ICC Women's T20 World Cup: ಪಾಕ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಭಾರತ
ದುಬೈ: ಭರವಸೆಯ ಬೌಲರ್ ಅರುಂಧತಿ ರೆಡ್ಡಿ(19ಕ್ಕೆ 3) ಹಾಗೂ ಶಫಾಲಿ ವರ್ಮಾ (32 ರನ್) ಇವರುಗಳ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ ಆರು ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮಣಿಸಿ, ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 105 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಸೇರಿಸಿತು. ಈ ಮೂಲಕ ಭಾರತ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಮೊದಲ ಗೆಲುವು ಸಾಧಿಸಿದ್ದು ಎ ಗುಂಪಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.

ಜವಾಬ್ದಾರಿ ಮರೆತ ಸ್ಮೃತಿ
ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕ ಸ್ಮೃತಿ ಮಂಧನಾ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಏಳು ರನ್‌ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್‌ಗೆ ಶಫಾಲಿ ವರ್ಮಾ ಹಾಗೂ ಜೆಮಿಮಾ ರಾಡ್ರಿಗಸ್ ಜೊತೆಗೂಡಿ 44 ಎಸೆತಗಳಲ್ಲಿ 43 ರನ್ ಸೇರಿಸಿತು. ಸೊಗಸಾಗಿ ಆಡುತ್ತಿದ್ದ ಶಫಾಲಿ ವರ್ಮಾ 35 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 32 ರನ್ ಸಿಡಿಸಿ ಔಟ್ ಅದರು.
ಜೆಮಿಮಾ 28 ಎಸೆತಗಳಲ್ಲಿ 23 ರನ್ ಸಿಡಿಸಿ ಔಟ್ ಆದರು. ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರಿತ್ ಕೌಟ್ 29 ರನ್ ಬಾರಿಸಿ ಮುನ್ನುಗುತ್ತಿದ್ದಾಗ ನಿವೃತ್ತರಾದರು. ದೀಪ್ತಿ ಶರ್ಮಾ ಹಾಗೂ ಸಜೀವನ್ ಸಜನ್ ತಂಡಕ್ಕೆ ಅಗತ್ಯ ವಿದ್ದ ರನ್ ಗಳನ್ನು ಕಲೆ ಹಾಕಿ ಮಿಂಚಿದರು.
ಪಾಕಿಸ್ತಾನ ಪರ ಫಾತಿಮಾ ಸನಾ ಎರಡು ವಿಕೆಟ್ ಪಡೆದರು.

ರನ್‌ಗಳಿಸಲು ಬ್ಯಾಟರ್‌ಗಳ ಪರದಾಟ
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಕಳಪೆ ಆಗಿತ್ತು. ಎರಡನೇ ವಿಕೆಟ್‌ಗೆ ಮುನೀಬ ಅಲಿ ಹಾಗೂ ಸಿದ್ರಾ ಅಮೀನ್ ಜೊತೆಗೂಡಿ 23 ಎಸೆತಗಳಲ್ಲಿ 24 ರನ್ ಸಿಡಿಸಿದರು. ನಿದಾ ದರ್, ಫಾತೀಮಾ ಸನಾ, ಸೈಯದಾ ಅರೂಬ್ ಶಾ ಅವರನ್ನು ಹೊರತು ಪಡಿಸಿದರೆ ಉಳಿದ ಯಾವ ಬ್ಯಾಟರ್‌ಗಳು ಡಬಲ್ ಡಿಜಿಟ್ ಮುಟ್ಟಲಿಲ್ಲ.
ಭಾರತೀಯ ಬೌಲರ್‌ಗಳ ಕಮಾಲ್
ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಭಾರತದ ಪರ ಅರುಂಧತಿ ರೆಡ್ಡಿ ಮೂರು ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್ ಕೂಡ ಎರಡು ವಿಕೆಟ್ ತಮ್ಮದಾಗಿಸಿಕೊಂಡರು. ಇದಲ್ಲದೇ ರೇಣುಕಾ ಸಿಂಗ್, ದೀಪ್ತಿ ಶರ್ಮಾ ಮತ್ತು ಆಶಾ ಸೋಭಾನಾ ತಲಾ ಒಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಬೌಲರ್‌ಗಳು ಪಾಕ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಉತ್ತಮ ಬೌಲಿಂಗ್ ನಡೆಸಿರುವ ಅರುಂಧತಿ ರೆಡ್ಡಿ ಅವರಿಗೆ ಪಂದ್ಯ ಶ್ರೇಷ್ಠ ಗರಿ ಸಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications