Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023: ಮಹತ್ವದ ಪಂದ್ಯಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಅಭ್ಯಾಸ

ಏಷ್ಯಾಕಪ್ 2023ರ ಭಾರತ ಪಾಕಿಸ್ತಾನ ನಡುವಿನ ಪಂದ್ಯ ಶನಿವಾರ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಗೆ ಮಳೆ ಅಡ್ಡಿಯಾಗುವ ಆತಂಕ ಕೂಡ ಎದುರಾಗಿದೆ. ಆದರೂ ಉಭಯ ತಂಡಗಳು ಕೊನೆಯ ಹಂತದ ಅಭ್ಯಾಸ ಮಾಡುತ್ತಿವೆ.

ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಎ ಗುಂಪಿನಲ್ಲಿವೆ. ಪಂದ್ಯಕ್ಕೆ ಮುನ್ನ ಶುಕ್ರವಾರ ಉಭಯ ತಂಡಗಳು ಒಟ್ಟಿಗೆ ಅಭ್ಯಾಸ ಮಾಡಲಿವೆ.

 India and Pakistan Joint Practice Session Before Key Asia Cup 2023 Showdown

ಎರಡೂ ತಂಡಗಳು ಫ್ಲಡ್‌ಲೈಟ್‌ಗಳಲ್ಲಿ ಸಮಯ ಕಳೆಯಲು ಮತ್ತು ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬೇಕಾಗಿರುವುದರಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ಒಟ್ಟಿಗೆ ಅಭ್ಯಾಸ ನಡೆಸಲಿವೆ. ಏಷ್ಯಾಕಪ್ 2023ರಲ್ಲಿ ಶ್ರೀಲಂಕಾದಲ್ಲಿ ಉಭಯ ತಂಡಗಳ ಮೊದಲ ಪಂದ್ಯ ಇದಾಗಿದೆ.

ಮೂರು ಬಾರಿ ಮುಖಾಮುಖಿ ಸಾಧ್ಯತೆ

ಏಷ್ಯಾಕಪ್ 2023ರ ಪಂದ್ಯಾವಳಿಯಲ್ಲಿ ಭಾರತ - ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಅವಕಾಶ ಇದೆ. ಶನಿವಾರ ಲೀಗ್ ಹಂತದ ಪಂದ್ಯ ನಡೆಯುತ್ತಿದ್ದು, ಸೂಪರ್ 4 ಮತ್ತು ಫೈನಲ್‌ಗೆ ಎರಡೂ ತಂಡಗಳು ಅರ್ಹತೆ ಪಡೆದರೆ ಇನ್ನೂ 2 ಬಾರಿ ಮುಖಾಮುಖಿಯಾಗುವುದು ಖಚಿತವಾಗಲಿದೆ. ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ತಯಾರಿಯಾಗಲು ಉತ್ತಮ ಅವಕಾಶ ಎಂದು ಭಾವಿಸಲಾಗಿದೆ.

ಅಭಿಮಾನಿಗಳು, ವಿಶ್ಲೇಷಕರು ಮತ್ತು ವಿಮರ್ಶಕರು ರೋಮಾಂಚಕಾರಿ ಪಂದ್ಯವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ ಮತ್ತು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುವುದು ಪಂದ್ಯದ ಬಗ್ಗೆ ಕುತೂಹಲ ಹೆಚ್ಚಾಗಲು ಕಾರಣವಾಗಿದೆ.

ಆಫ್-ಸ್ಪಿನ್ನರ್‌ಗಳನ್ನು ಎದುರಿಸಲು ಪಾಕಿಸ್ತಾನ ಸಜ್ಜು

ಶುಕ್ರವಾರದ ಏಷ್ಯಾ ಕಪ್ 2023 ರ ತರಬೇತಿಯಲ್ಲಿ ಆಫ್-ಸ್ಪಿನ್ನರ್‌ಗಳ ವಿರುದ್ಧ ತಮ್ಮ ದೌರ್ಬಲ್ಯವನ್ನು ಎದುರಿಸಲು ಪಾಕಿಸ್ತಾನ ತಂಡವು ತಯಾರಿ ಮಾಡಿಕೊಳ್ಳಲಿದೆ. ಪಾಕಿಸ್ತಾನ ಮತ್ತು ಭಾರತದ ಬ್ಯಾಟರ್‌ಗಳು ಸ್ಪಿನ್ ಬೌಲಿಂಗ್‌ ವಿರುದ್ಧ ಉತ್ತಮವಾಗಿ ಆಡುವ ಇತಿಹಾಸ ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಪಾಕಿಸ್ತಾನದ ಬ್ಯಾಟರ್ ಗಳು ಆಫ್-ಸ್ಪಿನ್ ಬೌಲಿಂಗ್ ವಿರುದ್ಧ ಪರದಾಡುವುದನ್ನು ಗಮನಿಸಬಹುದು. ಪಾಕಿಸ್ತಾನದ ಆರಂಭಿಕ ಜೋಡಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಆಫ್‌ಸ್ಪಿನ್ನರ್‌ಗಳ ವಿರುದ್ಧ ಆಡುವುದು ಕಷ್ಟ ಎನ್ನುವುದು ಕೂಡ ಗಮನಿಸಲಾಗಿದೆ.

ಎಡಗೈ ವೇಗಿಗಳ ವಿರುದ್ಧ ಭಾರತದ ತಯಾರಿ

ಭಾರತದ ಅಗ್ರ ಕ್ರಮಾಂಕದ ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಶಾಹೀನ್ ಅಫ್ರಿದಿ ನಡುವಿನ ಹೋರಾಟವು ಶನಿವಾರದ ಆಟದಲ್ಲಿ ಮುಖ್ಯವಾಗಿರಲಿದೆ.

ಎಡಗೈ ವೇಗಿಗಳ ವಿರುದ್ಧ ಭಾರತದ ದುರ್ಬಲತೆಯನ್ನು ಅಲ್ಲಗಳೆಯುವಂತಿಲ್ಲ. 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟ್ರೆಂಟ್ ಬೌಲ್ಟ್, 2021 ಟಿ20 ವಿಶ್ವಕಪ್‌ನಲ್ಲಿ ಶಾಹಿದ್ ಅಫ್ರಿದಿ ಮತ್ತು 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಹಮ್ಮದ್ ಅಮೀರ್ ಭಾರತ ತಂಡವನ್ನು ಕಾಡಿದ್ದಾರೆ.

ಶಾಹೀನ್ ಅಫ್ರಿದಿ ಕಳೆದ ವಿಶ್ವಕಪ್‌ನಿಂದ 20 ಇನ್ನಿಂಗ್ಸ್‌ಗಳಲ್ಲಿ 29 ಬಲಗೈ ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ. ಅವುಗಳಲ್ಲಿ 10 ವಿಕೆಟ್‌ಗಳು ಆರಂಭಿಕ ಓವರ್ ಗಳಲ್ಲಿ ಬಂದಿರುವುದು, ಭಾರತದ ಆರಂಭಿಕರಿಗೆ ಸವಾಲಾಗಲಿದೆ.

Story first published: Friday, September 1, 2023, 18:03 [IST]
Other articles published on Sep 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+