ಕಳೆದ 6 ಏಕದಿನ ಪಂದ್ಯಗಳಿಂದ ವಿಶಿಷ್ಟ ದಾಖಲೆ ಬರೆದ ಟೀಮ್ ಇಂಡಿಯಾ

ಕೊರೊನಾ ವೈರಸ್ ನಂತರ ಕ್ರಿಕೆಟ್ ಪಂದ್ಯಗಳು ಮತ್ತೆ ಆರಂಭವಾದಾಗಿನಿಂದ ಇದುವರೆಗೂ ಸಹ ಟೀಂ ಇಂಡಿಯಾ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ.
ಇತ್ತೀಚೆಗಷ್ಟೇ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಎಲ್ಲಾ ಸರಣಿಗಳನ್ನೂ ವಶಪಡಿಸಿಕೊಂಡ ಟೀಮ್ ಇಂಡಿಯಾ ಜಯದ ಅಲೆಯಲ್ಲಿ ತೇಲುತ್ತಿದೆ. ಕೊನೆಯದಾಗಿ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನವನ್ನು ನೀಡಿದೆ.
ಇಂಗ್ಲೆಂಡ್ ವಿರುದ್ಧ ಆಡಿದ ಎಲ್ಲ 3 ಏಕದಿನ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ 300ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದೆ. ಅಷ್ಟೇ ಅಲ್ಲದೆ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ 3 ಏಕದಿನ ಪಂದ್ಯಗಳ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ 300+ ರನ್‌ಗಳನ್ನು ಕಲೆಹಾಕಿತ್ತು. ಈ ಮೂಲಕ ಟೀಮ್ ಇಂಡಿಯಾ ಕಳೆದ 6 ಏಕದಿನ ಪಂದ್ಯಗಳಲ್ಲಿ ಸತತವಾಗಿ 300ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸುವುದರ ಮೂಲಕ ಇದೇ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸತತ 6 ಏಕದಿನ ಪಂದ್ಯಗಳಲ್ಲಿ 300+ ರನ್ ಬಾರಿಸಿದ ವಿಶಿಷ್ಟ ದಾಖಲೆಯನ್ನು ಬರೆದಿದೆ.
ಟೀಮ್ ಇಂಡಿಯಾದ ಕಳೆದ 6 ಏಕದಿನ ಪಂದ್ಯಗಳ ರನ್ ಪಟ್ಟಿ ಇಲ್ಲಿದೆ ನೋಡಿ..
ಭಾರತ v ಇಂಗ್ಲೆಂಡ್ : 329
ಭಾರತ v ಇಂಗ್ಲೆಂಡ್ : 336/6
ಭಾರತ v ಇಂಗ್ಲೆಂಡ್ : 317/5
ಭಾರತ v ಆಸ್ಟ್ರೇಲಿಯಾ : 302/5
ಭಾರತ v ಆಸ್ಟ್ರೇಲಿಯಾ : 338/9
ಭಾರತ v ಆಸ್ಟ್ರೇಲಿಯಾ : 308/8
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications