For Quick Alerts
ALLOW NOTIFICATIONS  
For Daily Alerts
 

Independence Day Special: ಸ್ವಾತಂತ್ರ್ಯದ ಮೊದಲು ಭಾರತೀಯ ಕ್ರಿಕೆಟ್ ತಂಡಗಳ ನಾಯಕರು

ಕ್ರಿಕೆಟ್ ಇತಿಹಾಸದಲ್ಲಿ ಭಾರತ ಕ್ರಿಕೆಟ್ ತಂಡವು ಸುದೀರ್ಘ ಕಾಲವನ್ನು ಹೊಂದಿದೆ. ಭಾರತ ತಂಡ 1926ರ ಮೇ 31ರಂದು ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ (ಈಗ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ನ ಪೂರ್ಣ ಸದಸ್ಯ ರಾಷ್ಟ್ರವಾಯಿತು.

25 ಜೂನ್ 1932ರಂದು ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ತಂಡಗಳ ನಂತರ ಭಾರತ ಆರನೇ ಟೆಸ್ಟ್ ರಾಷ್ಟ್ರವಾಯಿತು. ಭಾರತ ಪುರುಷರ ಕ್ರಿಕೆಟ್ ತಂಡವನ್ನು ಮೊದಲ ಬಾರಿಗೆ ಸಿ.ಕೆ. ನಾಯುಡು ಅವರು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಮುನ್ನಡೆಸಿದ್ದರು.

Independence Day Special: Indian Cricket Teams Captains Before Independence

ಎರಡನೆಯ ಮಹಾಯುದ್ಧದ ಮೊದಲು ಭಾರತ ಕೇವಲ ಏಳು ಟೆಸ್ಟ್‌ ಪಂದ್ಯಗಳನ್ನು ಆಡಿದರು. ಅದು ಇಂಗ್ಲೆಂಡ್ ವಿರುದ್ಧ. ಐದು ಪಂದ್ಯಗಳನ್ನು ಸೋತಿದ್ದರೆ, ಎರಡು ಬಾರಿ ಡ್ರಾ ಆಗಿತ್ತು.

ಭಾರತೀಯ ಕ್ರಿಕೆಟ್ ತಂಡವು ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನಿಗೂ ವಿಶೇಷವಾಗಿಗಿರುತ್ತದೆ. ಈ ಬಾರಿ ಭಾರತ ದೇಶವು 76ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತದೆ.

ಇನ್ನು 1947-48ರಲ್ಲಿ ಲಾಲಾ ಅಮರನಾಥ್ ನಾಯಕತ್ವದ ಭಾರತ ತಂಡವು ಸರ್ ಡೊನಾಲ್ಡ್ ಬ್ರಾಡ್ಮನ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ ಆಡಿದಾಗ ಇಂಗ್ಲೆಂಡ್ ಹೊರತಾಗಿ ಎದುರಾಳಿಗಳ ವಿರುದ್ಧ ಅವರ ಮೊದಲ ಪಂದ್ಯವೆನಿಸಿತು.

1976ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬೆಂಗಳೂರಿನಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶಾಂತಾ ರಂಗಸ್ವಾಮಿ ಭಾರತೀಯ ಮಹಿಳಾ ತಂಡವನ್ನು ಮುನ್ನಡೆಸಿದರು.

ಡಯಾನಾ ಎಡುಲ್ಜಿ 1978ರಲ್ಲಿ ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಮಹಿಳಾ ಏಕದಿನ ಅಂತಾರಾಷ್ಟ್ರೀಯ ನಾಯಕಿಯಾಗಿದ್ದರು.

ಮಿಥಾಲಿ ರಾಜ್ 2006ರಲ್ಲಿ ಇಂಗ್ಲೆಂಡ್ ವಿರುದ್ಧ ಡರ್ಬಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮೊದಲ ಮಹಿಳಾ ಟಿ20 ತಂಡದ ನಾಯಕಿಯಾದರು.

ಕೃಷ್ಣಮಾಚಾರಿ ಶ್ರೀಕಾಂತ್ 1978-79ರಲ್ಲಿ ಪಾಕಿಸ್ತಾನದ ವಿರುದ್ಧ ಪುರುಷರ ಅಂಡರ್-19 ಕ್ರಿಕೆಟ್ ತಂಡಕ್ಕೆ ಮೊದಲ ಟೆಸ್ಟ್ ನಾಯಕರಾದರು. ಆದರೆ ರವಿಶಾಸ್ತ್ರಿ 1981ರಲ್ಲಿ ಪುರುಷರ ಅಂಡರ್-19 ಕ್ರಿಕೆಟ್ ತಂಡಕ್ಕೆ ಮೊದಲ ಏಕದಿನ ಅಂತಾರಾಷ್ಟ್ರೀಯ ನಾಯಕರಾಗಿದ್ದರು.

ಹರ್ಮನ್‌ಪ್ರೀತ್ ಕೌರ್ ಪ್ರಸ್ತುತ ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾರೆ ಮತ್ತು ರೋಹಿತ್ ಶರ್ಮಾ ಪ್ರಸ್ತುತ ಭಾರತ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.

ಸ್ವಾತಂತ್ರ್ಯದ ಮೊದಲು ಭಾರತೀಯ ಕ್ರಿಕೆಟ್ ತಂಡಗಳ ನಾಯಕರು

1. ಸಿ.ಕೆ. ನಾಯುಡು: 1932ರಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮೊದಲ ನಾಯಕರಾಗಿದ್ದು ಸಿ.ಕೆ. ನಾಯುಡು. ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅವರು, ಮೂರು ಪಂದ್ಯಗಳಲ್ಲಿ ಸೋಲು ಕಂಡರೆ, 1 ಪಂದ್ಯವು ಡ್ರಾನಲ್ಲಿ ಅಂತ್ಯವಾಗಿತ್ತು.

2. ವಿಜಯನಗರದ ಮಹಾರಾಜಕುಮಾರ್: ಸ್ವಾತಂತ್ರ್ಯದ ಮೊದಲು ಅಂದರೆ, 1936ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಎರಡನೇ ನಾಯಕರಾಗಿದ್ದು ವಿಜಯನಗರದ ಮಹಾರಾಜಕುಮಾರ್. ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅವರು, ಎರಡು ಪಂದ್ಯಗಳಲ್ಲಿ ಸೋತಿದ್ದರೆ, 1 ಪಂದ್ಯವು ಡ್ರಾಗೊಂಡಿತು.

3. ಇಫ್ತಿಕರ್ ಅಲಿ ಖಾನ್ ಪಟೌಡಿ: 1946ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮೂರನೇ ನಾಯಕರಾಗಿದ್ದು ಇಫ್ತಿಕರ್ ಅಲಿ ಖಾನ್ ಪಟೌಡಿ. ಅವರು ಇಂಗ್ಲೆಂಡ್ ಮೂರು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, ಒಂದು ಪಂದ್ಯ ಸೋಲು ಕಂಡರೆ, ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು.

ಆಗಸ್ಟ್ 15 ಭಾರತಕ್ಕೆ ಏಕೆ ವಿಶೇಷ?

ಆಗಸ್ಟ್ 15 ಭಾರತಕ್ಕೆ ರಾಷ್ಟ್ರೀಯ ಹಬ್ಬದ ದಿನವಾಗಿದೆ. ಈ ದಿನ ಭಾರತವು 200 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರ ಗುಲಾಮಗಿರಿಯಿಂದ ಸ್ವಾತಂತ್ರ್ಯವನ್ನು ಪಡೆಯಿತು.

ಇದಕ್ಕಾಗಿ ಲೆಕ್ಕವಿಲ್ಲದಷ್ಟು ಹೋರಾಟಗಾರರು ತಮ್ಮ ಜೀವವನ್ನು ತ್ಯಾಗ ಮಾಡಿದರು. ಭಾರತವು 1947ರ ಆಗಸ್ಟ್ 15ರಂದು ಸ್ವತಂತ್ರವಾಯಿತು ಮತ್ತು ನಂತರ ಈ ದಿನವನ್ನು ಪ್ರತಿ ವರ್ಷ ಭಾರತದ ಸ್ವಾತಂತ್ರ್ಯ ದಿನವಾಗಿ ಆಚರಿಸಲಾಗುತ್ತದೆ.

Story first published: Thursday, August 10, 2023, 21:40 [IST]
Other articles published on Aug 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+