Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND W vs WI W: ಮಂದಾನ, ಕೌರ್ ಭರ್ಜರಿ ಅರ್ಧಶತಕ: ವೆಸ್ಟ್ ಇಂಡೀಸ್ ವಿರುದ್ಧ 56 ರನ್‌ಗಳ ಭರ್ಜರಿ ಜಯ

IND-W vs WI -W: India Women Defeated West Indies Women By 56 Runs In Tri Series Match

ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಸರಣಿಯಲ್ಲಿ ಭಾರತ ಮಹಿಳಾ ತಂಡ ಜಯದ ಓಟವನ್ನು ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತ್ರಿಕೋನ ಸರಣಿಯ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.

ಜನವರಿ 23, ಸೋಮವಾರ ದಕ್ಷಿಣ ಆಫ್ರಿಕಾದ ಈಸ್ಟ್ ಲಂಡನ್‌ನ ಬಫಲೋ ಪಾರ್ಕ್‌ನಲ್ಲಿ ನಡೆದ ವೆಸ್ಟ್ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಭಾರತದ ವನಿತೆಯರು ಅತ್ಯುತ್ತಮ ಪ್ರದರ್ಶನ ನೀಡಿದರು. ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ಸವಾಲಿನ ಮೊತ್ತ ಕಲೆ ಹಾಕಲು ಕಾರಣವಾದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 8.2 ಓವರ್ ಗಳಲ್ಲಿ 52 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಾಧಾರಣ ಆರಂಭ ಪಡೆಯಿತು. ಆದರೆ ನಂತರ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಜೋಡಿ ವೆಸ್ಟ್ ಇಂಡೀಸ್ ಬೌಲರ್ ಗಳ ಬೆವರಿಳಿಸಿದರು.

IND-W vs WI -W: India Women Defeated West Indies Women By 56 Runs In Tri Series Match

ಮಂದಾನ, ಕೌರ್ ಅರ್ಧಶತಕ

72 ಎಸೆತಗಳಲ್ಲಿ ಈ ಜೋಡಿ ಅಜೇಯ 112 ರನ್ ಕಲೆ ಹಾಕುವ ಮೂಲಕ ಭಾರತ ಉತ್ತಮ ಮೊತ್ತ ಗಳಿಸಿತು. ಸ್ಮೃತಿ ಮಂದಾನ 51 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ಸಹಿತ ಅಜೇಯ 74 ರನ್ ಗಳಸಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ 35 ಎಸೆತಗಳಲ್ಲಿ 8 ಬೌಂಡರಿ ಸಹಿತ 56 ರನ್ ಗಳಿಸಿದರು.

ನಿಗದಿತ 20 ಓವರ್ ಗಳಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 167 ರನ್‌ಗಳನ್ನು ಕಲೆಹಾಕಿತು. ಈ ಮೊತ್ತವನ್ನು ಕಲೆಹಾಕಿದ ವೆಸ್ಟ್ ಇಂಡೀಸ್ ವನಿತೆಯರು 20 ಓವರ್ ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 111 ರನ್‌ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಭಾರತ 56 ರನ್‌ಗಳ ಭರ್ಜರಿ ಸಾಧಿಸಿತು.

ದೀಪ್ತಿ ಶರ್ಮಾ 4 ಓವರ್ ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 4 ಓವರ್ ಗಳಲ್ಲಿ 16 ನೀಡಿ 1 ವಿಕೆಟ್ ಪಡೆದರು, ರಾಧಾ ಯಾದವ್ 4 ಓವರ್ ಗಳಲ್ಲಿ ಕೇವಲ 10 ರನ್ ನೀಡಿ 1 ವಿಕೆಟ್ ಪಡೆದುಕೊಂಡರು. ಅಜೇಯ ಅರ್ಧಶತಕ ಗಳಿಸಿ ಮಿಂಚಿದ ಸ್ಮೃತಿ ಮಂದಾನ ಪಂದ್ಯದ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.

IND-W vs WI -W: India Women Defeated West Indies Women By 56 Runs In Tri Series Match

ಉಭಯ ತಂಡಗಳ ಆಡುವ ಬಳಗ

ಭಾರತ: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ಮೃತಿ ಮಂದಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೇವಿಕಾ ವೈದ್ಯ, ದೀಪ್ತಿ ಶರ್ಮಾ, ಅಮನ್ಜೋತ್ ಕೌರ್, ರಾಧಾ ಯಾದವ್, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್.

ವೆಸ್ಟ್ ಇಂಡೀಸ್: ಹೇಲಿ ಕ್ರಿಸ್ಟನ್ ಮ್ಯಾಥ್ಯೂಸ್ (ನಾಯಕಿ), ಶನಿಕಾ ಜಮಿಲಾ ಬ್ರೂಸ್, ಶೆಮೈನ್ ಕ್ಯಾಂಪ್ಬೆಲ್, ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್), ಶಾಮಿಲಿಯಾ ಕೊನ್ನೆಲ್, ಬ್ರಿಟ್ನಿ ಕೂಪರ್, ಅಫಿ ಫ್ಲೆಚರ್, ಶಬಿಕಾ ಗಜ್ನಾಬಿ, ಕರಿಷ್ಮಾ ರಾಮ್ಹರಾಕ್, ಚೆಡಿಯನ್ ನೇಷನ್, ಕೇಸಿಯಾ ಶುಲ್ಟ್ಜ್.

Story first published: Tuesday, January 24, 2023, 8:42 [IST]
Other articles published on Jan 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+