IND-W vs AUS-W 3rd T20: ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತಕ್ಕೆ ಆಸೀಸ್ ಸವಾಲು; ಆಡುವ 11ರ ಬಳಗ

ಎರಡನೇ ಟಿ20 ಪಂದ್ಯದಲ್ಲಿ "ಸೂಪರ್ ಓವರ್'ನಲ್ಲಿ ಅಭೂತಪೂರ್ವ ಗೆಲುವಿನ ನಂತರ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಬುಧವಾರ (ಡಿಸೆಂಬರ್ 14) ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದೊಂದಿಗೆ ಮುಖಾಮುಖಿಯಾಗಲಿದೆ.
ಇದೇ ವೇಳೆ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಸುಧಾರಿತ ಫೀಲ್ಡಿಂಗ್ ಮತ್ತು ಬೌಲಿಂಗ್ ಪ್ರದರ್ಶನದೊಂದಿಗೆ ಆವೇಗವನ್ನು ಕಾಯ್ದುಕೊಳ್ಳಲು ಹರ್ಮನ್‌ಪ್ರೀತ್ ಕೌರ್ ಪಡೆ ಎದುರು ನೋಡುತ್ತಿದೆ.
ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮೊದಲ ಎರಡು ಪಂದ್ಯಗಳ ನಂತರ, ಮುಂಬೈನ ದಕ್ಷಿಣ ಭಾಗದಲ್ಲಿರುವ ಐಕಾನಿಕ್ ಬ್ರಬೋರ್ನ್ ಸ್ಟೇಡಿಯಂಗೆ ಎರಡು ತಂಡಗಳು ಬಂದಿಳಿದಿವೆ.

ಪ್ರೇಕ್ಷಕರು ಕುರ್ಚಿ ತುದಿಗೆ ಕುಳಿತು ಪಂದ್ಯ ವೀಕ್ಷಿಸಿದರು
ಭಾನುವಾರದ ರೋಚಕ ಪಂದ್ಯವು ಮಹಿಳಾ ಕ್ರಿಕೆಟ್‌ನ ಪರಿಪೂರ್ಣ ಆಟಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಏಕೆಂದರೆ 47,000ಕ್ಕೂ ಅಧಿಕ ಪ್ರೇಕ್ಷಕರು ಕುರ್ಚಿ ತುದಿಗೆ ಕುಳಿತು ಪಂದ್ಯ ವೀಕ್ಷಿಸಿದರು. ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಹಂತಕ್ಕೆ ಬಂದು ಶರಣಾಗುವ ಭಾರತ ಮಹಿಳಾ ತಂಡ ಕೊನೆಯ ಪಂದ್ಯದಲ್ಲಿ ತಿರುಗಿಬಿದ್ದು ಜಯಶಾಲಿಯಾಯಿತು.
ಭಾರತ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಮತ್ತು ಹಂಗಾಮಿ ಮುಖ್ಯ ಕೋಚ್ ಹೃಷಿಕೇಶ್ ಕಾನಿಟ್ಕರ್ ಅವರು ಪಂದ್ಯದ ನಂತರ ಆಟಗಾರ್ತಿಯರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಐದು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದ್ದು, ಬುಧವಾರದ ಪಂದ್ಯ ಗೆಲ್ಲುವ ಮೂಲಕ 2-1ಕ್ಕೆ ಅಂತರ ಹೆಚ್ಚಿಸುವ ಗುರಿ ನೀಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ 3ನೇ ಟಿ20 ಪಂದ್ಯದ ವಿವರ
ಪಂದ್ಯದ ದಿನಾಂಕ: ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ 3ನೇ ಟಿ20 ಪಂದ್ಯ ಡಿಸೆಂಬರ್ 14, ಬುಧವಾರ ನಡೆಯಲಿದೆ.
ಸ್ಥಳ: ಮುಂಬೈನ ಬ್ರಬೋರ್ನ್ ಸ್ಟೇಡಿಯಂ
ಸಮಯ: ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ 3ನೇ ಟಿ20 ಪಂದ್ಯ ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಪ್ರಾರಂಭ. ಟಾಸ್ ಸಂಜೆ 6.30ಕ್ಕೆ ನಡೆಯಲಿದೆ.
ಯಾವ ಚಾನೆಲ್‌ನಲ್ಲಿ ಪಂದ್ಯ ವೀಕ್ಷಣೆ: ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ 3ನೇ ಟಿ20 ಪಂದ್ಯವನ್ನು ನೇರಪ್ರಸಾರ ಮಾಡಲಾಗುತ್ತದೆ. ಇನ್ನು ಡಿಸ್ನಿ+ ಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಲಭ್ಯವಿರಲಿದೆ.

ಭಾರತ ಮಹಿಳಾ vs ಆಸ್ಟ್ರೇಲಿಯಾ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ ಮಹಿಳೆಯರು: ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಿಚಾ ಘೋಷ್, ರೇಣುಕಾ ಸಿಂಗ್ ಠಾಕೂರ್, ರಾಧಾ ಯಾದವ್, ಮೇಘನಾ ಸಿಂಗ್, ಕೆ ಅಂಜಲಿ ಸರ್ವಾಣಿ
ಆಸ್ಟ್ರೇಲಿಯಾ ಮಹಿಳೆಯರು: ಅಲಿಸ್ಸಾ ಹೀಲಿ (ನಾಯಕಿ), ಬೆತ್ ಮೂನಿ, ಎಲಿಸ್ಸೆ ಪೆರ್ರಿ, ಆಶ್ಲೀಗ್ ಗಾರ್ಡ್ನರ್, ತಾಲಿಯಾ ಮೆಕ್‌ಗ್ರಾತ್, ಕಿಮ್ ಗಾರ್ತ್, ಎಚ್ ಗ್ರಹಾಂ, ಅಲಾನಾ ಕಿಂಗ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸೆನ್, ಮೇಗನ್ ಶುಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications