
ಐಸಿಸಿ ಟೂರ್ನಿಗಾಗಿ ತಯಾರಿಯಲ್ಲಿ ಭಾರತ ತಂಡಕ್ಕೆ ಉತ್ತಮ ಅಭ್ಯಾಸ
ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಎರಡನೇ ಪಂದ್ಯದಲ್ಲಿ ಭಾರತೀಯ ಮಹಿಳೆಯರಿಂದ ಆಘಾತಕ್ಕೆ ಒಳಗಾದ ನಂತರ ಪುಟಿದೇಳುವ ಮಾರ್ಗ ಕಂಡುಕೊಂಡಿದ್ದಾರೆ. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿತು. ನಂತರದ ಎರಡು ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳು ಕಡಿಮೆ ರನ್‌ಗಳಿಗೆ ಔಟ್ ಮಾಡಲು ಯಶಸ್ವಿಯಾದರು.
ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯು ಐಸಿಸಿ ಟೂರ್ನಿಗಾಗಿ ತಯಾರಿಯಲ್ಲಿ ಭಾರತ ತಂಡಕ್ಕೆ ಉತ್ತಮ ಅಭ್ಯಾಸವಾಗಿದೆ. ಭಾರತ ತಂಡ ಸುಧಾರಿಸಬೇಕಾದ ಕ್ಷೇತ್ರಗಳನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬಹಿರಂಗಗೊಂಡಿದ್ದು, ಅಲ್ಲಿ ಕೆಲಸ ಮಾಡಬಹುದಾಗಿದೆ.

ಜೆಮಿಮಾ ರೋಡ್ರಿಗಸ್ ಸತತ ನಾಲ್ಕು ಪಂದ್ಯಗಳ ವೈಫಲ್ಯ
ಮುಂದಿನ ತಿಂಗಳು ನಡೆಯಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಶಫಾಲಿ ವರ್ಮಾ, ಸ್ಟ್ರೈಕ್ ರೊಟೇಶನ್‌ನೊಂದಿಗೆ ತನ್ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಅಗತ್ಯವಿದೆ. ಜೆಮಿಮಾ ರೋಡ್ರಿಗಸ್ ಸತತ ನಾಲ್ಕು ಪಂದ್ಯಗಳ ವೈಫಲ್ಯಗಳ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುವುದು ಅನುಮನಾವಾಗಿದೆ.
ಇನ್ನು ಯುವ ಬ್ಯಾಟರ್ ರಿಚಾ ಘೋಷ್ ಅವರಲ್ಲಿ ಭಾರತ ಮಹಿಳಾ ತಂಡ ಹೆಚ್ಚು ಅಗತ್ಯವಿರುವ ಫಿನಿಶರ್ ಪಾತ್ರವನ್ನು ಕಂಡುಕೊಂಡಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರೂ, ಗೆಲುವಿನ ಗಡಿ ದಾಟಿಸಲು ಸಾಧ್ಯವಾಗುತ್ತಿಲ್ಲ.

ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ 5ನೇ ಟಿ20 ಪಂದ್ಯದ ವಿವರ
ದಿನಾಂಕ ಮತ್ತು ಸ್ಥಳ: ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ 5ನೇ ಟಿ20 ಪಂದ್ಯ ಡಿಸೆಂಬರ್ 20ರ ಶುಕ್ರವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಂದ್ಯದ ಸಮಯ: ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ 5ನೇ ಟಿ20 ಪಂದ್ಯ ಭಾರತೀಯ ಕಾಲಮಾನ ರಾತ್ರಿ 7:00ಕ್ಕೆ ಆರಂಭವಾಗಲಿದೆ. ಟಾಸ್ ಸಂಜೆ 6.30ಕ್ಕೆ ನಡೆಯಲಿದೆ.
ಟಿವಿ ಚಾನೆಲ್ ವೀಕ್ಷಣೆ: ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ 5ನೇ ಟಿ20 ಪಂದ್ಯವನ್ನು ಪ್ರಸಾರ ಮಾಡಲಾಗುತ್ತದೆ.
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ 5ನೇ ಟಿ20 ಪಂದ್ಯವನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಭಾರತ ಮಹಿಳಾ vs ಆಸ್ಟ್ರೇಲಿಯಾ ಸಂಬಾವ್ಯ ಆಡುವ 11ರ ಬಳಗ
ಭಾರತ ಮಹಿಳೆಯರು: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ಅಂಜಲಿ ಸರ್ವಾಣಿ, ಮೇಘನಾ ಸಿಂಗ್, ರೇಣುಕಾ ಠಾಕೂರ್ ಸಿಂಗ್
ಆಸ್ಟ್ರೇಲಿಯಾ ಮಹಿಳೆಯರು: ಗ್ರೇಸ್ ಹ್ಯಾರಿಸ್, ಬೆತ್ ಮೂನಿ (ವಿಕೆಟ್ ಕೀಪರ್), ತಹ್ಲಿಯಾ ಮೆಕ್‌ಗ್ರಾತ್ (ನಾಯಕಿ), ಆಶ್ಲೀಗ್ ಗಾರ್ಡ್ನರ್, ಎಲ್ಲಿಸ್ ಪೆರ್ರಿ, ಬ್ರೌನ್, ಅನ್ನಾಬೆಲ್ ಸದರ್ಲ್ಯಾಂಡ್, ಹೀದರ್ ಗ್ರಹಾಂ, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್ ಶುಟ್


Click it and Unblock the Notifications
