IND vs WI: ಭಾರತದ ಈ ಮೂವರು ಯುವ ಆಟಗಾರರನ್ನು ಭೇಟಿಯಾದ ವಿಶ್ವಸುಂದರಿ; ಫೋಟೋ ವೈರಲ್
ಭಾರತೀಯ ಕ್ರಿಕೆಟ್ ತಂಡವು ಸದ್ಯ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು, ಕೆರಿಬಿಯನ್ ನಾಡಿನಲ್ಲಿ ಮೂರು ಸ್ವರೂಪದ ಸರಣಿಗಳನ್ನು ಆಡಲು ತೆರಳಿದೆ ಮತ್ತು ಟೆಸ್ಟ್ ಸರಣಿಯ ಕೊನೆಯ ಪಂದ್ಯವಾಡುತ್ತಿದೆ.
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಡುವೆ ಭಾರತ ತಂಡದ ಕೆಲವು ಆಟಗಾರರನ್ನು ಟ್ರಿನಿಡಾಡ್ & ಟೊಬಾಗೊ ವಿಶ್ವ ಸುಂದರಿ ಆಚೆ ಅಬ್ರಹಾಮ್ಸ್ ಅವರು ಭೇಟಿಯಾಗಿ ಮಾತನಾಡಿದರು.

ಇದೇ ವೇಳೆ ವಿಶ್ವ ಸುಂದರಿ ಆಚೆ ಅಬ್ರಹಾಮ್ಸ್ ಜೊತೆಗಿನ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
ಇನ್ನು ಆಚೆ ಅಬ್ರಹಾಮ್ಸ್ ಅವರೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾರತೀಯ ಆಟಗಾರರ ಭೇಟಿಯ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಕೆಲವು ಭಾರತೀಯ ಕ್ರಿಕೆಟಿಗರ ಅಭಿಮಾನಿಗಳ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಹರಿದಾಡುತ್ತಿವೆ.
ಭಾರತೀಯ ಯುವ ಆಟಗಾರರಾದ ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರೊಂದಿಗೆ ಮಾತುಕತೆ ನಡೆಸುವ ಆಚೆ ಅಬ್ರಹಾಮ್ಸ್ ಪಡೆದರು. ಅವರು ಭಾರತ ತಂಡದ ಯುವ ಆಟಗಾರರ ಜೊತೆಗಿನ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಹಂಚಿಕೊಂಡ ಆಚೆ ಅಬ್ರಹಾಮ್ಸ್ ""ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರರನ್ನು ಇಲ್ಲಿಯೇ ಸುಂದರ ಟ್ರಿನಿಡಾಡ್ & ಟೊಬಾಗೊದಲ್ಲಿ ಭೇಟಿಯಾಗಿದ್ದು ನನಗೆ ತುಂಬಾ ಸಂತೋಷವಾಯಿತು! ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರ ಉತ್ಸಾಹವನ್ನು ನೋಡುವುದು ತುಂಬಾ ಸುಂದರವಾಗಿದೆ. ನಾನು ಈ ವರ್ಷದ ನಂತರ ಭಾರತಕ್ಕೆ ಹೋಗುತ್ತಿರುವ ಬಗ್ಗೆ ನನ್ನ ಆಸೆಯನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ,'' ಎಂದು ಬರೆದುಕೊಂಡಿದ್ದಾರೆ.
ಇನ್ನು 2ನೇ ಟೆಸ್ಟ್ ಪಂದ್ಯಕ್ಕೆ ಸಂಬಂಧಿಸಿದಂತೆ, ರವೀಂದ್ರ ಜಡೇಜಾ 2 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಮುಖೇಶ್ ಕುಮಾರ್ ಅವರು ತಲಾ ಒಂದೊಂದು ವಿಕೆಟ್ ಪಡೆದು ವೆಸ್ಟ್ ಇಂಡೀಸ್ ತಂಡವನ್ನು ನಿಯಂತ್ರಣಗೊಳಿಸಲು ಸಹಾಯ ಮಾಡಿದರು.
ವೆಸ್ಟ್ ಇಂಡೀಸ್ ತಂಡ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮೂರನೇ ದಿನದಾಟದ ಅಂತ್ಯದಲ್ಲಿ 229 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಅಲಿಕ್ ಅಥಾನಾಜೆ 37 ರನ್ ಮತ್ತು ಜೇಸನ್ ಹೋಲ್ಡರ್ 11 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತದ ಪರ ಚೊಚ್ಚಲ ಪಂದ್ಯವಾಡುತ್ತಿರುವ ಮುಖೇಶ್ ಕುಮಾರ್ ಅವರು ತಮ್ಮ ಚೊಚ್ಚಲ ವಿಕೆಟ್ ಪಡೆದರು. ವೆಸ್ಟ್ ಇಂಡೀಸ್‌ನ ಕಿರ್ಕ್ ಮೆಕ್‌ಕಿಂಜೆ ಅವರು 32 ರನ್ ಗಳಿಸಿದ್ದಾಗ ವಿಕೆಟ್‌ಕೀಪರ್ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿದರು.
ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 438 ರನ್‌ಗಳಿಗೆ ಆಲೌಟ್ ಆಗಿತ್ತು. ವಿರಾಟ್ ಕೊಹ್ಲಿ ಭರ್ಜರಿ ಶತಕ (121 ರನ್) ಮತ್ತು ನಾಯಕ ರೋಹಿತ್ ಶರ್ಮಾ (80 ರನ್), ಯಶಸ್ವಿ ಜೈಸ್ವಾಲ್ (57 ರನ್), ರವೀಂದ್ರ ಜಡೇಜಾ (61 ರನ್) ಮತ್ತು ರವಿಚಂದ್ರನ್ ಅಶ್ವಿನ್ (56 ರನ್) ಅವರ ಅರ್ಧಶತಕಗಳು ಭಾರತ ಬೃಹತ್ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications