For Quick Alerts
ALLOW NOTIFICATIONS  
For Daily Alerts
 

IND W vs WI W: ಭಾರತದ ಉತ್ತಮ ಆಲ್‌ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ

IND-W vs WI -W: India Women Won By 8 Wickets Against West Indies Women Tri Series Match

ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಸರಣಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲಿನ ಪರಿಚಯವೇ ಇಲ್ಲದಂತಾಗಿದೆ. ಸೋಮವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ದಕ್ಷಿಣ ಆಫ್ರಿಕಾದ ಈಸ್ಟ್ ಲಂಡನ್‌ನ ಬಫಲೋ ಪಾರ್ಕ್‌ನಲ್ಲಿ ನಡೆದ ವೆಸ್ಟ್ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಉತ್ತಮ ಆಲ್‌ರೌಂಡ್ ಆಟ ಪ್ರದರ್ಶಿಸಿತು. ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಭಾರತದ ಉತ್ತಮ ಬೌಲಿಂಗ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ರನ್ ಗಳಿಸಲು ಪರದಾಡಿತು. ನಾಯಕಿ ಹೇಯ್ಲಿ ಮ್ಯಾಥ್ಯೂಸ್ 34 ಎಸೆತಗಳಲ್ಲಿ 34 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ.

ರಶಾದಾ ವಿಲಿಯಮ್ಸ್ 8 ರನ್ ಗಳಿಸಿ ಔಟಾದರೆ, ಶೆಮೈನ್ ಕ್ಯಾಂಪ್‌ಬೆಲ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಜೆನಾಬ ಜೋಸೆಫ್ 15 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಔಟಾದರು. ಶಬಿಕಾ ಗಜ್ನಾಬಿ 12 ಮತ್ತು ಜಿಯಾದ ಜೇಮ್ಸ್ 21 ರನ್ ಗಳಿಸಿದರೆ, ಆಲಿಯಾ ಅಲ್ಲೆಯ್ನೆ 9 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 94 ರನ್ ಕಲೆಹಾಕಿತು.

ದೀಪ್ತಿ ಶರ್ಮಾ 4 ಓವರ್‍‌ ಗಳಲ್ಲಿ 2 ಮೇಡನ್ ಓವರ್ ಮಾಡಿದ್ದಲ್ಲದೆ, ಕೇವಲ 11 ರನ್‌ಗಳನ್ನು ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಪೂಜಾ ವಸ್ತ್ರಾಕರ್ 4 ಓವರ್ ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ರಾಜೇಶ್ವರ್ ಗಾಯಕ್ವಾಡ್ 4 ಓವರ್ ಗಳಲ್ಲಿ ಕೇವಲ 9 ರನ್‌ ನೀಡಿ ಒಂದು ವಿಕೆಟ್ ಪಡೆದರು.

IND-W vs WI -W: India Women Won By 8 Wickets Against West Indies Women Tri Series Match

ಜೆಮಿಯಾ ರೋಡ್ರಿಗಸ್ ಉತ್ತಮ ಆಟ

ಈ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ಆರಂಭದಲ್ಲೇ ಸ್ಮೃತಿ ಮಂದಾನ (5) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಜೆಮಿಮಾ ರೋಡ್ರಿಗಸ್ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 2ನೇ ವಿಕೆಟ್‌ಗೆ ಹರ್ಲೀನ್ ಡಿಯೋಲ್ ಜೊತೆಗೂಡಿ 33 ರನ್‌ಗಳ ಜೊತೆಯಾಟ ಆಡಿದರು.

13 ರನ್‌ ಗಳಿಸಿದ ಹರ್ಲೀನ್ ಡಿಯೋಲ್ ಔಟಾಗುತ್ತಿದ್ದಂತೆ ನಾಯಕಿ ಹರ್ಮನ್‌ಪ್ರೀತ್‌ ಕೌರ್ ಜೊತೆಯಾ ಜೆಮಿಮಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೆಮಿಮಾ ರೋಡ್ರಿಗಸ್ 39 ಎಸೆತಗಳಲ್ಲಿ 5 ಬೌಂಡರಿ ಸಹಿತ 42 ರನ್ ಗಳಿಸಿದರೆ, ಹರ್ಮನ್‌ಪ್ರೀತ್ ಕೌರ್ 23 ಎಸೆತಗಲ್ಲಿ 4 ಬೌಂಡರಿ ಸಹಿತ 32 ರನ್ ಗಳಿಸಿದರು.

IND-W vs WI -W: India Women Won By 8 Wickets Against West Indies Women Tri Series Match

ಉಭಯ ತಂಡಗಳ ಆಡುವ ಬಳಗ

ಭಾರತ: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ಮೃತಿ ಮಂದಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೇವಿಕಾ ವೈದ್ಯ, ದೀಪ್ತಿ ಶರ್ಮಾ, ಅಮನ್ಜೋತ್ ಕೌರ್, ರೇಣುಕಾ ಸಿಂಗ್ ಠಾಕೂರ್, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್.

ವೆಸ್ಟ್ ಇಂಡೀಸ್: ಹೇಯ್ಲಿ ಕ್ರಿಸ್ಟನ್ ಮ್ಯಾಥ್ಯೂಸ್ (ನಾಯಕಿ), ಶೆಮೈನ್ ಕ್ಯಾಂಪ್ಬೆಲ್, ಶಬಿಕಾ ಗಜ್ನಾಬಿ, ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್), ಝೈದಾ ಜೇಮ್ಸ್, ಜೆನಾಬ್ ಜೋಸೆಫ್, ಆಲಿಯಾ ಅಲ್ಲೆಯ್ನೆ, ಶಾಮಿಲಿಯಾ ಕೊನ್ನೆಲ್, ಅಫಿ ಫ್ಲೆಚರ್, ತ್ರಿಶಾನ್ ಹೋಲ್ಡರ್, ಜೆನಿಲಿಯಾ ಗ್ಲಾಸ್ಗೊ.

Story first published: Monday, January 30, 2023, 23:02 [IST]
Other articles published on Jan 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+