For Quick Alerts
ALLOW NOTIFICATIONS  
For Daily Alerts
 

Ind vs Eng 1st ODI: ಭಾರತ ವನಿತೆಯರ ತಂಡದ ಗೆಲುವಿಗೆ 228ರನ್ ಟಾರ್ಗೆಟ್‌

India women

ಹೋವ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಮೊದಲ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ಭಾರತ ದಾಳಿಗೆ ತತ್ತರಿಸಿದೆ. ನಿಗದಿತ 50 ಓವರ್‌ಗಳಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 227 ರನ್‌ಗಳಿಸಲಷ್ಟೇ ಶಕ್ತವಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಪರ ಎಮ್ಮಾ ಲ್ಯಾಂಬ್ 12, ಟಮ್ಮಿ ಬ್ಯೂಮಾಂಟ್ 7, ಸೋಫಿಯಾ ಡಂಕ್ಲಿ 29, ಆಲಿಸ್ ಕ್ಯಾಪ್ಸೆ 19, ಡೇನಿಯಲ್ ವ್ಯಾಟ್ 43, ಆಮಿ ಜೋನ್ಸ್ 3, ಡೇನಿಯಲ್ ವ್ಯಾಟ್ 43 ರನ್, ಆಲಿಸ್ ಡೇವಿಡ್ಸನ್ ರಿಚರ್ಡ್ಸ್ ಅಜೇಯ 50, ಸೋಫಿ ಎಕ್ಲೆಸ್ಟೋನ್ 31, ಷಾರ್ಲೆಟ್ ಡೀನ್ ಅಜೇಯ 24 ರನ್ ದಾಖಲಿಸಿದ್ದಾರೆ.

ಇನ್ನು ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್ ಕಬಳಿಸಿದ್ರೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಸ್ನೇಹ ರಾಣಾ, ಹರ್ಲೀನ್ ಡಿಯೋಲ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

ಕಳೆದ ಮೂರು ಪಂದ್ಯಗಳ ಫಲಿತಾಂಶವನ್ನ ಗಮನಿಸಿದ್ರೆ, ಭಾರತದ ವನಿತೆಯರು ಮೂರಕ್ಕೆ ಮೂರು ಪಂದ್ಯ ಜಯಿಸಿದ್ದಾರೆ. ಆದ್ರೆ ಇಂಗ್ಲೆಂಡ್ ವಿರುದ್ಧದ ಹೆಡ್ ಟು ಹೆಡ್‌ ಗಮನಿಸಿದ್ರೆ, ಕಳೆದ ಐದು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಭಾರತ ಜಯಿಸಿದೆ. ಹೀಗಾಗಿ 228 ರನ್‌ಗಳ ಬೆನ್ನತ್ತಲಿರುವ ಭಾರತಕ್ಕೆ ಇಂಗ್ಲೆಂಡ್ ಪ್ರಬಲ ಸವಾಲು ಒಡ್ಡುವುದರಲ್ಲಿ ಅನುಮಾನವಿಲ್ಲ. ಹರ್ಮನ್‌ಪ್ರೀಮ್ ಕೌರ್ ಪಡೆ ಉತ್ತಮ ಆರಂಭ ಪಡೆಯಬೇಕಿದೆ.ಉಭಯ ತಂಡಗಳ ಆಟಗಾರರ ಪ್ಲೇಯಿಂಗ್ ಇಲೆವೆನ್ ಅನ್ನು ಈ ಕೆಳಗೆ ಕಾಣಬಹುದು.

ಇಂಗ್ಲೆಂಡ್ ಮಹಿಳೆಯರು (ಪ್ಲೇಯಿಂಗ್ 11): ಎಮ್ಮಾ ಲ್ಯಾಂಬ್, ಟಮ್ಮಿ ಬ್ಯೂಮಾಂಟ್, ಸೋಫಿಯಾ ಡಂಕ್ಲಿ, ಆಲಿಸ್ ಕ್ಯಾಪ್ಸೆ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ನಾಯಕಿ ಮತ್ತು ವಿಕೆಟ್ ಕೀಪರ್), ಆಲಿಸ್ ಡೇವಿಡ್ಸನ್ ರಿಚರ್ಡ್ಸ್, ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಇಸ್ಸಿ ವಾಂಗ್

ಭಾರತ ಮಹಿಳೆಯರು (ಪ್ಲೇಯಿಂಗ್ 11): ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್

Story first published: Sunday, September 18, 2022, 22:59 [IST]
Other articles published on Sep 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+