ಭಾರತ ಎ- ವೆಸ್ಟ್ ಇಂಡೀಸ್ ಎ ಕ್ರಿಕೆಟ್ ಟೆಸ್ಟ್: ಗೆಲುವು ತಂದಿತ್ತ ಪಂತ್


ಟಾಂಟಾನ್, ಜುಲೈ 13: ಇಂಗ್ಲೆಂಡ್‌ನ ಟಾಂಟಾನ್‌ನಲ್ಲಿ ನಡೆದ ಭಾರತ ಎ ಮತ್ತು ವೆಸ್ಟ್ ಇಂಡೀಸ್ ಎ ತಂಡಗಳ ನಡುವಣ ಎರಡನೆಯ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳ ಗೆಲುವು ಸಾಧಿಸಿದೆ.
321 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ ಎ, ಮೂರನೇ ದಿನದ ಅಂತ್ಯಕ್ಕೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 214 ರನ್ ಗಳಿಸಿತ್ತು. ನಾಲ್ಕನೆಯ ಹಾಗೂ ಕೊನೆಯ ದಿನವಾದ ಶುಕ್ರವಾರ ಗೆಲ್ಲಲು 107 ರನ್‌ಗಳ ಅವಶ್ಯಕತೆಯಿತ್ತು.
ಆದರೆ, ದಿನದ ಆರಂಭದಲ್ಲಿಯೇ ಸತತ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತ್ತು.
ಅಂಕಿತ್ ಭಾವ್ನೆ ಕೇವಲ ಮೂರು ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಮ್ಮ ಹಿಂದಿನ ದಿನದ 65 ರನ್‌ಗೆ 3 ರನ್ ಸೇರಿಸುವಷ್ಟರಲ್ಲಿ ಹನುಮ ವಿಹಾರಿ ರನ್ ಕದಿಯುವ ಆತುರದಲ್ಲಿ ರನ್ ಔಟ್ ಆದರು.
ಆಗ ಭಾರತದ ಗೆಲುವಿಗೆ ಇನ್ನೂ 99 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಜತೆಗೂಡಿದ ರಿಷಬ್ ಪಂತ್ ಮತ್ತು ಜಯಂತ್ ಯಾದವ್, ವೆಸ್ಟ್ ಇಂಡೀಸ್ ತಂಡದಲ್ಲಿ ಮೂಡಿದ್ದ ಗೆಲುವಿನ ಕನಸನ್ನು ಕಮರಿಸಿದರು.
ಬಿರುಸಿನ ಆಟಕ್ಕೆ ಹೆಸರುವಾಸಿಯಾದ ವಿಕೆಟ್ ಕೀಪರ್ ರಿಷಬ್ ತಮ್ಮ ಎಂದಿನ ಶೈಲಿನ ಆಟವಾಡಿದರೆ, ಜಯಂತ್ ಯಾದವ್ ಅವರಿಗೆ ಸೂಕ್ತ ಬೆಂಬಲ ನೀಡಿದರು.
ಪಂತ್ ಕೇವಲ 71 ಎಸೆತಗಳಲ್ಲಿ 67 ರನ್ ಗಳಿಸಿದರು. ಅದರಲ್ಲಿ 11 ಬೌಂಡರಿಗಳಿದ್ದವು. ಜಯಂತ್ ಯಾದವ್ 38 ಎಸೆತಗಳಲ್ಲಿ 23 ರನ್ ಗಳಿಸಿ ಅಮೂಲ್ಯ ಕಾಣಿಕೆ ನೀಡಿದರು.
ಮೊದಲ ಅವಧಿಯ 21 ಓವರ್‌ಗಳಲ್ಲಿಯೇ ಭಾರತ ಆಟ ಮುಗಿಸಿತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ ಎ: 302/10 & 210/10 (57.3) ಜಾನ್ ಕ್ಯಾಂಪ್‌ಬೆಲ್ 61, ಡೆವೊನ್ ಥಾಮಸ್ 25, ಜರ್ಮೈನ್ ಬ್ಲಾಕ್‌ವುಡ್ 67, ಮೊಹಮ್ಮದ್ ಸಿರಾಜ್ 64/4, ರಜನೀಶ್ ಗುರ್ಬಾನಿ 64/3, ಜಯಂತ್ ಯಾದವ್ 23/2
ಭಾರತ ಎ: 192/10 & 321/5 (67.1) ಅಭಿಮನ್ಯು ಈಶ್ವರನ್ 31, ಹನುಮ ವಿಹಾರಿ 68, ಕರುಣ್ ನಾಯರ್ 55, ರಿಷಬ್ ಪಂತ್ 67* ರೇಮನ್ ರೀಫರ್ 49/1, ಜೊಮೆಲ್ ವಾರಿಕನ್ 36/1
ಫಲಿತಾಂಶ: ಭಾರತ ಎ ತಂಡಕ್ಕೆ ಐದು ವಿಕೆಟ್‌ಗಳ ಗೆಲುವು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications