Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನ್‌ ವಿರುದ್ಧ 101 ರನ್‌ ಜಯ ಸಾಧಿಸಿದ ಭಾರತ 'ಎ' ಫೈನಲ್‌ಗೆ

ತ್ರಿಕೋನ ಸರಣಿಯಲ್ಲಿ ಭಾರತ ಎ ತಂಡ ಅಫ್ಘಾನಿಸ್ತಾನ ಎ ತಂಡವನ್ನು 101 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ, ಭಾರತ ತಂಡ ನಾಲ್ಕು ಅಂಕಗಳನ್ನು ಗಳಿಸಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಫೈನಲ್‌ನಲ್ಲಿ ಭಾರತ ತಂಡ ಯಾರನ್ನು ಎದುರಿಸಲಿದೆ ಎಂಬುದು ಇನ್ನೂ ಖಚಿತವಾಗಿಲ್ಲವಾದರೂ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ಫಲಿತಾಂಶದ ನಂತರ ಅದು ನಿರ್ಧರಿಸಲ್ಪಡುತ್ತದೆ.

ತ್ರಿಕೋನ ಸರಣಿಯ ಫೈನಲ್‌ಗೆ ಶ್ರೀಲಂಕಾ ಪ್ರವೇಶಿಸಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಇನ್ನು ಅಫ್ಘಾನಿಸ್ತಾನದ ಫೈನಲ್‌ ಪ್ರವೇಶಿಸುವ ಕನಸು ಕ್ಷೀಣಿಸಿದಂತೆ ಕಾಣುತ್ತಿದೆ. ಭಾರತ ಲೀಗ್‌ ಹಂತದ ಕೊನೆಉ ಪಂದ್ಯದಲ್ಲಿ 101 ರನ್ ಜಯ ಸಾಧಿಸುವ ಮೂಲಕ ತನ್ನ ರನ್‌ ರೇಟ್‌ನ್ನು ಸುಧಾರಿಸಿಕೊಂಡು ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ಭಾರತದ ರನ್‌ ರೇಟ್‌ 0.597 ಆಗಿದೆ. ಇನ್ನು ಶ್ರೀಲಂಕಾ ತಂಡದ ರನ್‌ ರೇಟ್‌ 0.494 ಆಗಿದೆ. ಇನ್ನು ಅಫ್ಘಾನಿಸ್ತಾನ ತಂಡದ ರನ್‌ ರೇಟ್‌ -1.602 ಆಗಿದೆ.

India A

ಉತ್ತಮ ಆರಂಭ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 'ಎ' ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಪ್ರಿಯಾಂಶ್ ಆರ್ಯ ಹಾಗೂ ವೈಭವ್‌ ಸೂರ್ಯವಂಶಿ ಮೊದಲ ವಿಕೆಟ್‌ಗೆ 75 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ವೈಭವ್ ಸೂರ್ಯವಂಶಿ 38 ರನ್‌ ಬಾರಿಸಿ ಔಟ್ ಆದರು. ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 58 ರನ್‌ ಸಿಡಿಸಿ ಔಟ್ ಆದರು. ರುತುರಾಜ್ ಗಾಯಕ್ವಾಡ್‌ 4 ಬೌಂಡರಿ ನೆರವಿನಿಂದ 30 ರನ್‌ ಸಿಡಿಸಿದರು.

ನಿಶಾಂತ್‌ ಸಿಂಧು ಆಲ್‌ರೌಂಡರ್ ಆಟ

4ನೇ ವಿಕೆಟ್‌ಗೆ ನಾಯಕ ತಿಲಕ್ ವರ್ಮಾ ಹಾಗೂ ಕುಮಾರ್ ಕುಶಾಗ್ರ ಜೋಡಿ 122 ಎಸೆತಗಳಲ್ಲಿ 104 ರನ್‌ ಸಿಡಿಸಿತು. ನಾಯಕ ತಿಲಕ್ ವರ್ಮಾ 5 ಬೌಂಡರಿ ಸಹಿತ 59 ರನ್‌ ಬಾರಿಸಿದರೆ, ಕುಮಾರ್ ಕುಶಾಗ್ರ 58 ರನ್‌ ಬಾರಿಸಿ ಔಟ್ ಆದರು. ನಿಶಾಂತ್ ಸಿಂಧು ಅಜೇಯ 21, ವಿಪ್ರಜ್ ನಿಗಮ್‌ 30 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಭಾರತ 'ಎ' 50 ಓವರ್‌ಗಳಲ್ಲಿ 9 ವಿಕೆಟ್‌ಗೆ 319 ರನ್‌ ಕಲೆ ಹಾಕಿತು.

India A

ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 70 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಾಲ್ಕನೇ ವಿಕೆಟ್‌ಗೆ ಫೈಸಲ್ ಶಿನೋಜಾದಾ (46) ಹಾಗೂ ಬಹೀರ್ ಶಾ (57) ರನ್‌ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಉಳಿದಂತೆ ಬೇರೆ ಯಾವೊಬ್ಬ ಬ್ಯಾಟರ್ ನೆಲಕಚ್ಚಿನಿಂತು ಬ್ಯಾಟ್ ಮಾಡಲಿಲ್ಲ. ಅಂತಿಮವಾಗಿ ಅಫ್ಘಾನಿಸ್ತಾನ್ 218 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ನಿಶಾಂತ್ ಸಿಂಧು 4 ವಿಕೆಟ್‌ ಪಡೆದು ಅಬ್ಬರಿಸಿದರು.

Story first published: Wednesday, June 17, 2026, 22:08 [IST]
Other articles published on Jun 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+