IML 2025: ಭಾರತ vs ವೆಸ್ಟ್ ಇಂಡೀಸ್ ನಡುವೆ ಫೈನಲ್ ಫೈಟ್; ಯಾವಾಗ, ಎಲ್ಲಿ?
ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ (ಐಎಂಎಲ್) 2025ರ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಮಾಸ್ಟರ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ ವೆಸ್ಟ್ ಇಂಡೀಸ್ ಮಾಸ್ಟರ್ಸ್ ಫೈನಲ್ ತಲುಪಿದೆ. ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಈಗ ಐಎಂಎಲ್ ಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಮಾಸ್ಟರ್ಸ್ ತಂಡವನ್ನು ಬ್ರಿಯಾನ್ ಲಾರಾ ಮುನ್ನಡೆಸುತ್ತಿರುವ ವೆಸ್ಟ್ ಇಂಡೀಸ್ ಎದುರಿಸಲಿದ್ದಾರೆ.
ಇಂಡಿಯಾ ಮಾಸ್ಟರ್ಸ್ ಮತ್ತು ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡಗಳ ಹೈವೋಲ್ಟೇಜ್ ಫೈನಲ್ ಪಂದ್ಯ ಮಾರ್ಚ್ 16 ರಂದು ಭಾನುವಾರ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶುಕ್ರವಾರ ನಡೆದ ಐಎಂಎಲ್ 2025ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ಲಾರಾ ಅವರ 41 ರನ್‌ಗಳ ಇನ್ನಿಂಗ್ಸ್ ಮತ್ತು ದಿನೇಶ್ ರಾಮ್ದಿನ್ ಅವರ ಅಜೇಯ 50 ರನ್‌ಗಳ ನೆರವಿನಿಂದ ವೆಸ್ಟ್ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಮಾಸ್ಟರ್ಸ್ 9 ವಿಕೆಟ್ ಕಳೆದುಕೊಂಡು 173 ರನ್‌ಗಳಿಸಿತು. ದಿನೇಶ್ ರಾಮ್ದಿನ್ ಅವರ ಅರ್ಧಶತಕ, ಬ್ರಿಯಾನ್ ಲಾರಾ ಅವರ ಅದ್ಭುತ ಇನ್ನಿಂಗ್ಸ್ ಮತ್ತು ಟಿನೊ ಬೆಸ್ಟ್ ಅವರ ನಾಲ್ಕು ವಿಕೆಟ್‌ಗಳ ನೆರವಿನಿಂದ ಶ್ರೀಲಂಕಾ ತಂಡವನ್ನು ಸೋಲಿಸುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಯಿತು.
ಗುರುವಾರ ನಡೆದ ಐಎಂಎಲ್‌ನ ಮೊದಲ ಸೆಮಿಫೈನಲ್‌ನಲ್ಲಿ ಇಂಡಿಯಾ ಮಾಸ್ಟರ್ಸ್ ತಂಡ ಆಸ್ಟ್ರೇಲಿಯಾ ಮಾಸ್ಟರ್ಸ್ ಅನ್ನು 94 ರನ್‌ಗಳಿಂದ ಸೋಲಿಸಿತು. ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 220 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡವು 18.1 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟ್ ಆಯಿತು.
ನೇರಪ್ರಸಾರ
ಇಂಡಿಯಾ ಮಾಸ್ಟರ್ಸ್ ಮತ್ತು ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡಗಳ ಐಎಂಎಲ್ 2025ರ ಫೈನಲ್ ಪಂದ್ಯವನ್ನು ಟಿವಿಯಲ್ಲಿ ಕಲರ್ಸ್ ಸಿನೆಪ್ಲೆಕ್ಸ್ (ಎಸ್‌ಡಿ ಮತ್ತು ಹೆಚ್‌ಡಿ) ಮತ್ತು ಕಲರ್ಸ್ ಸಿನೆಪ್ಲೆಕ್ಸ್ ಸೂಪರ್‌ಹಿಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಆದರೆ ಪಂದ್ಯದ ನೇರ ಪ್ರಸಾರವು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ.
ಉಭಯ ತಂಡಗಳು
ಇಂಡಿಯಾ ಮಾಸ್ಟರ್ಸ್: ಸಚಿನ್ ತೆಂಡೂಲ್ಕರ್ (ನಾಯಕ), ನಮನ್ ಓಜಾ (ವಿಕೆಟ್ ಕೀಪರ್), ಇರ್ಫಾನ್ ಪಠಾಣ್, ಪವನ್ ನೇಗಿ, ಸೌರಭ್ ತಿವಾರಿ, ಗುರುಕೀರತ್ ಸಿಂಗ್ ಮಾನ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ರಾಹುಲ್ ಶರ್ಮಾ, ವಿನಯ್ ಕುಮಾರ್, ಅಂಬಟಿ ರಾಯುಡು, ಯುವರಾಜ್ ಸಿಂಗ್, ಧವಲ್ ಕುಲಕರ್ಣಿ, ಸುರೇಶ್ ರೈನಾ, ಶಹಬಾಜ್ ನದೀಮ್.
ವೆಸ್ಟ್ ಇಂಡೀಸ್ ಮಾಸ್ಟರ್ಸ್: ಬ್ರಿಯಾನ್ ಲಾರಾ (ನಾಯಕ), ಕ್ರಿಸ್ ಗೇಲ್, ಕಿರ್ಕ್ ಎಡ್ವರ್ಡ್ಸ್, ಲೆಂಡ್ಲ್ ಸಿಮ್ಮನ್ಸ್, ನರಸಿಂಗ್ ಡಿಯೋನರೈನ್, ಆಶ್ಲೇ ನರ್ಸ್, ಡ್ವೇನ್ ಸ್ಮಿತ್, ಚಾಡ್ವಿಕ್ ವಾಲ್ಟನ್, ದಿನೇಶ್ ರಾಮ್ಡಿನ್, ವಿಲಿಯಮ್ಸ್ ಪರ್ಕಿನ್ಸ್, ಫಿಡೆಲ್ ಎಡ್ವರ್ಡ್ಸ್, ಜೆರೋಮ್ ಟೇಲರ್, ರವಿ ರಾಂಪಾಲ್, ಸುಲೈಮಾನ್ ಬೆನ್, ಟಿನೊ ಬೆಸ್ಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications