IND vs ZIM 2nd ODI: ಅಲ್ಪಮೊತ್ತಕ್ಕೆ ಕುಸಿದ ಕಂಡ ಜಿಂಬಾಬ್ವೆ; ಭಾರತಕ್ಕೆ ಸುಲಭ ರನ್ ಗುರಿ

ಸದ್ಯ ಕೆ ಎಲ್ ರಾಹುಲ್ ನಾಯಕತ್ವದಡಿಯಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನು ಕೈಗೊಂಡಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿಥೇಯ ಜಿಂಬಾಬ್ವೆ ವಿರುದ್ಧ ಸೆಣಸಾಟವನ್ನು ನಡೆಸುತ್ತಿದೆ. ಕಳೆದ ಗುರುವಾರ (ಆಗಸ್ಟ್ 18) ನಡೆದ ಪ್ರಥಮ ಏಕದಿಮನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಹತ್ತು ವಿಕೆಟ್‌ಗಳ ಬೃಹತ್ ಜಯವನ್ನು ಸಾಧಿಸಿದ್ದ ಟೀಮ್ ಇಂಡಿಯಾ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಇಂದು ( ಆಗಸ್ಟ್ 20 ) ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿಯೂ ಸಹ ಗೆದ್ದು ಸರಣಿಯನ್ನು ಕೈವಶಮಾಡಿಕೊಳ್ಳುವತ್ತ ಕಣ್ಣಿಟ್ಟಿದೆ.
ಉಭಯ ತಂಡಗಳ ನಡುವಿನ ಈ ಪಂದ್ಯ ಕೂಡ ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಕೆಎಲ್ ರಾಹುಲ್ ಕಳೆದ ಪಂದ್ಯದ ಹಾಗೆ ಈ ಬಾರಿಯೂ ಫೀಲ್ಟಿಂಗ್ ಆಯ್ದುಕೊಂಡು ಎದುರಾಳಿ ಜಿಂಬಾಬ್ವೆ ತಂಡದ ಆಟಗಾರರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 38.1 ಓವರ್‌ಗಳಲ್ಲಿ 161 ರನ್ ಕಲೆಹಾಕಿ ಆಲ್‌ಔಟ್ ಆಗಿದ್ದು ಟೀಮ್ ಇಂಡಿಯಾಗೆ ಗೆಲ್ಲಲು 162 ರನ್‌ಗಳ ಗುರಿಯನ್ನು ನೀಡಿದೆ.

ಜಿಂಬಾಬ್ವೆ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಪರ ಆರಂಭಿಕರಾಗಿ ಕಣಕ್ಕಿಳಿದ ತಕುದ್ಜ್ವಾನಾಶೆ ಕೈಟಾನೊ ಹಾಗೂ ಇನ್ನೊಸೆಂಟ್ ಕೈಯಾ ಉತ್ತಮ ಆರಂಭ ಕಟ್ಟಿಕೊಡುವಲ್ಲಿ ವಿಫಲರಾದರು. ತಕುದ್ಜ್ವಾನಾಶೆ ಕೈಟಾನೊ 7 ರನ್ ಕಲೆಹಾಕಿದರೆ, ಇನ್ನೊಸೆಂಟ್ ಕೈಯಾ 16 ರನ್ ಕಲೆಹಾಕಿದರು. ಇನ್ನುಳಿದಂತೆ ವೆಸ್ಲಿ ಮಾಧೆವೆರೆ 2 ರನ್, ತಂಡದ ನಾಯಕ ರೆಗಿಸ್ ಚಕಬ್ವಾ 2 ರನ್, ಸಿಕಂದರ್ ರಾಜಾ 16 ರನ್, ಸೀನ್ ವಿಲಿಯಮ್ಸನ್ 42 ರನ್, ಲ್ಯೂಕ್ ಜೊಂಗ್ವೆ 6 ರನ್, ಬ್ರಾಡ್ ಇವಾನ್ಸ್ 9 ರನ್, ವಿಕ್ಟರ್ ನ್ಯೌಚಿ ಡೈಮಂಡ್ ಡಕ್ ಔಟ್ ಮತ್ತು ತನಕಾ ಚಿವಾಂಗಾ 4 ರನ್ ಮತ್ತು ರಾನ್ ಬರ್ಲ್ 39 ರನ್ ಕಲೆಹಾಕಿ ಅಜೇಯರಾಗಿ ಉಳಿದರು.

ಟೀಮ್ ಇಂಡಿಯಾ ಬೌಲಿಂಗ್
ಟೀಮ್ ಇಂಡಿಯಾ ಕಳೆದ ಪಂದ್ಯದ ರೀತಿ ಈ ಪಂದ್ಯದಲ್ಲಿಯೂ ಸಹ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್ ಹಾಗೂ ದೀಪಕ್ ಹೂಡಾ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನುಳಿದ ಎರಡು ವಿಕೆಟ್‌ಗಳು ರನ್ ಔಟ್ ಆಗಿವೆ.

ಆಡುವ ಬಳಗಗಳು
ಜಿಂಬಾಬ್ವೆ ಅಡುವ ಬಳಗ: ಇನ್ನೊಸೆಂಟ್ ಕೈಯಾ, ತಕುದ್ಜ್ವಾನಾಶೆ ಕೈಟಾನೊ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ತನಕಾ ಚಿವಾಂಗಾ
ಬೆಂಚ್: ಡೊನಾಲ್ಡ್ ತಿರಿಪಾನೊ, ಮಿಲ್ಟನ್ ಶುಂಬಾ, ಟೋನಿ ಮುನ್ಯೊಂಗಾ, ಕ್ಲೈವ್ ಮದಂಡೆ, ಜಾನ್ ಮಸಾರಾ, ತಡಿವಾನಾಶೆ ಮರುಮನಿ, ರಿಚರ್ಡ್ ನಾಗರವ
ಭಾರತ ಆಡುವ ಬಳಗ: ಶಿಖರ್ ಧವನ್, ಶುಬ್ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಬೆಂಚ್: ಶಹಬಾಜ್ ಅಹ್ಮದ್, ಅವೇಶ್ ಖಾನ್, ರುತುರಾಜ್ ಗಾಯಕ್ವಾಡ್, ರಾಹುಲ್ ಚಹರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications