Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS T20: ಮೊದಲ ಟಿ20 ಪಂದ್ಯ ಮಳೆಗೆ ಆಹುತಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಪಂದ್ಯಗಳ ಸರಣಿ ಮುಗಿದಿದ್ದು, ಈಗ ಎಲ್ಲರ ಚಿತ್ತ ಟಿ20 ಸರಣಿಯ ಮೇಲೆ ನೆಟ್ಟಿದೆ. ಕ್ಯಾನ್‌ಬೆರಾದಲ್ಲಿ ನಡೆದ ಉಭಯ ದೇಶಗಳ ನಡುವಣ ಮೊದಲ ಟಿ20 ಪಂದ್ಯಕ್ಕೆ ಮಳೆ ಕಾಟ ನೀಡಿದ್ದು, ಮೊದಲ ಟಿ20 ಪಂದ್ಯವನ್ನು ರದ್ದು ಮಾಡಲಾಗಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಪಂದ್ಯ ಕ್ಯಾನ್‌ಬೆರಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ಸಾಧಾರಣ ಜೊತೆಯಾಟವನ್ನು ನೀಡಿತು. ಆರಂಭಿಕರಾದ ಅಭಿಷೇಕ್‌ ಶರ್ಮಾ, ಶುಭಮನ್‌ ಗಿಲ್‌ ಜೊಡಿ ಮೊದಲ ವಿಕೆಟ್‌ಗೆ 35 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಸ್ಫೋಟಕ ಆಟಗಾರ ಅಭಿಷೇಕ್‌ ಶರ್ಮಾ 14 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 19 ರನ್‌ ಬಾರಿಸಿದರು.

India and Australia first T20 match First half match report Know more

ಅಭಿಷೇಕ್‌ ಶರ್ಮಾ ಅವರಿಗೆ ನಾಥನ್ ಎಲ್ಲಿಸ್ ಖೆಡ್ಡಾ ತೋಡಿದರು. ಎಲ್ಲಿಸ್‌ ಎಸೆತವನ್ನು ಮಿಡ್ ಆಫ್‌ ಮೇಲಿನಿಂದ ಬೌಂಡರಿ ಬಾರಿಸಲು ಹೋಗಿ ಟೀಮ್ ಡೇವಿಡ್ ಅವರಿಗೆ ಕ್ಯಾಚ್‌ ನೀಡಿದರು. ಭಾರತ 9.4 ಓವರ್‌ಗಳಲ್ಲಿ ಭಾರತ 1 ವಿಕೆಟ್‌ ನಷ್ಟಕ್ಕೆ 97 ರನ್‌ ಕಲೆ ಹಾಕಿದೆ. ಈ ವೇಳೆ ಪಂದ್ಯಕ್ಕೆ ಮಳೆ ಕಾಟ ನೀಡಿದ್ದು ಪಂದ್ಯ ಸ್ಥಗಿತವಾಗಿದೆ. ಎರಡನೇ ವಿಕೆಟ್‌ಗೆ ಸೂರ್ಯ ಹಾಗೂ ಗಿಲ್‌ ಅರ್ಧಶತಕದ ಜೊತೆಯಾಟ ನೀಡಿ ಮುನ್ನಡೆಯುತ್ತಿದ್ದಾಗ ಮಳೆ ಕಾಟ ನೀಡಿದೆ.

ಬಹಳ ಹೊತ್ತು ಕಾಯ್ದ ಬಳಿಕ ಭಾರತ ಹಾಗೂ ಆಸೀಸ್‌ ನಡುವಣ ಮೊದಲ ಟಿ20 ಪಂದ್ಯವನ್ನು ರದ್ದು ಎಂದು ಘೋಷಿಸಲಾಗಿದೆ. ಉಭಯ ತಂಡಗಳ ನಡುವೆ ಒಟ್ಟು 5 ಟಿ20 ಪಂದ್ಯಗಳ ಸರಣಿ ಇದಾಗಿದೆ. ಹೀಗಾಗಿ ಅಭಿಮಾನಿಗಳ ಚಿತ್ತ ಎರಡನೇ ಟಿ20 ಪಂದ್ಯದ ಮೇಲೆ ನೆಟ್ಟಿದೆ.

ಉಭಯ ತಂಡಗಳ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗುವ ಮೊದಲು ಸೂರ್ಯಕುಮಾರ್ ಯಾದವ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 39 ರನ್‌ ಬಾರಿಸಿದ್ದರು. ಉಪನಾಯಕ ಶುಭಮನ್‌ ಗಿಲ್‌ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜಯ 7 ರನ್‌ ಸಿಡಿಸಿದ್ದರು.

Story first published: Wednesday, October 29, 2025, 14:33 [IST]
Other articles published on Oct 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+