IND vs WI: ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ತರಬೇತಿಗಾಗಿ 18 ಸದಸ್ಯರ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್
ಶುಕ್ರವಾರ, ಜೂನ್ 30ರಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಭಾರತ ವಿರುದ್ಧ ತವರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಪೂರ್ವ ತಯಾರಿ ಶಿಬಿರಕ್ಕಾಗಿ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೊದಲ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿ ಆರಂಭವಾಗಲಿದೆ.
ಜುಲೈ ಮೊದಲ ವಾರದಲ್ಲಿ ಭಾರತ ತಂಡವು ಒಂದು ತಿಂಗಳ ಸುದೀರ್ಘ ಪ್ರವಾಸಕ್ಕಾಗಿ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದೆ. ಇದೀಗ ವೆಸ್ಟ್ ಇಂಡೀಸ್ ಪ್ರಕಟಿಸಿದ ತಂಡವು ಅಭ್ಯಾಸಕ್ಕಾಗಿ ಹೊರತು ಸರಣಿಗಾಗಿ ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಮೊದಲ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದೆ.
ವೆಸ್ಟ್ ಇಂಡೀಸ್ ತಂಡದ ಶಿಬಿರವು ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದ್ದು, ಜೂನ್ 30, ಶುಕ್ರವಾರದಿಂದ ತರಬೇತಿ ಆರಂಭವಾಗಲಿದೆ. ಮುಂದಿನ ಭಾನುವಾರ, ಜುಲೈ 9ರಂದು ವೆಸ್ಟ್ ಇಂಡೀಸ್ ತಂಡ ಡೊಮಿನಿಕಾಗೆ ಪ್ರಯಾಣಿಸಲಿದೆ.
ಕ್ರೇಗ್ ಬ್ರಾಥ್‌ವೈಟ್ ವೆಸ್ಟ್ ಇಂಡೀಸ್ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಜೇಡಿಯನ್ ಸೀಲ್ಸ್ ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ. ಜೇಡಿಯನ್ ಸೀಲ್ಸ್ ಡಿಸೆಂಬರ್ 2022ರಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅದೇ ತಿಂಗಳ ಪರ್ತ್ ಟೆಸ್ಟ್ ಪಂದ್ಯದ ನಂತರ ಯಾವುದೇ ಪಂದ್ಯವನ್ನು ಆಡಿಲ್ಲ.
ಜೇಡಿಯನ್ ಸೀಲ್ಸ್ ಅವರು ಪುನರ್ವಸತಿಗೆ ಒಳಗಾಗಿದ್ದರು ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪುನರಾರಂಭಿಸಲು ಸಜ್ಜಾಗಿದ್ದಾರೆ.
ಬ್ಯಾಟ್ಸ್‌ಮನ್‌ಗಳಾದ ಅಲಿಕ್ ಅಥಾನಾಜೆ, ಕವೆಮ್ ಹಾಡ್ಜ್ ಮತ್ತು ಕಿರ್ಕ್ ಮೆಕೆಂಜಿಯೆನ್ ಹಾಗೂ ವೇಗಿಗಳಾದ ಅಕೀಮ್ ಜೋರ್ಡಾನ್ ಮತ್ತು ಜೈರ್ ಮೆಕ್‌ಅಲಿಸ್ಟರ್ ಸೇರಿದಂತೆ ತರಬೇತಿ ತಂಡದಲ್ಲಿ ಹಲವು ಅನ್‌ಕ್ಯಾಪ್ಡ್ ಆಟಗಾರರಿಗೆ ಅವಕಾಶ ನೀಡಲಾಗಿದೆ.
ತರಬೇತಿಗಾಗಿ ವೆಸ್ಟ್ ಇಂಡೀಸ್ ತಂಡ
ಕ್ರೈಗ್ ಬ್ರಾಥ್‌ವೈಟ್ (ನಾಯಕ), ಅಲಿಕ್ ಅಥಾನಾಜೆ, ಜೆರ್ಮೈನ್ ಬ್ಲಾಕ್‌ವುಡ್, ಎನ್ಕ್ರುಮಾ ಬೊನ್ನರ್, ಟಾಗೆನರೈನ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಕವೆಮ್ ಹಾಡ್ಜ್, ಅಕೀಮ್ ಜೋರ್ಡಾನ್, ಜೈರ್ ಮ್ಯಾಕ್‌ಅಲಿಸ್ಟರ್, ಕಿರ್ಕ್ ಮೆಕೆಂಜಿ, ಮಾರ್ಕ್ವಿನೊ ಮಿಂಡ್ಲೆ, ಆಂಡರ್ಸನ್ ಫಿಲಿಪ್, ರೇಮನ್ ರೀಫರ್, ಕೆಮರ್ ರೋಚ್, ಜೇಡನ್ ಸೀಲ್ಸ್, ಜೋಮೆಲ್ ವಾರಿಕನ್ .
ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ವೇಳಾಪಟ್ಟಿ
ಜುಲೈ 12-16: ಮೊದಲ ಟೆಸ್ಟ್ ಪಂದ್ಯ, ವಿಂಡ್ಸರ್ ಪಾರ್ಕ್, ಡೊಮಿನಿಕಾ
ಜುಲೈ 20-24: ಎರಡನೇ ಟೆಸ್ಟ್ ಪಂದ್ಯ, ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್
ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ
ಜುಲೈ 27: ಮೊದಲ ಏಕದಿನ ಪಂದ್ಯ, ಬಾರ್ಬಡೋಸ್
ಜುಲೈ 29: ಎರಡನೇ ಏಕದಿನ ಪಂದ್ಯ, ಬಾರ್ಬಡೋಸ್
ಆಗಸ್ಟ್ 01: ಮೂರನೇ ಏಕದಿನ ಪಂದ್ಯ, ಟ್ರಿನಿಡಾಡ್
ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ ವೇಳಾಪಟ್ಟಿ
ಆಗಸ್ಟ್ 3: ಮೊದಲ ಟಿ20 ಪಂದ್ಯ - ಬ್ರಿಯಾನ್ ಲಾರಾ ಸ್ಟೇಡಿಯಂ, ಟ್ರಿನಿಡಾಡ್
ಆಗಸ್ಟ್ 6: ಎರಡನೇ ಟಿ20 ಪಂದ್ಯ - ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ
ಆಗಸ್ಟ್ 8: ಮೂರನೇ ಟಿ20 ಪಂದ್ಯ - ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ
ಆಗಸ್ಟ್ 12: ನಾಲ್ಕನೇ ಟಿ20 ಪಂದ್ಯ - ಲಾಡರ್‌ಹಿಲ್‌ನ ಸ್ಟೇಡಿಯಂ, ಫ್ಲೋರಿಡಾ
ಆಗಸ್ಟ್ 13: ಐದನೇ ಟಿ20 ಪಂದ್ಯ - ಲಾಡರ್‌ಹಿಲ್‌ನ ಸ್ಟೇಡಿಯಂ, ಫ್ಲೋರಿಡಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications