ಶ್ರೀಲಂಕಾದಲ್ಲಿ ಹೊಸ ಇತಿಹಾಸ ಬರೆದ ನಾಯಕ ಕೊಹ್ಲಿ
ಕೊಲಂಬೋ, ಸೆಪ್ಟೆಂಬರ್ 01: ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಮಂಗಳವಾರ ಇಲ್ಲಿನ ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ (ಎಸ್ಎಸ್ ಸಿ) ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅತಿಥೇಯ ಶ್ರೀಲಂಕಾ ತಂಡದ ವಿರುದ್ಧ ಭಾರತದ ತಂಡ 1-2 ಅಂತರದ ಸರಣಿ ಜಯ ದಾಖಲಿಸಿದೆ.
ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ 117 ರನ್ ಗಳ ಅಂತರದಿಂದ ಸೋಲಿಸಿತು. ಈ ಮೂಲಕ ಮೂರು ಟೆಸ್ಟ್ ಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ದ್ವೀಪ ರಾಷ್ಟ್ರದಲ್ಲಿ ಟೆಸ್ಟ್ ಸರಣಿ ಜಯ 22 ವರ್ಷಗಳ ನಂತರ ಭಾರತಕ್ಕೆ ದಕ್ಕಿದೆ.[3ನೇ ಟೆಸ್ಟ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ]
ಪಂದ್ಯದ ಅಂತಿಮ ದಿನದಂದು 386 ರನ್ ಚೇಸ್ ಮಾಡಿದ ಶ್ರೀಲಂಕಾ ತಂಡ 268ರನ್ ಗಳ ಮೊತ್ತಕ್ಕೆ ಸರ್ವಪತನ ಕಂಡಿತು. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ ಭರ್ಜರಿಯಾಗಿ ಲಯ ಕಂಡು ಕೊಂಡು ಸರಣಿ ಜಯ ದಾಖಲಿಸಿದೆ.
ಶ್ರೀಲಂಕಾದಲ್ಲಿ ಈ ಹಿಂದೆ ಮೊಹಮ್ಮದ್ ಅಜರುದ್ದೀನ್ ಅವರು ಮಾಡಿದ ಸಾಧನೆಯನ್ನು 22 ವರ್ಷಗಳ ನಂತರ ವಿರಾಟ್ ಕೊಹ್ಲಿ ಅವರು ಪುನರಾವರ್ತನೆ ಮಾಡಿದ್ದಾರೆ. ಸರಣಿ ಜಯ ದಾಖಲಿಸಿದ ಟೀಂ ಇಂಡಿಯಾದ ಎರಡನೇ ನಾಯಕ ಎನಿಸಿಕೊಂಡಿದ್ದಾರೆ. 1993ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ಟೆಸ್ಟ್ ಸರಣಿ ಜಯ ದಾಖಲಿಸಿತ್ತು.

22 ವರ್ಷಗಳ ನಂತರ ಸರಣಿ ಜಯ ಸಾಧನೆ ರಿಪೀಟ್
ಮೊಹಮ್ಮದ್ ಅಜರುದ್ದೀನ್ ಹಾಗೂ ವಿರಾಟ್ ಕೊಹ್ಲಿ ಬಿಟ್ಟರೆ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ಎಂಎಸ್ ಧೋನಿ ನಾಯಕತ್ವದಲ್ಲಿ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ವಶಪಡಿಸಿಕೊಳ್ಳುವುದು ಮರೀಚಿಕೆಯಾಗಿತ್ತು.

1985ರಿಂದ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಫಲಿತಾಂಶ
* 1985- ಸೋಲು ೦-1 (3 ಪಂದ್ಯಗಳ ಸರಣಿ) - (ನಾಯಕ-ಕಪಿಲ್ ದೇವ್)
* ಆಗಸ್ಟ್ 30 ರಿಂದ ಸೆಪ್ಟೆಂಬರ್ 14, 1985
* ಮೊದಲ ಪಂದ್ಯ ಡ್ರಾ, ಎರಡನೇ ಪಂದ್ಯದಲ್ಲಿ ಶ್ರೀಲಂಕಾಕ್ಕೆ 149 ರನ್ ಜಯ ಹಾಗೂ ಮೂರನೇ ಪಂದ್ಯ ಡ್ರಾ. [ಸರಣಿ ಫಲಿತಾಂಶ ಇಲ್ಲಿ ನೋಡಿ]

ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಸರಣಿ
* 1993- ಗೆಲುವು 1-0 (3 ಪಂದ್ಯಗಳ ಸರಣಿ)- (ಮೊಹಮ್ಮದ್ ಅಜರುದ್ದೀನ್) ಸರಣಿ [ಫಲಿತಾಂಶದ ರಿಪೋರ್ಟ್ ಕಾರ್ಡ್]

ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಸರಣಿ ಡ್ರಾ
* 1997- ಡ್ರಾ 0-0 (2 ಪಂದ್ಯಗಳ ಸರಣಿ)- (ಸಚಿನ್ ತೆಂಡೂಲ್ಕರ್) [ಸರಣಿ ಫಲಿತಾಂಶದ ರಿಪೋರ್ಟ್ ಕಾರ್ಡ್]

ಏಷ್ಯಾದ ಟೆಸ್ಟ್ ಚಾಂಪಿಯನ್ ಶಿಪ್
* 1999- ಡ್ರಾ- ಏಷ್ಯಾದ ಟೆಸ್ಟ್ ಚಾಂಪಿಯನ್ ಶಿಪ್ (ಮೊಹಮ್ಮದ್ ಅಜರುದ್ದೀನ್) [ಸರಣಿಯ ಸಂಪೂರ್ಣ ಫಲಿತಾಂಶ ವಿವರ]

ಸೌರವ್ ಗಂಗೂಲಿ ನಾಯಕತ್ವದಲ್ಲಿ ಸೋಲು
* 2001- ಸೋಲು 1-2 (3 ಪಂದ್ಯಗಳ ಸರಣಿ)- (ಸೌರವ್ ಗಂಗೂಲಿ) ಸ್ಕೋರ್ ಕಾರ್ಡ್ ನೋಡಿ

ಅನಿಲ್ ಕುಂಬ್ಳೆ
* 2008- ಸೋಲು 1-2 (3 ಪಂದ್ಯಗಳ ಸರಣಿ)- (ಅನಿಲ್ ಕುಂಬ್ಳೆ) ಸ್ಕೋರ್ ಕಾರ್ಡ್ ನೋಡಿ

ಎಂಎಸ್ ಧೋನಿ
* 2010- ಡ್ರಾ 1-1 (3 ಪಂದ್ಯಗಳ ಸರಣಿ)- (ಎಂಎಸ್ ಧೋನಿ) ಸರಣಿ ಫಲಿತಾಂಶದ ರಿಪೋರ್ಟ್ ಕಾರ್ಡ್

ವಿರಾಟ್ ಕೊಹ್ಲಿ
2015- ಗೆಲುವು 2-1 (3 ಪಂದ್ಯಗಳ ಸರಣಿ)- (ವಿರಾಟ್ ಕೊಹ್ಲಿ) ಸರಣಿ ಫಲಿತಾಂಶದ ರಿಪೋರ್ಟ್ ಕಾರ್ಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications