IND vs WI: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ: ತಂಡದಲ್ಲಿ ಇಲ್ಲ ಬದಲಾವಣೆ
ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿಯ ಎರಡನೇ ಏಕದಿನ ಪಂದ್ಯ ನವದೆಹಲಿಯ ಅರುಣ್ ಜೇಟ್ಲು ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ವಶಕ್ಕೆ ಮಾಡಿಕೊಳ್ಳುವ ಆಸೆಯನ್ನು ಭಾರತ ಕಾಣುತ್ತಿದೆ. ಪ್ರವಾಸಿ ತಂಡ ಈ ಪಂದ್ಯವನ್ನು ಗೆದ್ದು ಪುಟಿದೇಳುವ ವಿಶ್ವಾಸವನ್ನು ಹೊಂದಿದೆ. ಇನ್ನು ಈ ಮಹತ್ವದ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರವನ್ನು ವಹಿಸಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಭಾರತ ಪಾಲಾಗಿದ್ದು, ಗಿಲ್ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಶುಭಮನ್ ಗಿಲ್ ನಾಯಕರಾಗಿ ತವರಿನಲ್ಲಿ ಮೊದಲ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, ಇದೇ ಮೊದಲ ಬಾರಿಗೆ ಇವರ ನಾಯಕತ್ವದಲ್ಲಿ ತಂಡ ಟಾಸ್ ಗೆದ್ದಿದೆ. ಈ ಹಿಂದಿನ 6 ಪಂದ್ಯಗಳಲ್ಲಿ ಟಾಸ್ ಸೋಲು ಕಂಡಿದ್ದ ಗಿಲ್, ದೆಹಲಿಯಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದು ಸಂಭ್ರಮಿಸಿದ್ದಾರೆ. ಇನ್ನು ಟಾಸ್ ಗೆಲ್ಲುತ್ತಿದ್ದಂತೆ ಗಿಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ಭರ್ಜರಿ ಗೆಲುವು ದಾಖಲಿಸುವ ಕನಸು ಕಾಣುತ್ತಿದೆ. ಟೀಮ್ ಇಂಡಿಯಾ ಅಹಮದಾಬಾದ್‌ನಲ್ಲಿ ಇನಿಂಗ್ಸ್ ಹಾಗೂ 140 ರನ್ ಜಯ ಸಾಧಿಸಿತ್ತು. ಇದೇ ಪ್ರದರ್ಶನವನ್ನು ದೆಹಲಿಯಲ್ಲಿ ನೀಡುವ ಆಸೆಯನ್ನು ಭಾರತ ತಂಡ ಹಾಕಿಕೊಂಡಿದೆ. ಇನ್ನು ಈ ಅಂಗಳದಲ್ಲಿ ಟೀಮ್ ಇಂಡಿಯಾ 1987 ರಿಂದ ಇಲ್ಲಿಯ ವರೆಗೂ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಹೀಗಾಗಿ ನಿರೀಕ್ಷೆಗಳು ಹೆಚ್ಚಿವೆ. ಸ್ಟಾರ್ ಆಟಗಾರರು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಮೊದಲು ಬ್ಯಾಟಿಂಗ್ ಮಾಡುವಾಗ ಭಾರತ ಎಷ್ಟು ರನ್ ಕಲೆ ಹಾಕುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
2 ಬದಲಾವಣೆ
ವೆಸ್ಟ್ ಇಂಡೀಸ್ ಮಹತ್ವದ ಪಂದ್ಯಕ್ಕಾಗಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಸಕ್ತ ಸೈಕಲ್‌ನಲ್ಲಿ ಗೆಲುವಿನ ಖಾತೆ ಓಪನ್ ಮಾಡುವ ಕನಸು ವಿಂಡೀಸ್ ತಂಡದ್ದಾಗಿದೆ. ಕಿಂಗ್ ಮತ್ತು ಲೇಯ್ನ್ ವಿಶ್ರಾಂತಿ ನೀಡಲಾಗಿದ್ದು, ಇಮ್ಲಾಚ್ ಮತ್ತು ಫಿಲಿಪ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ.
ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಬಿ ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರವೀಂದ್ರ ಜಡೇಜಾ, 6 ಧ್ರುವ್ ಜುರೆಲ್ (ವಿಕೆ), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್ ತಂಡ: ಟ್ಯಾಗೆನರೈನ್ ಚಂದ್ರಪಾಲ್, ಜಾನ್ ಕ್ಯಾಂಪ್‌ಬೆಲ್, ಅಲಿಕ್ ಅಥನಾಜೆ, ಶೈ ಹೋಪ್, ಕೆವೊನ್ ಇಮ್ಲಾಚ್ (ವಿಕೆಟ್ ಕೀಪರ್), ರೋಸ್ಟನ್ ಚೇಸ್ (ನಾಯಕ), ಜಸ್ಟಿನ್ ಗ್ರೀವ್ಸ್, ಖಾರಿ ಪಿಯರೆ, ಜೋಮೆಲ್ ವಾರಿಕನ್, ಆಂಡರ್ಸನ್ ಫಿಲಿಪ್, ಜೇಡನ್ ಸೀಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications