ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ 'ಎ' ತಂಡದ ಮಡಿಲಿಗೆ ತ್ರಿಕೋನ ಏಕದಿನ ಸರಣಿ

ಲಂಡನ್, ಜುಲೈ 3: ಸ್ಥಿರ ಪ್ರದರ್ಶನ ನೀಡಿದ ಭಾರತದ ಯುವ ಆಟಗಾರರು ಲಂಡನ್‌ನಲ್ಲಿ ನಡೆದ ಮೂರು ದೇಶಗಳ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದಾರೆ.

ಕೆನ್ನಿಂಗ್ಟನ್ ಓವಲ್‌ನಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 'ಎ' ತಂಡದ ಆಟಗಾರರು ಇಂಗ್ಲೆಂಡ್ ಲಯನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಬಗ್ಗಬಡಿಯಿತು.

ಇಂದಿನಿಂದ ಆಂಗ್ಲರ ನಾಡಲ್ಲಿ ಚುಟುಕು ಕ್ರಿಕೆಟ್ ಕದನ ಶುರುಇಂದಿನಿಂದ ಆಂಗ್ಲರ ನಾಡಲ್ಲಿ ಚುಟುಕು ಕ್ರಿಕೆಟ್ ಕದನ ಶುರು

'ಐಸಿಸಿ ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರರಾಗಿರುವ ತಂಡದ ತರಬೇತುದಾರ ರಾಹುಲ್ ದ್ರಾವಿಡ್ ಅವರಿಗೆ 'ಎ' ತಂಡದ ಯುವ ಆಟಗಾರರು ಗೆಲುವಿನ ಕಾಣಿಕೆ ನೀಡಿದರು.

ವೇಗದ ಬೌಲರ್‌ಗಳು ನೀಡಿದ ತಿರುಗೇಟು ಮತ್ತು ರಿಷಬ್ ಪಂತ್ ಅವರ ಸಂಯಮದ ಆಟದಿಂದ ಭಾರತ ಸುಲಭವಾಗಿ ಗೆಲುವಿನ ದಡ ಸೇರಿತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಾಯಕ ಶ್ರೇಯಸ್ ಅಯ್ಯರ್ ಅವರ ನಿರ್ಧಾರವನ್ನು ವೇಗಿಗಳಾದ ದೀಪಕ್ ಚಾಹರ್ ಮತ್ತು ಖಲೀಲ್ ಅಹ್ಮದ್ ಸಮರ್ಥಿಸಿಕೊಂಡರು.

33 ರನ್ ಆಗುವಷ್ಟರಲ್ಲಿ ಇಂಗ್ಲೆಂಡ್ ಲಯನ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿದ್ದರು.

ಆದರೆ, ಮೂರನೇ ವಿಕೆಟ್‌ಗೆ ಜೊತೆಗೂಡಿದ ಸ್ಯಾಮ್ ಹೈನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಭಾರತದ ಬೌಲರ್‌ಗಳನ್ನು ತೀವ್ರವಾಗಿ ಕಾಡಿದರು.

ಇಬ್ಬರೂ 152 ರನ್‌ಗಳ ಜೊತೆಯಾಟ ನೀಡಿದರು. ಅಬ್ಬರದ ಆಟವಾಡಿದ ಲಿವಿಂಗ್‌ಸ್ಟೋನ್ 82 ಎಸೆತಗಳಲ್ಲಿ 83 ರನ್ ಬಾರಿಸಿದರು. ಇದರಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು.

ಆಸ್ಟ್ರೇಲಿಯಾಕ್ಕಿಂತ ಭಾರತ ಇಂಗ್ಲೆಂಡ್ ಗೆ ಹೆಚ್ಚು ಸವಾಲೆನಿಸಲಿದೆ: ಕೊಹ್ಲಿ

ವಿಕೆಟ್ ಕಳೆದುಕೊಂಡ ಲಯನ್ಸ್

ವಿಕೆಟ್ ಕಳೆದುಕೊಂಡ ಲಯನ್ಸ್

ರನ್ ಗತಿ ಹೆಚ್ಚಿಸುವ ಆತುರದಲ್ಲಿದ್ದ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಇಂಗ್ಲೆಂಡ್ ಲಯನ್ಸ್ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಬಂದಿತು.

ಇನ್ನೊಂದೆಡೆ ತಾಳ್ಮೆಯ ಆಟವಾಡಿದ ಸ್ಯಾಮ್ ಹೈನ್ 122 ಎಸೆತಗಳಲ್ಲಿ 108 ರನ್ ಗಳಿಸಿದ್ದಾಗ ಚಾಹರ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಪಂತ್‌ಗೆ ಕ್ಯಾಚಿತ್ತರು.

ಇಂಗ್ಲೆಂಡ್ 6 ವಿಕೆಟ್‌ಗಳನ್ನು ಕೇವಲ 53 ರನ್‌ಗಳಿಗೆ ಕಳೆದುಕೊಂಡಿದ್ದರಿಂದ ಅದರ ರನ್ ವೇಗಕ್ಕೆ ಕಡಿವಾಣ ಬಿದ್ದಿತು.

ರಿಷಬ್ ಪಂತ್ ಜವಾಬ್ದಾರಿಯ ಆಟ

ರಿಷಬ್ ಪಂತ್ ಜವಾಬ್ದಾರಿಯ ಆಟ

265 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಏಳನೇ ಓವರ್‌ನಲ್ಲಿಯೇ ಆಘಾತ ಎದುರಾಯಿತು. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಪೃಥ್ವಿ ಶಾ 15 ರನ್ ಗಳಿಸಿ ಔಟಾದರು.

ಮಯಂಕ್ ಅಗರ್ವಾಲ್ ಮತ್ತು ಶುಭ್‌ಮನ್ ಗಿಲ್ ಪಾಲುದಾರಿಕೆ ಬೆಳೆಯುತ್ತಿದ್ದಂತೆ 20 ರನ್ ಗಳಿಸಿದ್ದ ಗಿಲ್, ಲಿಯಾಮ್ ಡಾಸನ್‌ಗೆ ವಿಕೆಟ್ ಒಪ್ಪಿಸಿದರು. ಎರಡು ಓವರ್ ಅಂತರದಲ್ಲಿಯೇ 40 ರನ್ ಗಳಿಸಿದ್ದ ಮಯಂಕ್ ಅಗರ್ವಾಲ್ ಕೂಡ ಪೆವಿಲಿಯನ್ ಹಾದಿ ಹಿಡಿದರು.

83 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಹನುಮ ವಿಹಾರಿ ಆಸರೆಯಾದರು. ಇಬ್ಬರೂ ನಾಲ್ಕನೆಯ ವಿಕೆಟ್‌ಗೆ 67 ರನ್ ಪೇರಿಸಿದರು.

ಹನುಮ ವಿಹಾರಿ ಔಟಾದಾಗ ಭಾರತಕ್ಕೆ ಇನ್ನೂ 71 ರನ್‌ಗ ಅವಶ್ಯಕತೆ ಇತ್ತು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಬ್ ಪಂತ್ ಅವರನ್ನು ಕೂಡಿಕೊಂಡ ಕೃನಾಲ್ ಪಾಂಡ್ಯ ಯಾವುದೇ ಅಪಾಯಕ್ಕೆ ಅವಕಾಶ ನೀಡದಂತೆ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು.

ಜಾಗರೂಕತೆಯಿಂದ ಆಡುತ್ತಿದ್ದ ರಿಷಬ್ ಪಂತ್, ಅವಕಾಶ ಸಿಕ್ಕಾಗಲೆಲ್ಲ ಬೌಂಡರಿಗಳನ್ನು ಬಾರಿಸಿ ರನ್ ಗತಿ ನಿಧಾನವಾಗದಂತೆ ನೋಡಿಕೊಂಡರು. ಅಂತಿಮವಾಗಿ ಅವರು 62 ಎಸೆತಗಳಲ್ಲಿ 64 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೃನಾಲ್ ಪಾಂಡ್ಯ 34 ರನ್ ಬಾರಿಸಿದರು.

ಸಂಕ್ಷಿಪ್ತ ಸ್ಕೋರ್

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಲಯನ್ಸ್: 264/9 (50 ಓವರ್). ಸ್ಯಾನ್ ಹೈನ್ 108, ಲಿಯಾಮ್ ಲಿವಿಂಗ್‌ಸ್ಟೋನ್ 83, ಸ್ಟೀವನ್ ಮುಲ್ಲಾನಿ 17. ಖಲೀಲ್ ಅಹ್ಮದ್ 48/3, ಶಾರ್ದೂಲ್ ಠಾಕೂರ್ 42/2, ದೀಪಕ್ ಚಾಹರ್ 58/3.

ಭಾರತ 'ಎ': 267/5 (48.2 ಓವರ್): ರಿಷಬ್ ಪಂತ್ 64*, ಶ್ರೇಯಸ್ ಅಯ್ಯರ್ 44, ಮಯಂಕ್ ಅಗರ್ವಾಲ್ 40, ಹನುಮ ವಿಹಾರಿ 37, ಕೃನಾಲ್ ಪಾಂಡ್ಯ 34*. ಲಿಯಾಮ್ ಡಾಸನ್ 37/2, ಸ್ಟೀವನ್ ಮುಲ್ಲಾನಿ 37/1, ಮ್ಯಾಥ್ಯೂ ಫಿಷರ್ 50/1.
ಫಲಿತಾಂಶ: ಭಾರತಕ್ಕೆ 5 ವಿಕೆಟ್‌ ಜಯ ಮತ್ತು ತ್ರಿಕೋನ ಸರಣಿ.

Story first published: Tuesday, July 3, 2018, 14:58 [IST]
Other articles published on Jul 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X