For Quick Alerts
ALLOW NOTIFICATIONS  
For Daily Alerts
 

ಯಾರಿಂದಲೂ ಮುರಿಯಲಾಗದ ಈ 3 ವಿಶ್ವಕಪ್ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್‌ನಲ್ಲಿಯೂ ಅದ್ಭುತ ರನ್ ಮಳೆ ಹರಿಸುವುದನ್ನು ಮುಂದುವರಿಸಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದರೂ ನಂತರದ ಎರಡು ಪಂದ್ಯಗಳಲ್ಲಿಯೂ ರೋಹಿತ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.

ಈ ಹಿಂದಿನ 2019ರ ವಿಶ್ವಕಪ್‌ನಲ್ಲಿ ಐದು ಶತಕ ಬಾರಿಸಿ ರನ್ ಮಳೆ ಹರಿಸಿದ್ದ ರೋಹಿತ್ ಶರ್ಮಾ ಮೇಲೆ ಈ ಬಾರಿ ನಾಯಕತ್ವದ ಹೊಣೆಗಾರಿಕೆಯೂ ಇದೆ. ಹಾಗಿದ್ದರೂ ರೋಹಿತ್ ಟೂರ್ನಿಯಲ್ಲಿ ಈಗಾಗಲೇ ಒಂದು ಶತಕ ಹಾಗೂ ಒಂದು ಅರ್ಧ ಶತಕ ಸಿಡಿಸಿದ್ದು ಭಾರೀ ನಿರೀಕ್ಷೆ ಮೂಡಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿದ ನಂತರ ಪಾಕಿಸ್ತಾನದ ವಿರುದ್ಧವೂ ಅಂಥಾದ್ದೇ ಸ್ಪೋಟಕ ಪ್ರದರ್ಶನ ನೀಡಿ ಭಾರತದ ಗೆಲುವಿಗೆ ಕಾರಣವಾದರು.

India captain Rohit Sharma eye on 3 major Unbroken World Cup Records

ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್‌ನಲ್ಲಿ ಇರುವ ಲಯವನ್ನು ನೋಡಿದರೆ ಹಲವು ವಿಶ್ವ ದಾಖಲೆಗಳು ಮುರಿಯುವ ಸಾಧ್ಯತೆಗಳು ಇಲ್ಲದಿಲ್ಲ. ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಉಳಿದ ಕ್ರಿಕೆಟಿಗರಿಂದ ಮುರಿಯುವುದು ಅಸಾಧ್ಯ ಎನಿಸುವಂಥಾ ಮೂರು ವಿಶ್ವಕಪ್ ದಾಖಲೆಗಳನ್ನು ನಿರ್ಮಿಸುವ ಅವಕಾಶ ರೋಹಿತ್ ಶರ್ಮಾ ಮುಂದಿದೆ. ಆ ಮೂರು ವಿಶ್ವಕಪ್ ದಾಖಲೆಗಳು ಯಾವುದು? ಇಲ್ಲಿದೆ ಮಾಹಿತಿ ಮುಂದೆ ಓದಿ..

ಅತಿ ಹೆಚ್ಚು ವಿಶ್ವಕಪ್ ಸಿಕ್ಸರ್‌ಗಳು

ಈ ಬಾರಿಯ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ 23 ಸಿಕ್ಸರ್‌ಗಳೊಂದಿಗೆ ಕಣಕ್ಕಿಳಿದಿದ್ದರು. ಈ ಬಾರಿ ಕೇವಲ ಮೂರು ಇನ್ನಿಂಗ್ಸ್‌ಗಳನ್ನು ರೋಹಿತ್ ಶರ್ಮಾ ಆಡಿದ್ದರೂ ಅದಾಗಲೇ ಅವರು 11 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರ ವಿಶ್ವಕಪ್ ಟೂರ್ನಿಯ ಸಿಕ್ಸರ್‌ಗಳ ಸಂಖ್ಯೆ ಈಗ 34ಕ್ಕೆ ಏರಿಕೆಯಾಗಿದೆ.

ಇದೀಗ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ 3ನೇ ಸ್ಥಾನದಲ್ಲಿದ್ದಾರೆ. ಎಬಿ ಡಿವಿಲಿಯರ್ಸ್(37 ಸಿಕ್ಸರ್) ಹಾಗೂ ಕ್ರಿಸ್ ಗೇಲ್ (49 ಸಿಕ್ಸರ್) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಅಂದರೆ ಕ್ರಿಸ್ ಗೇಲ್ ದಾಖಲೆ ಮುರಿಯಲು ರೋಹಿತ್‌ಗೆ ಕೇವಲ 16 ಸಿಕ್ಸರ್‌ಗಳ ಅಗತ್ಯ ಮಾತ್ರವೇ ಇದೆ. ಲೀಗ್ ಹಂತದಲ್ಲಿ ಇನ್ನೂ ಆರು ಪಂದ್ಯಗಳಿದ್ದು ಬಳಿಕ ನಾಕೌಟ್ ಪಂದ್ಯಗಳು ಇದೆ. ಹಾಗಾಗಿ ರೋಹಿತ್ ಶರ್ಮಾ ಈಗ ಇರುವ ಫಾರ್ಮ್ ನೋಡಿದರೆ ಈ ದಾಖಳೆ ಮುರಿಯುವುದು ಅವರಿಂದ ಕಷ್ಟವಾಗಲಾರದು.

ಒಂದೇ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್

ಒಂದೇ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ದಾಖಲೆ ಪ್ರಸ್ತುತ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ 11 ಪಂದ್ಯಗಳಿಂದ 673 ರನ್‌ಗಳಿಸಿದ್ದು ಈವರೆಗೂ ದಾಖಲೆಯಾಗಿಯೇ ಉಳಿದುಕೊಂಡಿದೆ. 2019ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 648 ರನ್‌ಗಳನ್ನು ಗಳಿಸಿ ಆ ದಾಖಲೆಯ ಸನಿಹಕ್ಕೆ ಬಂದಿದ್ದರೂ ಮುರಿಯಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೊಮ್ಮೆ ಆ ದಾಖಲೆ ಮುರಿಯುವ ಅವಕಾಶ ರೋಹಿತ್ ಶರ್ಮಾ ಮುಂದಿದೆ.

ಪ್ರಸ್ತುತ ರೋಹಿತ್ ಶರ್ಮಾ ಕೇವಲ ಮೂರು ಪಂದ್ಯಗಳನ್ನು ಆಡಿದ್ದು ಅದರಲ್ಲಿ 217 ರನ್‌ಗಳನ್ನು ಈಗಾಗಲೇ ಗಳಿಸಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ 457 ರನ್‌ಗಳಿಸಿದರೆ ಈ ದಾಖಳೆ ಮುರಿದಂತಾಗಲಿದೆ. ಭಾರತ ಫೈನಲ್ಸ್‌ಗೆ ತಲುಪಿದರೆ ಇನ್ನೂ 8 ಪಂದ್ಯಗಳು ಅವರಿಗೆ ದೊರೆಯಲಿದ್ದು ಎರಡ್ಮೂರು ದೊಡ್ಡ ಶತಕಗಳು ಅವರ ಬ್ಯಾಟ್‌ನಿಂದ ಬಂದರೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಈ ದಾಖಲೆಯನ್ನು ಮುರಿಯುವ ಅವಕಾಶ ರೋಹಿತ್ ಶರ್ಮಾ ಮುಂದಿದೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ

ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆಯನ್ನು ಪ್ರಸ್ತುತ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸಚಿನ್ ತೆಂಡೂಲ್ಕರ್ 45 ವಿಶ್ವಕಪ್ ಪಂದ್ಯಗಳನ್ನು ಆಡಿದ್ದು 9 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡು ಈ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ 6 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವ ರೋಹಿತ್ ಶರ್ಮಾ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ. ಭಾರತ ಫೈನಲ್‌ಗೆ ಪ್ರವೇಶಿಸಿದರೆ ಇನ್ನೂ 8 ಪಂದ್ಯಗಳು ರೋಹಿತ್ ಶರ್ಮಾಗೆ ದೊರೆಯಲಿದೆ. ಆದರೆ ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆ ಮುರಿಯವುದು ರೋಹಿತ್ ಶರ್ಮಾಗೆ ದೊಡ್ಡ ಸವಾಲಾಗಿದ್ದರೂ ಆ ಅವಕಾಶವಂತೂ ಇದ್ದೇ ಇದೆ.

Story first published: Tuesday, October 17, 2023, 19:09 [IST]
Other articles published on Oct 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+