Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೋಲಿನ ದವಡೆಯಿಂದ ಪಾರಾದ ಭಾರತ 'ಎ'ಗೆ ರೋಚಕ ಜಯ

ದಂಬುಲ್ಲಾ: ಡೆತ್ ಓವರ್‌ಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಅಬ್ಬರಿಸಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ರನ್‌ಗಳಿಂದ ಆತಿಥೇಯ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.

ಶ್ರೀಲಂಕಾ ಒಂದು ಹಂತದಲ್ಲಿ 47 ಓವರ್‌ಗಳಲ್ಲಿ 6 ವಿಕೆಟ್‌ಗೆ 261 ರನ್‌ ಸೇರಿಸಿ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಲಂಕಾ 18 ಎಸೆತಗಳಲ್ಲಿ 16 ರನ್‌ ಕಲೆ ಹಾಕಬೇಕಿತ್ತು. 49ನೇ ಓವರ್‌ ಬೌಲ್‌ ಮಾಡಿದ ಅರ್ಷದ್ ಖಾನ್‌ ಬಿಗುವಿನ ದಾಳಿ ನಡೆಸಿದರು. ಈ ಓವರ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಪಡೆದ ಅರ್ಷದ್ ಖಾನ್‌ ಲಂಕಾ ಗೆಲುವಿನ ಆಸೆಗೆ ಕೊಳ್ಳಿ ಇಟ್ಟರು.

India A

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ನಿರೋಶನ್ ಡಿಕ್ವೆಲ್ಲಾ, ಅವಿಷ್ಕಾ ಫರ್ನಾಂಡೋ ಜೋಡಿ ಮೊದಲ ವಿಕೆಟ್‌ಗೆ 16.3 ಓವರ್‌ಗಳಲ್ಲಿ 93 ರನ್‌ ಸೇರಿಸಿತು. ಅವಿಷ್ಕಾ ಫರ್ನಾಂಡೋ 7 ಬೌಂಡರಿ ನೆರವಿನಿಂದ 45 ರನ್‌ ಸಿಡಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ ನಿರೋಶನ್ ಡಿಕ್ವೆಲ್ಲಾ 6 ಬೌಂಡರಿ ಸಹಿತ 47 ರನ್‌ ಬಾರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಜೊತೆಯಾಟ

4ನೇ ವಿಕೆಟ್‌ಗೆ ಸದೀರ ಸಮರವಿಕ್ರಮ ಹಾಗೂ ಸಹನ್ ಅರಚ್ಚಿಗೆ ಜೋಡಿ 74 ಎಸೆತಗಳಲ್ಲಿ 78 ರನ್‌ ಸೇರಿಸಿತು. ಸದೀರ ಸಮರವಿಕ್ರಮ 4 ಬೌಂಡರಿ ಸಹಾಯದಿಂದ 46 ರನ್‌ ಬಾರಿಸಿದರೆ, ನಾಯಕ ಸಹನ್ ಅರಚ್ಚಿಗೆ 72 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 74 ರನ್‌ ಬಾರಿಸಿ ಔಟ್ ಆದರು. ಉಳಿದಂತೆ ವನುಜಾ ಸಹನ್ 23 ರನ್‌ ಸಿಡಿಸಿದರು. ಶ್ರೀಲಂಕಾ ಎ ತಂಡ 48.5 ಓವರ್‌ಗಳಲ್ಲಿ 269 ರನ್‌ ಸೇರಿಸಿ ಆಲೌಟ್ ಆಯಿತು.

ಭಾರತದ ಪರ ಅನುಕೂಲ್ ರಾಯ್, ಅರ್ಷದ್ ಖಾನ್‌, ಆಯುಷ್ ಬದೋನಿ, ವಿಪ್ರಜ್ ನಿಗಮ್ ತಲಾ 2 ವಿಕೆಟ್ ಪಡೆದರು.

ವೈಭವ್ ಫೇಲ್

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಕಳಪೆಯಾಗಿತ್ತು. ಯುವ ಆಟಗಾರ ವೈಭವ್ ಸೂರ್ಯವಂಶಿ 4 ಬೌಂಡರಿ ಸಹಿತ 14 ರನ್ ಬಾರಿಸಿ ಔಟ್ ಆದರು. ವಿಕೆಟ್‌ ಕೀಪರ್ ಬ್ಯಾಟರ್‌ ಪ್ರಭ್‌ಸಿಮ್ರನ್‌ ಸಿಂಗ್ ಸಹ ಬೇಗನೆ ವಿಕೆಟ್‌ ಒಪ್ಪಿಸಿದರು. ಪ್ರಿಯಾಂಶ್ ಆರ್ಯ ಅವರ ಆಟ 32 ರನ್‌ಗಳಿಗೆ ಕೊನೆಯಾಯಿತು.

4ನೇ ವಿಕೆಟ್‌ಗೆ ರುತುರಾಜ್ ಗಾಯಕ್ವಾಡ್‌ ಹಾಗೂ ನಾಯಕ ತಿಲಕ್ ವರ್ಮಾ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 180 ಎಸೆತಗಳಲ್ಲಿ 148 ರನ್‌ ಸೇರಿಸಿತು. ಈ ಹಂತದಲ್ಲಿ ಶತಕ ಬಾರಿಸಿದ್ದ ರುತುರಾಜ್ (101) ಔಟ್ ಆದರು. ತಿಲಕ್ ವರ್ಮಾ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 60 ರನ್‌ ಸಿಡಿಸಿದರು. ಆಯುಷ್ ಬದೋನಿ (24), ಸೂರ್ಯಾಂಶ್ ಶೆಡ್ಗೆ (ಅಜೇಯ 26) ತಂಡಕ್ಕೆ ನೆರವಾದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 277 ರನ್‌ ಸೇರಿಸಿತು.

Story first published: Tuesday, June 9, 2026, 18:59 [IST]
Other articles published on Jun 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+