T20 World Cup 2026 ವೇಳಾ ಪಟ್ಟಿ ಪ್ರಕಟ: ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ, ಪಾಕ್
ಭಾರತ ಹಾಗೂ ಶ್ರೀಲಂಕಾ ದೇಶಗಳ ಈ ಬಾರಿ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿವೆ. ಈ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಅಂಗಳವನ್ನು ಪ್ರವೇಶಿಸಲಿದೆ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ಸೇರಿದಂತೆ ಒಟ್ಟು 20 ತಂಡಗಳು ಭಾಗವಹಿಸಲಿವೆ. ಈ ವೇಳೆ ಈ ತಂಡಗಳನ್ನು ನಾಲ್ಕು ತಂಡಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿ ತಂಡದಲ್ಲೂ ಐದು ತಂಡಗಳು ಸ್ಥಾನ ಪಡೆದಿವೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ.
ನಾಲ್ಕು ಗುಂಪುಗಳಲ್ಲಿನ ಅಗ್ರ 2 ತಂಡಗಳು ಸೂಪರ್ 8 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯಲಿವೆ. ಈ ವೇಳೆಯೂ 4 ತಂಡಗಳ 2 ಗುಂಪು ಮಾಡಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಕಳೆದ ಬಾರಿಯ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಈ ಬಾರಿ ಯುವಕರನ್ನೇ ಕೂಡಿದ ತಂಡ ಅಂಗಳವನ್ನು ಪ್ರವೇಶಿಸಲಿದೆ.
ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು: ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಸ್ಟೇಟ್ಸ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಕೆನಡಾ, ನೆದರ್ಲ್ಯಾಂಡ್ಸ್, ಇಟಲಿ, ಜಿಂಬಾಬ್ವೆ, ನಮೀಬಿಯಾ, ನೇಪಾಳ, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.
ಎಷ್ಟು ಸ್ಥಳಗಳಲ್ಲಿ ನಡೆಯಲಿದೆ ಟಿ20 ವಿಶ್ವಕಪ್ 2026 ಪಂದ್ಯಗಳು?
ದೆಹಲಿ, ಅಹಮದಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬೈ ಹಾಗೂ ಕೋಲಂಬೊದಲ್ಲಿ ಪಂದ್ಯಗಳ ನಡೆಯಲಿವೆ.
ರೋಹಿತ್ ಶರ್ಮಾ ರಾಯಭಾರಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರನ್ನು ಟಿ20 ವಿಶ್ವಕಪ್ 2026 ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತ ತಂಡಕ್ಕೆ 2024ರ ಟಿ20 ವಿಶ್ವಕಪ್ ತೊಡಿಸಿದ ನಾಯಕನಿಗೆ ಟಿ20 ವಿಶ್ವಕಪ್ ರಾಯಭಾರಿ ಪಟ್ಟವನ್ನು ಕಟ್ಟಲಾಗಿದೆ.
ಎ ಗ್ರುಪ್‌ನಲ್ಲಿ ಸ್ಥಾನ ಪಡೆದ ತಂಡಗಳು
ಭಾರತ, ಪಾಕಿಸ್ತಾನ, ಯುಎಸ್‌ಎ, ನೆದರ್ಲ್ಯಾಂಡ್, ನಮೀಬಿಯಾ
ಬಿ ಗ್ರುಪ್‌ನಲ್ಲಿ ಸ್ಥಾನ ಪಡೆದ ತಂಡಗಳು
ಆಸ್ಟ್ರೇಲಿಯಾ, ಶ್ರೀಲಂಕಾ, ಐರ್ಲೆಂಡ್, ಜಿಂಬಾಬ್ವೆ, ಓಮನ್
ಸಿ ಗ್ರುಪ್‌ನಲ್ಲಿ ಸ್ಥಾನ ಪಡೆದ ತಂಡಗಳು
ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ, ಇಟಲಿ
ಡಿ ಗ್ರುಪ್‌ನಲ್ಲಿ ಸ್ಥಾನ ಪಡೆದ ತಂಡಗಳು
ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಕೆನಡಾ, ಯುಎಇ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications