IND vs ZIM 1st ODI: ಧವನ್-ಗಿಲ್ 192 ರನ್ ಜತೆಯಾಟ; 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ

ಜಿಂಬಾಬ್ವೆ ಪ್ರವಾಸದಲ್ಲಿ ನಿರತವಾಗಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ ಕಣಕ್ಕಿಳಿದಿದ್ದು, ಇಂದು ( ಆಗಸ್ಟ್ 18 ) ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಹತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಜಿಂಬಾಬ್ವೆಯ ರಾಜಧಾನಿ ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ 40.3 ಓವರ್‌ಗಳಲ್ಲಿ 189 ರನ್ ಕಲೆಹಾಕಿ ಆಲ್ಔಟ್ ಆಗಿ ತನ್ನ ಎದುರಾಳಿ ಟೀಂ ಇಂಡಿಯಾಗೆ ಗೆಲ್ಲಲು 190 ರನ್‌ಗಳ ಸಾಮಾನ್ಯ ಗುರಿಯನ್ನು ಸಾಧಿಸಿತ್ತು.
ಇನ್ನು ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಶುಬ್‌ಮನ್ ಗಿಲ್ ಅಜೇಯ ಆಟವನ್ನಾಡಿದ್ದು ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿದೆ. 30.5 ಓವರ್‌ಗಳಲ್ಲಿ 192 ರನ್ ಕಲೆಹಾಕಿ ಗೆದ್ದು ಬೀಗಿದೆ.

ಜಿಂಬಾಬ್ವೆ ಇನ್ನಿಂಗ್ಸ್
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾದ ನಾಯಕ ಕೆ ಎಲ್ ರಾಹುಲ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಪರ ಆರಂಭಿಕರಾಗಿ ಕಣಕ್ಕಿಳಿದ ಇನ್ನೋಸೆಂಟ್ ಕೈಯಾ 4 ರನ್ ಕಲೆ ಹಾಕಿದರೆ, ತಡಿವಾನಿಶೆ ಮರುಮನಿ 8 ರನ್ ಕಲೆಹಾಕಿದರು. ಇನ್ನುಳಿದಂತೆ ವೆಸ್ಲಿ ಮಧೆವೆರೆ 5 ರನ್, ಸೀನ್ ವಿಲಿಯಮ್ಸ್ ಕೇವಲ 1 ರನ್, ಸಿಕಂದರ್ ರಾಜಾ 12 ರನ್ , ನಾಯಕ ರೆಗಿಸ್ ಚಕಬ್ವ 35 ರನ್, ರಾನ್ ಬರ್ಲ್ 11 ರನ್, ಲೂಕ್ ಜೋಂಗ್ವೆ 13 ರನ್, ವಿಕ್ಟರ್ ನ್ಯುಚಿ 8 ರನ್, ರಿಚರ್ಡ್ ನ್ಗರವ 34 ರನ್ ಮತ್ತು ಬ್ರಾಡ್ ಇವಾನ್ಸ್ ಅಜೇಯ 33 ಕಲೆಹಾಕಿದರು. ಇನ್ನು 28.3 ಓವರ್‌ಗಳಲ್ಲಿ 110 ರನ್ ಕಲೆ ಹಾಕಿ 8 ವಿಕೆಟ್ ಕಳೆದುಕೊಂಡಿದ್ದ ಜಿಂಬಾಬ್ವೆಗೆ ಒಂಬತ್ತನೇ ವಿಕೆಟ್‌ಗೆ ಜತೆಯಾದ ರಿಚರ್ಡ್ ನ್ಗರವ ಮತ್ತು ಬ್ರಾಡ್ ಇವಾನ್ಸ್ 70 ರನ್‌ಗಳ ಜತೆಯಾಟವಾಡುವುದರ ಮೂಲಕ ತಂಡದ ಮೊತ್ತ ಹೆಚ್ಚಾಗುವಂತೆ ಮಾಡಿದರು.
ಇತ್ತ ಟೀಮ್ ಇಂಡಿಯಾ ಪರ ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ ಹಾಗೂ ಅಕ್ಷರ್ ಪಟೇಲ್ ತಲಾ 3 ವಿಕೆಟ್‌ಗಳನ್ನು ಪಡೆದರು ಹಾಗೂ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.

ವಿಕೆಟ್ ಕಳೆದುಕೊಳ್ಳದೇ ಗೆದ್ದ ಭಾರತ, ಕೆಎಲ್ ನಾಯಕತ್ವದ ಪ್ರಥಮ ಗೆಲುವು
ಇನ್ನು ಜಿಂಬಾಬ್ವೆ ನೀಡಿದ್ದ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 113 ಎಸೆತಗಳಲ್ಲಿ ಅಜೇಯ 81 ರನ್ ಕಲೆಹಾಕಿದರೆ, ಶುಬ್‌ಮನ್ ಗಿಲ್ 72 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿದರು. ಈ ಮೂಲಕ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಪಂದ್ಯವನ್ನು ಗೆದ್ದಿದೆ.

ಆಡುವ ಬಳಗ
ಭಾರತ: ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಬೆಂಚ್: ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಶಬಾಜ್ ನದೀಮ್, ರುತುರಾಜ್ ಗಾಯಕ್ವಾಡ್
ಜಿಂಬಾಬ್ವೆ: ತಡಿವಾನಾಶೆ ಮರುಮನಿ, ಇನೋಸೆಂಟ್ ಕೈಯಾ, ಸೀನ್ ವಿಲಿಯಮ್ಸ್, ವೆಸ್ಲಿ ಮಾಧೆವೆರೆ, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ(ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ರಿಚರ್ಡ್ ನ್ಗರವ
ಬೆಂಚ್ : ತಕುಡ್ಜ್ವಾನಾಶೆ ಕೈಟಾನೊ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ, ಕ್ಲೈವ್ ಮದಂಡೆ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ತನಕಾ ಚಿವಂಗಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications