ಭಾರತ ಮತ್ತೆ ವಿಶ್ವಕಪ್ ಖಂಡಿತ ಗೆಲ್ಲುತ್ತೆ ಅಂತಾರೆ ಕೊಹ್ಲಿ
ಸಿಡ್ನಿ, ಜ. 10: ಮತ್ತೊಂದು ಕ್ರಿಕೆಟ್ ವಿಶ್ವಕಪ್ ಬರುತ್ತಿದ್ದಂತೆ ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳ ಆಸಕ್ತಿ ಕೆರಳುತ್ತಿದೆ. ಈಗ ಭಾರತ ತಂಡದಲ್ಲಿ ನಡೆಯುತ್ತಿರುವ ವಿವಾದಗಳಿಂದ ಕೈಯಲ್ಲಿರುವ ವಿಶ್ವಕಪ್ ಜಾರಿ ಹೋಗುವ ಆತಂಕ ದೇಶದ ಕ್ರಿಕೆಟ್ ಪ್ರೇಮಿಗಳಲ್ಲಿ ಶುರುವಾಗಿದೆ. ಈಗ ವಿರಾಟ್ ಕೊಹ್ಲಿ "ಭಾರತ ಮತ್ತೆ ವಿಶ್ವಕಪ್ ಗೆಲ್ಲಬಲ್ಲದು" ಎಂದು ನೀಡಿರುವ ಹೇಳಿಕೆ ಕೊಂಚ ಸಮಾಧಾನ ತಂದಿದೆ.
ಸಿಡ್ನಿ ಟೆಸ್ಟ್ ಪಂದ್ಯ ಮುಗಿದ ಮೇಲೆ ಆಸ್ಟ್ರೇಲಿಯಾ ಮಾಜಿ ನಾಯಕ ಮಾರ್ಕ್ ಟೇಲರ್ "ಈ ಬಾರಿಯೂ ಭಾರತ ವಿಶ್ವಕಪ್ ಗೆಲ್ಲಬಲ್ಲದೇ?" ಎಂದು ಪ್ರಶ್ನಿಸಿದರು. ಆಗ ವಿರಾಟ್ ಕೊಹ್ಲಿ, "ಖಂಡಿತವಾಗಿ" ಎಂದು ಉತ್ತರಿಸಿದ್ದಾರೆ. [ಇದು ವಿಶ್ವಕಪ್ ಗೆ ಹೊರಡಲಿರುವ ಟೀಂ ಇಂಡಿಯಾ]

"ತಂಡದ ಆಟಗಾರರು ಆತ್ಮವಿಶ್ವಾಸ ಹೊಂದಬೇಕು. ನಾವು ವಿಶ್ವಕಪ್ ಗೆಲ್ಲಬಲ್ಲೆವು ಎಂಬ ವಿಶ್ವಾಸ ಹೊಂದಿದ್ದೇವೆ. ಆಸ್ಟ್ರೇಲಿಯಾದಲ್ಲಿ ಕೂಡ ಉತ್ತಮವಾಗಿ ಆಡಿದ್ದೇವೆ" ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. [ಐಸಿಸಿ ವಿಶ್ವಕಪ್ ಗೆ ವಿರಾಟ್ ಕೊಹ್ಲಿ ಅಂಬಾಸಿಡರ್]
ಇದು ವಿರಾಟ್ ಕೊಹ್ಲಿ ಆಡಲಿರುವ ಎರಡನೇ ವಿಶ್ವಕಪ್. ಕಳೆದ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಶತಕ ಬಾರಿಸಿದ್ದ ಕೊಹ್ಲಿ, ಭಾರತ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. [ವಿಶ್ವಕಪ್ ನ 15 ಸದಸ್ಯರ ತಂಡ ಪ್ರಕಟ]
ಈ ವರ್ಷದ ವಿಶ್ವಕಪ್‌ನಲ್ಲಿ ಭಾರತ ಮೊದಲ ಪಂದ್ಯವನ್ನು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಜೊತೆ ಆಸ್ಟ್ರೇಲಿಯಾದ ಅಡಿಲೇಡ್ ಮೈದಾನದಲ್ಲಿ ಫೆಬ್ರವರಿ 15ರಂದು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications