
ಜಿಂಬಾಬ್ವೆ ವಿರುದ್ಧ ಸರಣಿಗೆ ಇನ್ನೂ ತಂಡ ಘೋಷಣೆಯಾಗಿಲ್ಲ
ಜಿಂಬಾಬ್ವೆ ವಿರುದ್ಧ ಆಗಸ್ಟ್‌ನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ ಇನ್ನೂ ಆಯ್ಕೆಗೊಂಡಿಲ್ಲ. ಹಿರಿಯ ಆಟಗಾರರ ಆಯ್ಕೆ ಸಮಿತಿಯು ವಿಂಡೀಸ್ ವಿರುದ್ಧದ ಸರಣಿಯಲ್ಲಿ ಆಟಗಾರರ ಪ್ರದರ್ಶನವನ್ನ ಗಮನಿಸಿ ನಂತರದಲ್ಲಿ ಜಿಂಬಾಬ್ವೆ ವಿರುದ್ಧದ ಟೀಂ ಇಂಡಿಯಾ ಸ್ಕ್ವಾಡ್ ಘೋಷಣೆ ಮಾಡಲಿದ್ದಾರೆ.
ಪ್ರಸ್ತುತ ಇರುವ ವದಂತಿಗಳ ಪ್ರಕಾರ ವಿರಾಟ್ ಕೊಹ್ಲಿ ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಆಡಲಿರುವ ಬಹುತೇಕ ಆಟಗಾರರು ಜಿಂಬಾಬ್ವೆ ವಿರುದ್ಧದ ಸರಣಿಗೂ ಆಯ್ಕೆಯಾಗುವ ಸಾಧ್ಯತೆಯಿದೆ. ಹಾಗಿದ್ದರೆ ಈ ಸರಣಿಯಲ್ಲಿ ಟೀಂ ಇಂಡಿಯಾದ ಯಾವೆಲ್ಲಾ ಆಟಗಾರರು ಆಯ್ಕೆಯಾಗಬಹುದು ಎಂಬುದನ್ನು ಈ ಕೆಳಗೆ ತಿಳಿಯಿರಿ.

ಶಿಖರ್ ಧವನ್
ಟೀಂ ಇಂಡಿಯಾ ಎಡಗೈ ಬ್ಯಾಟರ್ ಶಿಖರ್ ಧವನ್, ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಂತೆ ಜಿಂಬಾಬ್ವೆ ವಿರುದ್ಧವೂ ಗಬ್ಬರ್ ನಾಯಕತ್ವದಲ್ಲಿ ಭಾರತ ಮುನ್ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಶಿಖರ್ ಧವನ್‌ಗೆ ಸಾಧ್ಯವಾದಷ್ಟು ಏಕದಿನ ಪಂದ್ಯಗಳಲ್ಲಿ ಅಕವಾಶ ಒದಗಿಸುವ ಸಾಧ್ಯತೆಯಿದೆ.
ವಿಶ್ವಕಪ್‌ಗೆ ಮುನ್ನ ಮತ್ತೆ 2 ಸರಣಿಗೆ ಬಿಸಿಸಿಐ ಯೋಜನೆ: ಆಸಿಸ್, ದ. ಆಪ್ರಿಕಾ ವಿರುದ್ಧ ಸರಣಿ ಸಾಧ್ಯತೆ!

ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಲಿರುವ ಮತ್ತೊಬ್ಬ ಪ್ರಮುಖ ಆಟಗಾರನಾಗಿದ್ದಾರೆ. ಪ್ರಸ್ತುತ ಫಾರ್ಮ್ ವೈಫಲ್ಯದಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಕೆರಿಬಿಯನ್‌ಗೆ ತೆರಳದೇ ಇಂಗ್ಲೆಂಡ್‌ನಲ್ಲೇ ಫ್ಯಾಮಿಲಿಯೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ವಿಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಬಳಿಕ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಏಷ್ಯಾಕಪ್‌ಗೂ ಮುನ್ನ ಫಾರ್ಮ್ ಮರಳುವ ಯೋಜನೆ ರೂಪಿಸಿದ್ದಾರೆ.

ರುತುರಾಜ್ ಗಾಯಕ್ವಾಡ್
ಕೊಟ್ಟ ಅವಕಾಶಗಳನ್ನ ಕೈ ಚೆಲ್ಲಿರುವ ಓಪನಿಂಗ್ ಬ್ಯಾಟರ್ ರುತುರಾಜ್ ಗಾಯಕ್ವಾಡ್‌ಗೆ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಅವಕಾಶ ಸಿಗುವುದು ಬಹುತೇಕ ಗ್ಯಾರೆಂಟಿ. ಈಗಾಗಲೇ ಭಾರತ ಪರ 9 ಟಿ20 ಪಂದ್ಯಗಳನ್ನ ಆಡಿರುವ ರುತುರಾಜ್ ಒಂದೇ ಒಂದು ಏಕದಿನ ಪಂದ್ಯವನ್ನಾಡಲು ಅವಕಾಶ ಸಿಕ್ಕಿಲ್ಲ.
8 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ರುತುರಾಜ್ ಗಾಯಕ್ವಾಡ್ 16.88ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 135 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಒಳಗೊಂಡಿದೆ.

ಶುಭಮನ್ ಗಿಲ್
ಭಾರತದ ಭವಿಷ್ಯದ ಸ್ಟಾರ್ ಬ್ಯಾಟರ್ ಎಂದೇ ಗುರುತಿಸಿಕೊಂಡಿರುವ ಬಲಗೈ ಬ್ಯಾಟರ್ ಶುಭಮನ್ ಗಿಲ್ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಗಿಟ್ಟಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಕೀ ಪ್ಲೇಯರ್ ಆಗಿರುವ ಗಿಲ್‌ಗೆ ಇದುವರೆಗೆ ಏಕದಿನ ಮತ್ತು T20 ಅಂತರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಪಡೆದಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಪಡೆದಿರುವ ಶುಭಮನ್ ಗಿಲ್ ಬಳಿಕ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲೂ ಆಡುವ ಸಾಧ್ಯತೆ ಬಹಳ ಕಡಿಮೆಯಿದೆ. ಶುಭಮನ್ ಗಿಲ್ ಇದುವರೆಗೆ 3 ಏಕದಿನ ಪಂದ್ಯದಲ್ಲಿ 49 ರನ್ ಕಲೆಹಾಕಿದ್ದು, ಟಾಪ್ ಸ್ಕೋರ್ 33 ಆಗಿದೆ.
ಶ್ರೇಯಸ್ ಅಯ್ಯರ್, ಸ್ಯಾಮ್ಸನ್ ಬದಲು ಈತ ನಂ.4ರಲ್ಲಿ ಆಡಬೇಕು ಎಂದ ಕಿವೀಸ್ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್
ಐಪಿಎಲ್‌ನಲ್ಲಿ ಇಂಜ್ಯುರಿ ಬಳಿಕ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಂಬ್ಯಾಕ್ ಮಾಡಿದ್ದ ಸೂರ್ಯಕುಮಾರ್ ಯಾದವ್ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಕ್ವಾಡ್‌ನಲ್ಲಿರೋದು ಬಹುತೇಕ ಗ್ಯಾರೆಂಟಿಯಾಗಿದೆ.
ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತನ್ನ ಉತ್ತಮ ಪ್ರದರ್ಶನ ಮೂಲಕ ಗಮನಸೆಳೆದಿರುವ ಸೂರ್ಯ, 10 ಏಕದಿನ ಪಂದ್ಯಗಳಲ್ಲಿ 44.29ರ ಸರಾಸರಿಯಲ್ಲಿ 310 ರನ್ ಕಲೆಹಾಕಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಒಳಗೊಂಡಿವೆ.

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಭಾರತದ ಸಂಭಾವ್ಯ ಸ್ಕ್ವಾಡ್
ಶಿಖರ್ ಧವನ್ (ನಾಯಕ), ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ರವಿ ಬಿಷ್ಣೋಯಿ


Click it and Unblock the Notifications












