IND vs WI 3ನೇ ಟಿ20: ರೋಹಿತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಹೊರನಡೆದದ್ದೇಕೆ? ಮುಂದಿನ ಪಂದ್ಯ ಆಡ್ತಾರಾ, ಇಲ್ವಾ?

ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರತವಾಗಿರುವ ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಉಭಯ ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿದ ಟೀಮ್ ಇಂಡಿಯಾ ವೈಟ್ ವಾಶ್ ಸಾಧನೆ ಮಾಡಿತ್ತು. ನಂತರ ಇದೀಗ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದು, ಸರಣಿಯ 3 ಪಂದ್ಯಗಳ ಮುಕ್ತಾಯದ ಹಂತಕ್ಕೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 2-1 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಜಯ ಸಾಧಿಸಿದ್ದ ಟೀಂ ಇಂಡಿಯಾ ಸೇಂಟ್ ಕಿಟ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಸೋಲನ್ನು ಅನುಭವಿಸಿತ್ತು ಹಾಗೂ ಇದೇ ಕ್ರೀಡಾಂಗಣದಲ್ಲಿ ನಿನ್ನೆಯಷ್ಟೇ (ಆಗಸ್ಟ್ 2) ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‍ಗಳ ಅಮೋಘ ಜಯ ಸಾಧಿಸುವುದರ ಮೂಲಕ ಸರಣಿ ಕೈವಶ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 165 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಆದರೆ ರೋಹಿತ್ ಶರ್ಮಾ 5 ಎಸೆತಗಳನ್ನು ಮಾತ್ರ ಎದುರಿಸಿ ರಿಟೈರ್ ಹರ್ಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಹೀಗೆ ರೋಹಿತ್ ಶರ್ಮಾ ವಿಂಡೀಸ್ ವಿರುದ್ಧದ ಮೂರನೇ ಟಿ ಟ್ವೆಂಟಿ ಪಂದ್ಯದ ವೇಳೆ ರಿಟೈರ್ಡ್ ಹರ್ಟ್ ಆಗಲು ಕಾರಣವೇನು ಹಾಗೂ ರೋಹಿತ್ ಮುಂದಿನ ಪಂದ್ಯದಲ್ಲಿ ಭಾಗವಹಿಸುತ್ತಾರಾ ಎಂಬುದರ ಕುರಿತಾದ ಮಾಹಿತಿ ಮುಂದೆ ಇದೆ ಓದಿ.

ರೋಹಿತ್ ಪಂದ್ಯದ ಮಧ್ಯೆ ಹೊರ ನಡೆದದ್ದು ಈ ಕಾರಣಕ್ಕೆ
ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಟಿ ಟ್ವೆಂಟಿ ಪಂದ್ಯದ ಚೇಸಿಂಗ್ ವೇಳೆ ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಅಲ್ಜಾರಿ ಜೋಸೆಫ್ ಎಸೆದ ಎರಡನೇ ಓವರ್‌ನ ನಾಲ್ಕನೇ ಎಸೆತದ ನಂತರ ರಿಟೈರ್ಡ್ ಹರ್ಟ್ ಆಗಿ ಹೊರನಡೆದರು. ರೋಹಿತ್ ಶರ್ಮಾ ಬಳಿ ಬಂದ ತಂಡದ ಫಿಸಿಯೋಗಳು ರೋಹಿತ್ ಶರ್ಮಾರ ಶೀಘ್ರ ತಪಾಸಣೆ ನಡೆಸಿದ್ದರು, ರೋಹಿತ್ ಶರ್ಮಾ ಈ ರೀತಿ ರಿಟೈರ್ಡ್ ಹರ್ಟ್ ಆಗಲು ಕಾರಣ ದಿಢೀರ್ ತೀವ್ರ ಬೆನ್ನು ಸೆಳೆತ ಕಾಣಿಸಿಕೊಂಡದ್ದು. ಇನ್ನು ಅಲ್ಜಾರಿ ಜೋಸೆಫ್ ಎಸೆದ ಮೂರನೇ ಎಸೆತಕ್ಕೆ ರೋಹಿತ್ ಶರ್ಮಾ ಬೌಂಡರಿ ಬಾರಿಸಿದಾಗ ಬೆನ್ನು ಸೆಳೆತ ಉಂಟಾಗಿದೆ ಎನ್ನಲಾಗುತ್ತಿದೆ.

ಮುಂದಿನ ಪಂದ್ಯ ಆಡ್ತಾರ ಇಲ್ವಾ ರೋಹಿತ್ ಶರ್ಮಾ?
ಇನ್ನು ರಿಟೈರ್ಡ್ ಹರ್ಟ್ ಆಗಿ ಹೊರ ನಡೆದ ರೋಹಿತ್ ಶರ್ಮಾ ನಂತರ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿಯಲಿಲ್ಲ. ಆದರೆ ಪಂದ್ಯ ಮುಕ್ತಾಯಗೊಂಡ ನಂತರ ಮಾತನಾಡಿದ ರೋಹಿತ್ ಶರ್ಮಾ 'ಸದ್ಯಕ್ಕೆ ಪರವಾಗಿಲ್ಲ, ಮುಂದಿನ ಪಂದ್ಯಕ್ಕೆ ಇನ್ನೂ ಕೆಲ ದಿನಗಳ ಸಾಕಷ್ಟು ಕಾಲಾವಕಾಶವಿದೆ, ಅಷ್ಟರಲ್ಲಿ ನಾನು ಚೇತರಿಸಿಕೊಳ್ಳಲಿದ್ದೇನೆ' ಎಂದು ಹೇಳಿಕೆ ನೀಡಿದರು. ಈ ಮೂಲಕ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದೇನೆ ಎಂಬ ಸುಳಿವನ್ನು ರೋಹಿತ್ ಶರ್ಮಾ ನೀಡಿದರು.

ಆರಂಭಿಕನಾಗಿ ಮಿಂಚಿದ ಸೂರ್ಯಕುಮಾರ್ ಯಾದವ್; ಪಂದ್ಯ ಗೆದ್ದ ಭಾರತ
ಒಂದೆಡೆ ಆರಂಭಿಕ ಆಟಗಾರ ರೋಹಿತ್ ಶರ್ಮಾ 11 ರನ್ ಗಳಿಸಿ ಪಂದ್ಯದಿಂದ ಹೊರಗುಳಿದರೆ, ಮತ್ತೋರ್ವ ಆರಂಭಿಕ ಆಟಗಾರ ಸೂರ್ಯಕುಮಾರ್ ಯಾದವ್ 44 ಎಸೆತಗಳಲ್ಲಿ 76 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನುಳಿದಂತೆ ಶ್ರೇಯಸ್ ಅಯ್ಯರ್ 24, ಹಾರ್ದಿಕ್ ಪಾಂಡ್ಯ 4, ರಿಷಭ್ ಪಂತ್ ಅಜೇಯ 33 ಮತ್ತು ದೀಪಕ್ ಹೂಡಾ ಅಜೇಯ 10 ರನ್ ಕಲೆ ಹಾಕಿದರು. ಈ ಮೂಲಕ ಟೀಮ್ ಇಂಡಿಯಾ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications