ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಜಯ

By Mahesh

ಕೊಲಂಬೋ, ಸೆಪ್ಟೆಂಬರ್ 01: ಮೂರನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಇಶಾಂತ್ ಶರ್ಮ ಹಾಗೂ ಆರ್ ಅಶ್ವಿನ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಸೋಲು ಕಂಡಿದೆ. ಶ್ರೀಲಂಕಾ ವಿರುದ್ಧ ಭಾರತಕ್ಕೆ 117 ರನ್ ಗಳ ಅಂತರದ ಗೆಲುವು ಸಿಕ್ಕಿದೆ. ಈ ಮೂಲಕ 22 ವರ್ಷಗಳ ನಂತರ ಶ್ರೀಲಂಕಾದಲ್ಲಿ ಟೀಂ ಇಂಡಿಯಾ ಸರಣಿ ಜಯ ದಾಖಲಿಸಿದೆ.

ಶ್ರೀಲಂಕಾ ಎದುರಿಗೆ 386ರನ್ ಗಳ ಗುರಿ ಇತ್ತು.ಟೆಸ್ಟ್‌ನ ನಾಲ್ಕನೆ ದಿನವಾದ ಸೋಮವಾರ ಆಟ ಕೊನೆಗೊಂಡಾಗ ಶ್ರೀಲಂಕಾ ಎರಡನೆ ಇನಿಂಗ್ಸ್‌ನಲ್ಲಿ 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 67 ರನ್ ಗಳಿಸಿತ್ತು. ಗೆಲುವಿಗೆ 319 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು.

 Sri Lanka 134/5; Mathews hits fifty

ಐದನೇ ದಿನ 47 ಓವರ್ ಗಳಲ್ಲಿ 134/5 ಸ್ಕೋರ್ ಮಾಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 1 ರನ್ ಗಳಿಸಿ ಔಟಾಗಿದ್ದ ನಾಯಕ ಮ್ಯಾಥ್ಯೂಸ್ ಎರಡನೇ ಇನ್ನಿಂಗ್ಸ್ ನಲ್ಲಿ 110ರನ್ ಗಳಿಸಿ ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿದರು.

ಮ್ಯಾಥ್ಯೂಸ್ ಗೆ ಬೆಂಬಲ ನೀಡಿದ ಪೆರೆರಾ ಅವರು 70ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ನೀಡಿದರು. ಅಂತಿಮವಾಗಿ ಶ್ರೀಲಂಕಾ 85 ಓವರ್ ಗಳಲ್ಲಿ 268ರನ್ ಗಳಿಸಿ ಸೋಲೊಪ್ಪಿಕೊಂಡಿತು. ಜೂನ್ 2011ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಸರಣಿ ಜಯದ ನಂತರ ವಿದೇಶದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಜಯ ದಾಖಲಿಸಿದೆ.[ಶ್ರೀಲಂಕಾದಲ್ಲಿ ಹೊಸ ಇತಿಹಾಸ ಬರೆದ ನಾಯಕ ಕೊಹ್ಲಿ]

ಮೊದಲ ಅವಧಿಯಲ್ಲಿ ಭಾರತ 2 ವಿಕೆಟ್ ಮಾತ್ರ ಗಳಿಸಿತು. ಕೌಶಲ್ ಸಿಲ್ವಾ ಹಾಗೂ ಲಹಿರು ತಿರಿಮನ್ನೆ ವಿಕೆಟ್ ಒಪ್ಪಿಸಿದರು.ಕೊನೆಗೆ ಅಶ್ವಿನ್ 69ಕ್ಕೆ 4, ಇಶಾಂತ್ ಶರ್ಮ 32ಕ್ಕೆ 3, ಉಮೇಶ್ ಯಾದವ್ 65ಕ್ಕೆ 2 ವಿಕೆಟ್ ಹಾಗೂ ಅಮಿತ್ ಮಿಶ್ರಾ 1 ವಿಕೆಟ್ ಪಡೆದು ಜಯಕ್ಕೆ ತಮ್ಮ ಕೊಡುಗೆ ನೀಡಿದರು.

India win Test series in Sri Lanka after 22 years

ಎರಡನೇ ಇನಿಂಗ್ಸ್‌ನಲ್ಲಿ ಭಾರತದ ರನ್ ಗಳಿಕೆಯನ್ನು 76 ಓವರ್‌ಗಳಲ್ಲಿ 274ರನ್ ಗಳಿಸಿತು. ಶ್ರೀಲಂಕಾ ತನ್ನ ಎರಡನೆ ಇನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿತು. ಇಶಾಂತ್‌ರ ಮೊದಲ ಓವರ್‌ನ ಅಂತಿಮ ಎಸೆತದಲ್ಲಿ ಆರಂಭಿಕ ಆಟಗಾರ ಉಪುಲ್ ತರಂಗ ಖಾತೆ ತೆರೆಯುವ ಮೊದಲೇ ವಿಕೆಟ್ ಕೀಪರ್ ಓಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X