ ಬೌಲಿಂಗ್ ಆಯ್ಕೆಯಾಗಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.

ಅಕ್ಷರ್‌ಗೆ ಮತ್ತೊಂದು ಅವಕಾಶ
ಆದರೆ ಸಿಕ್ಕ ಅವಕಾಶದಲ್ಲಿ ಏಕದಿನ ಮಾದರಿಯಲ್ಲಿ ಮಿಂಚಲು ಅಕ್ಷರ್ ವಿಪಲವಾಗಿದ್ದಾರೆ. 38 ಏಕದಿನ ಪಂದ್ಯಗಳಲ್ಲಿ ಅಕ್ಷರ್ ಪಟೇಲ್ 45 ವಿಕೆಟ್ ಪಡೆದುಕೊಂಡಿದ್ದರೆ 181 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿದ್ದಾರೆ. ಬೌಲಿಂಗ್‌ನಲ್ಲಿ ಕುಲ್ದಿಪ್ ಯಾದವ್, ರವಿ ಬಿಶ್ನೋಯ್ ಅವರಂತಾ ಆಯ್ಕಗಳಿದ್ದರೂ ಅಕ್ಷರ್‌ಗೆ ಮತ್ತೊಂದು ಅವಕಾಶ ದೊರೆತಿದೆ. ಈ ಅವಕಾಶವನ್ನು ಪಟೇಲ್ ಉತ್ತಮವಾಗಿ ಬಳಸಿಕೊಳ್ಳಬೇಕಿದೆ.

ಅನುಭವಿ ಶಿಖರ್ ಧವನ್
ಶಿಖರ್ ಧವನ್ ಸದ್ಯ ಭಾರತದ ಏಕದಿನ ಮಾದರಿಯಲ್ಲಿ ಮಾತ್ರವೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧವನ್ ನಿರಾಸೆ ಮೂಡಿಸಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲಿ ಧವನ್ ಗಳಿಸಿದ್ದು ಕೇವಲ 41 ರನ್ ಮಾತ್ರ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹೊತ್ತಿರುವ ಧವನ್ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕಿದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ಕೂಡ ನಡೆಯಲಿರುವ ಕಾರಣ ಈ ಪ್ರತಿಷ್ಟಿತ ಟೂರ್ನಿಯಲ್ಲಿ ಭಾರತ ತಂಡವನ್ನು ಧವನ್ ಪ್ರತಿನಿಧಿಸಬೇಕಾದರೆ ತಮ್ಮ ಫಾರ್ಮ್‌ಅನ್ನು ಪ್ರದರ್ಶಿಸುವ ಅನಿವಾರ್ಯತೆಯಿದೆ.

ಪ್ರತಿಭಾವಂತ ಶ್ರೇಯಸ್ ಐಯ್ಯರ್
ಶ್ರೇಯಸ್ ಐಯ್ಯರ್ ಭಾರತದ ಪ್ರತಿಭಾವಂತ ಆಟಗಾರರ ಪೈಕಿ ಒಬ್ಬರು. ಸಾಕಷ್ಟು ಪಂದ್ಯಗಳಲ್ಲಿ ಐಯ್ಯರ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇತ್ತೀಚೆಗೆ ಟೆಸ್ಟ್ ತಂಡದಲ್ಲಿಯೂ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಐಯ್ಯರ್. ಆದರೆ ಶಾರ್ಟ್ ಎಸೆತಗಳಿಗೆ ಶ್ರೇಯಸ್ ಐಯ್ಯರ್ ಅತ್ಯಂತ ಸುಲಭವಾಗಿ ವಿಕೆಟ್ ಕಳೆದುಕೊಳ್ಳುತ್ತಿರುವುದು ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಅವರ ವಿರುದ್ಧ ರಣತಂತ್ರವನ್ನು ಎದರಾಳಿಗಳು ಸುಲಭವಾಗಿ ಹೆಣೆದು ಯಶಸ್ಸು ಸಾಧಿಸುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಹೂಡಾ ಅಮೋಘ ಆಟವನ್ನು ಪ್ರದರ್ಶಿಸುತ್ತಿರುವ ಕಾರಣ ಶ್ರೇಯಸ್ ಐಯ್ಯರ್ ಈ ಸ್ಪರ್ಧೆಯಲ್ಲಿ ಹಿಮದುಳಿಯುತ್ತಿದ್ದಾರೆ. ಇದೀಗ ಶ್ರೇಯಸ್ ಐಯ್ಯರ್‌ಗೆ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶ ದೊರೆತಿದೆ. ಇದನ್ನು ಅವರು ಯಾವ ರೀತಿಯಾಗಿ ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications