For Quick Alerts
ALLOW NOTIFICATIONS  
For Daily Alerts
 

2ನೇ ಟೆಸ್ಟ್: ಭಾರತ ಮೊದಲ ಇನಿಂಗ್ಸ್ 189ಕ್ಕೆ ಆಲೌಟ್ !!!

ನಥಾನ್ ಲಿಯಾನ್ ಸ್ಪಿನ್ ಮೋಡಿಗೆ ಎಂಟು ವಿಕೆಟ್ ಪತನ; ಮೊದಲು ಬ್ಯಾಟ್ ಮಾಡಿ ಭರ್ಜರಿ ಮೊತ್ತ ಕಲೆಹಾಕುವ ಕೊಹ್ಲಿ ಯೋಜನೆ ತಿರುಗುಮುರುಗು.

ಬೆಂಗಳೂರು, ಮಾರ್ಚ್ 4: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತವು ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 189 ರನ್ ಗಳಿಗೆ ಆಲೌಟ್ ಆಗಿದೆ.

ಆಸ್ಟ್ರೇಲಿಯಾ ಪರವಾಗಿ ಎಂಟು ವಿಕೆಟ್ ಗಳಿಸಿದ ಸ್ಪಿನ್ನರ್ ನಥಾನ್ ಲಿಯಾನ್ ಭಾರತದ ಇನಿಂಗ್ಸ್ ಬೇಗನೇ ಮುಕ್ತಾಯವಾಗಲು ಕಾರಣರಾದರು. ಆನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ದಿನಾಂತ್ಯದ ಹೊತ್ತಿಗೆ ವಿಕೆಟ್ ನಷ್ಟವಿಲ್ಲದೆ, 40 ರನ್ ಗಳಿಸಿದೆ. ಆರಂಭಿಕರಾದ ಡೇವಿಡ್ ವಾರ್ನರ್ (23) ಹಾಗೂ ಮ್ಯಾಟ್ ರೆನ್ಶಾ (15) ಭಾನುವಾರ ಆಸ್ಟ್ರೇಲಿಯಾದ ಇನಿಂಗ್ಸ್ ಮುಂದುವರಿಸಲಿದ್ದಾರೆ.

India all out for 189 runs against australia in 2nd test in Bengaluru

ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಅದರಂತೆ, ಭಾರತದ ಇನಿಂಗ್ಸ್ ಆರಂಭಿಸಿದ್ದು ರಾಜ್ಯದ ಆಟಗಾರ ಕೆ.ಎಲ್. ರಾಹುಲ್ ಹಾಗೂ ಅಭಿನವ್ ಮುಕುಂದ್.

ಭಾರತದ ಪತನಕ್ಕೆ ನಾಂದಿ ಹಾಡಿದ್ದು ವೇಗಿ ಮಿಚೆಲ್ ಸ್ಟಾರ್ಕ್. ತಂಡದ ಮೊತ್ತ ಕೇವಲ 11 ರನ್ ಆಗಿದ್ದಾಗಲೇ ಆರಂಭಿಕ ಮುಕುಂದ್ ಅವರನ್ನು ಎಲ್ ಬಿ ಡಬ್ಲೂ ಬಲೆಗೆ ಕೆಡವಿದ ಸ್ಟಾರ್ಕ್ ಮುಕುಂದ್ (0) ಅವರನ್ನು ಹೊರಗಟ್ಟಿದರು.

ಆನಂತರ ತಮ್ಮ ಕೈಚಳಕ ನಡೆಸಿದ ಲಿಯಾನ್, ಮೂರನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ಚೇತೇಶ್ವರ ಪೂಜಾರ (17), ಆನಂತರ, ನಾಯಕ ವಿರಾಟ್ ಕೊಹ್ಲಿ(12), ಅಜಿಕ್ಯ ರಹಾನೆ (17), ರವಿಚಂದ್ರನ್ ಅಶ್ವಿನ್ (7), ವೃದ್ಧಿಮಾನ್ ಸಾಹಾ (1), ರವೀಂದ್ರ ಜಡೇಜಾ (3), ಇಶಾಂತ್ ಶರ್ಮಾ (0) ವಿಕೆಟ್ ಕಬಳಿಸಿದರು.

ಇದರ ಬೌಲಿಂಗ್ ಗೆ ಕೈ ಜೋಡಿಸಿದ ಸ್ಟೀವ್ ಓ ಕೀಫ್ ಒಂದು ವಿಕೆಟ್ (ರಾಜ್ಯದ ಮತ್ತೊಬ್ಬ ಆಟಗಾರ ಕರುಣ್ ನಾಯರ್-26) ಗಳಿಸಿದರು.

ಆದರೆ, ಆಸ್ಟ್ರೇಲಿಯನ್ನರ ಈ ಮಾರಕ ದಾಳಿಯ ಹೊರತಾಗಿಯೂ ಕ್ರೀಸ್ ನಲ್ಲಿ ಗಟ್ಟಿಯಾಟ ಪ್ರದರ್ಶಿಸಿದ್ದು ಆರಂಭಿಕ ಆಟಗಾರ ಕೆ.ಎಲ್. ರಾಹುಲ್. ಇನಿಂಗ್ಸ್ ನ 72ನೇ ಓವರ್ ನಲ್ಲಿ ತಾವು ಲಿಯಾನ್ ಅವರಿಗೆ ವಿಕೆಟ್ ಒಪ್ಪಿಸುವುದಕ್ಕೂ ಮುನ್ನ 205 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 90 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ 189 (71.2 ಓವರ್)
ಕೆ.ಎಲ್. ರಾಹುಲ್ 90, ಕರುಣ್ ನಾಯರ್ 26; ನಥಾನ್ ಲಿಯಾನ್ 50ಕ್ಕೆ 8, ಮಿಚೆಲ್ ಸ್ಟಾರ್ಕ್ 39ಕ್ಕೆ 1.

ಆಸ್ಟ್ಕೇಲಿಯಾ ಮೊದಲ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 40 (16 ಓವರ್) (ಶನಿವಾರ ದಿನಾಂತ್ಯಕ್ಕೆ)

ವಾರ್ನರ್ ಔಟಾಗದೇ 23, ರೆನ್ಶಾ ಔಟಾಗದೇ 15; ರವೀಂದ್ರ ಜಡೇಜಾ 5ಕ್ಕೆ 0, ಇಶಾಂತ್ ಶರ್ಮಾ 8ಕ್ಕೆ 0.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+