ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾಕ್ಕಿಂತ ಭಾರತ ಇಂಗ್ಲೆಂಡ್ ಗೆ ಹೆಚ್ಚು ಸವಾಲೆನಿಸಲಿದೆ: ಕೊಹ್ಲಿ

ಆಸ್ಟ್ರೇಲಿಯಾಕ್ಕಿಂತ ಭಾರತ ಇಂಗ್ಲೆಂಡ್ ಗೆ ಹೆಚ್ಚು ಸವಾಲೆನಿಸಲಿದೆ | Oneindia kannada
England will find India tougher than Australia: Virat Kohli

ಲಂಡನ್, ಜು. 2: ಇಂಗ್ಲೆಂಡ್ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ 5-0ಯಿಂದ ಸೋಲಿಸಿತ್ತು. ಅದಾಗಿ ಟಿ20ಯಲ್ಲೂ ಆಸ್ಟ್ರೇಲಿಯಾಕ್ಕೆ ಸೋಲಿನ ಮುಖಭಂಗವಾಗಿತ್ತು. ಆದರೆ ಆಸ್ಟ್ರೇಲಿಯಾವನ್ನು ಸೋಲಿಸಿದಷ್ಟು ಸುಲಭವಾಗಿ ಭಾರತವನ್ನು ಸೋಲಿಸೋದು ಇಂಗ್ಲೆಂಡ್ ಗೆ ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸ್ಪೇನಿನ ವಿಶ್ವಕಪ್ ಹೀರೋ ಆಂಡ್ರೆಸ್ ಇನಿಯಸ್ಟಾ ನಿವೃತ್ತಿಸ್ಪೇನಿನ ವಿಶ್ವಕಪ್ ಹೀರೋ ಆಂಡ್ರೆಸ್ ಇನಿಯಸ್ಟಾ ನಿವೃತ್ತಿ

ಮುಂಬರಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಇಂಗ್ಲೆಂಡ್ ಗೆ ಕಠಿಣ ಸವಾಲೊಡ್ಡಲು ಬಯಸಿದೆ ಎಂದು ಕೊಹ್ಲಿ ತಿಳಿಸಿದರು. ಇಂಗ್ಲೆಂಡ್ ನ ಓಲ್ಡ್ ಟ್ರಾಫರ್ಡ್ ನಲ್ಲಿ ಮಂಗಳವಾರ ಈ ಟಿ20 ಸರಣಿ ಆರಂಭಗೊಳ್ಳಲಿದೆ. ಇಂಗ್ಲೆಂಡ್ ಎದುರು ಐದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನೂ ಭಾರತ ಆಡಲಿದ್ದು, ಸೆಪ್ಟೆಂಬರ್ ವರೆಗೂ ಭಾರತ ಇಂಗ್ಲೆಂಡ್ ನಲ್ಲಿರಲಿದೆ.

ಆಸ್ಟ್ರೇಲಿಯಾದ ತಂಡದ ಇಂಗ್ಲೆಂಡ್ ಪ್ರವಾಸ ಸರಣಿಯ ವೇಳೆ ಇಂಗ್ಲೆಂಡ್ ಆಕರ್ಷಕ ಆಟದಿಂದ ಮಿಂಚಿತ್ತು. ಆಸ್ಟ್ರೇಲಿಯಾ ತಂಡದಲ್ಲಿ ಸ್ಟಾರ್ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ದೇವಿಡ್ ವಾರ್ನರ್ ಇಲ್ಲದಿದ್ದುದು ಒಂದು ರೀತಿಯಲ್ಲಿ ಆಸ್ಟ್ರೇಲಿಯಾಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು. ಒಂದು ವರ್ಷಗಳ ಬ್ಯಾನ್ ಗೆ ಒಳಗಾಗಿರುವ ವಾರ್ನರ್ ಮತ್ತು ಸ್ಮಿತ್ ಬೆಂಬಲವಿಲ್ಲದ ಆಸೀಸ್ ತಂಡ ಇಂಗ್ಲೆಂಡ್ ಎದುರು ಹೀನಾಯವಾಗಿ ಸೋತಿತ್ತು.

ಸ್ಟಾನ್ಲೇಕ್ ದಾಳಿಗೆ ತತ್ತರಿಸಿದ ಪಾಕ್: ಆಸೀಸ್‌ಗೆ ಭರ್ಜರಿ ಜಯಸ್ಟಾನ್ಲೇಕ್ ದಾಳಿಗೆ ತತ್ತರಿಸಿದ ಪಾಕ್: ಆಸೀಸ್‌ಗೆ ಭರ್ಜರಿ ಜಯ

ಈ ವಿಚಾರವನ್ನು ಮನದಲ್ಲಿಟ್ಟು ಕೊಹ್ಲಿ ಪಂದ್ಯದ ಮುನ್ನಾದಿನವಾದ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿಜಕ್ಕೂ ಭಾರತ ತಂಡ ಆಸ್ಟ್ರೇಲಿಯಾಕ್ಕಿಂತ ಎಲ್ಲಾ ರೀತಿಯಲ್ಲೂ ಬಲಿಷ್ಟವಾಗಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಕೊಹ್ಲಿ, 'ಹೌದು; ಖಂಡಿತವಾಗಿ' ಎಂದು ಉತ್ತರಿಸಿದರು.

'ನಾವು (ಟೀಮ್ ಇಂಡಿಯಾ) ಸಾಕಷ್ಟು ಟಿ20 ಅನುಭವಗಳನ್ನು ಪಡೆದಿರುವುದರಿಂದ ನಮಗೆ ಗೆಲ್ಲವ ಭರವಸೆಯಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನಮಗೆ ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿದೆ. ಐಪಿಎಲ್ ನಿಂದ ಕೆಲ ದಿನಗಳ ಹಿಂದಷ್ಟೇ ನಾವು ಹೊರ ಬಂದಿದ್ದೇವೆ. ಐರ್ಲೆಂಡ್ ಎದುರು ಒಂದಿಷ್ಟು ಪಂದ್ಯಗಳನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಹಾಗಾಗಿ ನಮ್ಮ ತಂಡ ಉತ್ತಮವಾಗೇ ಇದೆ' ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Story first published: Monday, July 2, 2018, 22:36 [IST]
Other articles published on Jul 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X