Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿಜಿಟಲ್‌ ಸ್ಟ್ರೈಕ್‌ ಮುಂದುವರಿಸಿದ ಭಾರತ: ಸ್ಟಾರ್ ಆಟಗಾರರ ಸಾಮಾಜಿಕ ತಾಣಗಳು ಬ್ಯಾನ್

ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕ್‌ ನಡುವಣ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಗಡಿಯಲ್ಲಿ ಉಭಯ ದೇಶಗಳಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ವೇಳೆ ಭಾರತ ನೀರನ್ನು ಪಾಕ್‌ಗೆ ಹರಿ ಬಿಡುವುದನ್ನು ನಿಲ್ಲಿಸಿದೆ. ಇನ್ನು ಮುಂದೆ ಏನು ಮಾಡುತ್ತದೆ ಎಂಬ ಭಯ ಪಾಕ್‌ಗೆ ಆರಂಭವಾಗಿದೆ. ಇನ್ನು ಪಾಕ್‌ ಆಟಗಾರರ ಯೂಟ್ಯೂಬ್‌ಗಳನ್ನು ಬ್ಯಾನ್‌ ಮಾಡಿದೆ. ಈಗ ಮತ್ತೊಂದು ಸ್ಟ್ರೈಕ್‌ಗೆ ಭಾರತ ಸರ್ಕಾರ ಮುಂದಾಗಿದೆ.

ಪಾಕಿಸ್ತಾನ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಿದೆ. ಈ ಮೂಲಕ ಭಾರತ ಮತ್ತೊಂದು ಸ್ಟ್ರೈಕ್‌ ಮಾಡಿದೆ. ಭಾರತದಲ್ಲಿ ಈಗ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬ್ಯಾನ್‌ ಮಾಡಲಾಗಿದೆ. ಈ ಆಟಗಾರರ ಪಟ್ಟಿಯಲ್ಲಿ ಖ್ಯಾತ ಪಾಕಿಸ್ತಾನಿ ಆಟಗಾರರ ದಂಡೇ ಇದೆ.

India Bans Pakistani Cricketers Social Media Accounts in Ongoing Digital Strike

ಭಾರತದ ಸರ್ಕಾರದ ಕೋರಿಕೆಯ ಮೇರೆಗೆ ಇನ್‌ಸ್ಟಾಗ್ರಾಮ್‌ ಪೋಷಕ ಕಂಪನಿಯಾದ ಮೆಟಾಗೆ ಪಾಕಿಸ್ತಾನದ ಸ್ಟಾರ್ ಆಟಗಾರರ ಇನ್‌ಸ್ಟಾಗ್ರಾಮ್‌ ಖಾತೆಯನ್ನು ನಿಷೇಧಿಸುವಂತೆ ತಿಳಿಸಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಸೂಪರ್ ಸ್ಟಾರ್ ಆಟಗಾರ ಬಾಬರ್ ಅಜಮ್‌, ಖ್ಯಾತ ವಿಕೆಟ್‌ ಕೀಪರ್ ಬ್ಯಾಟರ್ ಮೊಹಮ್ಮದ್‌ ರಿಜ್ವಾನ್‌, ಶಾಹೀನ್ ಅಫ್ರಿದಿ, ಮೊಹಮ್ಮದ್ ಆಮಿರ್, ನಸೀಮ್ ಶಾ, ಹ್ಯಾರಿಸ್ ರೌಫ್ ಮತ್ತು ಇಮಾಮ್ ಉಲ್ ಹಕ್ ಇವರ ಅಕೌಂಟ್‌ ಕ್ಲೋಸ್ ಮಾಡಲಾಗಿದೆ. ಇನ್ನು ಮುಂದೆ ಈ ಸ್ಟಾರ್ ಆಟಗಾರರ ಪೋಸ್ಟ್‌ಗಳನ್ನು ಭಾರತೀಯ ಅಭಿಮಾನಿಗಳು ನೋಡಲು ಸಾಧ್ಯವೇ ಇಲ್ಲ.

ಡಿಜಿಟಲ್‌ ಸ್ಟ್ರೈಕ್‌

ಭಾರತ ಸರ್ಕಾರ ಬರೀ ಪಾಕಿಸ್ತಾನದ ಕ್ರಿಕೆಟ್‌ ಆಟಗಾರರ ಸಾಮಾಜಿಕ ತಾಣಗಳನ್ನು ಬ್ಯಾನ್‌ ಮಾಡಿಲ್ಲ. ಬದಲಿಗೆ ಸೆಲೆಬ್ರಿಟಿಗಳ ಖಾತೆಗಳನ್ನು ನಿರ್ಬಂಧಿಸಿದೆ. ನಟಿ ಹನಿಯಾ ಆಮಿರ್, ಮಹಿರಾ ಖಾನ್ ಮತ್ತು ಅಲಿ ಜಾಫರ್ ಸೇರಿದಂತೆ ಅನೇಕ ಸೇರಿದಂತೆ ಪಾಕ್‌ ನಟರ ಇನ್‌ಸ್ಟಾಗ್ರಾಮ್‌ ಖಾತೆಯನ್ನು ನಿರ್ಬಂಧಿಸಿದೆ.

ಭಾರತ ಸರ್ಕಾರ ಈಗಾಗಲೇ ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಟಾರ್ ಕ್ರಿಕೆಟ್‌ ಆಟಗಾರರ ಯುಟ್ಯೂಬ್‌ ಚಾನೆಲ್‌ಗಳನ್ನು ಬ್ಯಾನ್ ಮಾಡಿದೆ. ಇದರಲ್ಲಿ ರಾವಲ್ಪಿಂಡಿ ಏಕ್ಸ್‌ಪ್ರೆಸ್ ಖ್ಯಾತಿಯ ಶೋಯಿಬ್ ಅಖ್ತರ್‌, ಸೇರಿದಂತೆ ಅನೇಕ ಖ್ಯಾತ ನಾಮರ ಚಾನೆಲ್‌ಗಳ ಮೇಲೆ ಬ್ಯಾನ್‌ ಅಸ್ತ್ರವನ್ನು ಪ್ರಯೋಗಿಸಿದೆ. ಇನ್ನು ಈ ಸ್ಟಾರ್ ಆಟಗಾರರ ಈ ಮೊದಲಿನ ವಿಡಿಯೋಗಳನ್ನು ಮಾತ್ರ ಸರ್ಕಾರ ಕಾಣುತ್ತಿವೆ. ಆದರೆ ಹೊಸ ಅಪ್‌ಡೇಟ್‌ಗಳು ಸಿಗುತ್ತಿಲ್ಲ.

India Bans Pakistani Cricketers Social Media Accounts in Ongoing Digital Strike

ಪಹಲ್ಗಾಮ್ ದಾಳಿಯ ಬಳಿಕ ಭಾರತ ಕಠಿಣ ಕ್ರಮ ಕೈಗೊಳ್ಳುತ್ತಿವೆ. ಭಾರತ ದೇಶವು ಪಾಕಿಸ್ತಾನಕ್ಕೆ ಬಾಹ್ಯಾಕಾಶ ಉದ್ಯಮವನ್ನು ಸಹ ಸ್ಥಗಿತಗೊಳಿಸಿದೆ. ಇನ್ನು ಭಾರತ ಈ ಹಿಂದಿನ ಸಿಂಧು ನದಿಯ ಒಪ್ಪಂದವನ್ನು ತಿರಸ್ಕರಿಸಿದೆ. ಏಪ್ರಿಲ್‌ 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರರು 26 ಅಮಾಯಕರ ಜೀವ ತೆಗೆದಿದ್ದರು.

Story first published: Saturday, May 3, 2025, 15:08 [IST]
Other articles published on May 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+