Ind vs Aus 1st ODI: ಟಾಸ್ ಗೆದ್ದ ಭಾರತದ ವನಿತೆಯರು ಬೌಲಿಂಗ್ ಆಯ್ಕೆ, Playing 11

ಹೋವ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆಯುತ್ರಿರುವ ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಮೊದಲ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ವನಿತೆಯರು ಬೌಲಿಂಗ್ ಆಯ್ದುಕೊಂಡಿದ್ದಾರೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದದಲ್ಲಿ ಮುನ್ನಡೆಯತ್ತಿರುವ ಭಾರತ ಗೆಲುವಿನ ವಿಶ್ವಾಸ ಹೊಂದಿದೆ.
ಕಳೆದ ಮೂರು ಪಂದ್ಯಗಳ ಫಲಿತಾಂಶವನ್ನ ಗಮನಿಸಿದ್ರೆ, ಭಾರತದ ವನಿತಯರು ಮೂರಕ್ಕೆ ಮೂರು ಪಂದ್ಯ ಜಯಿಸಿದ್ದಾರೆ. ಆದ್ರೆ ಇಂಗ್ಲೆಂಡ್ ವಿರುದ್ಧದ ಹೆಡ್ ಟು ಹೆಡ್ ಗಮನಿಸಿದ್ರೆ, ಕಳೆದ ಐದು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಭಾರತ ಜಯಿಸಿದೆ. ಹೀಗಾಗಿ ತವರಿನಲ್ಲಿ ಬಲಿಷ್ಟವಾಗಿರುವ 2017ರ ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಅನ್ನು ಮಣಿಸುವುದು ಭಾರತಕ್ಕೆ ಅಷ್ಟು ಸುಲಭದ ಮಾತಿಲ್ಲ.
ಇಂಗ್ಲೆಂಡ್ ವನಿತೆಯರ ತಂಡದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಆಲಿಸ್ ಕ್ಯಾಪ್ಸೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಭಾರತ ಅನುಭವಿ ಆಟಗಾರರ ಜೊತೆಗೆ ಯುವ ಆಟಗಾರ್ತಿಯರ ಸಮ್ಮಿಶ್ರಣವಿದೆ. ಉಭಯ ತಂಡಗಳ ಆಟಗಾರರ ಪ್ಲೇಯಿಂಗ್ ಇಲೆವೆನ್ ಅನ್ನು ಈ ಕೆಳಗೆ ಕಾಣಬಹುದು.
ಇಂಗ್ಲೆಂಡ್ ಮಹಿಳೆಯರು (ಪ್ಲೇಯಿಂಗ್ 11): ಎಮ್ಮಾ ಲ್ಯಾಂಬ್, ಟಮ್ಮಿ ಬ್ಯೂಮಾಂಟ್, ಸೋಫಿಯಾ ಡಂಕ್ಲಿ, ಆಲಿಸ್ ಕ್ಯಾಪ್ಸೆ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ನಾಯಕಿ ಮತ್ತು ವಿಕೆಟ್ ಕೀಪರ್), ಆಲಿಸ್ ಡೇವಿಡ್ಸನ್ ರಿಚರ್ಡ್ಸ್, ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಇಸ್ಸಿ ವಾಂಗ್
ಭಾರತ ಮಹಿಳೆಯರು (ಪ್ಲೇಯಿಂಗ್ 11): ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications