ಟಿ20 ವಿಶ್ವಕಪ್, ದ. ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಸರಣಿ: ಭಾರತ ಕ್ರಿಕೆಟ್ ತಂಡದ 2022ರ ವೇಳಾಪಟ್ಟಿ

2021ರಲ್ಲಿ ಟೀಮ್ ಇಂಡಿಯಾದ ಬಿಡುವಿಲ್ಲದ ಕ್ರಿಕೆಟ್ ಚಟುವಟಿಕೆಗಳ ನಂತರ 2022ರ ಕ್ಯಾಲೆಂಡರ್ ಅವಧಿಯಲ್ಲಿ ಭಾರತ ಆಡಲಿರುವ ಸರಣಿಗಳ ವೇಳಾಪಟ್ಟಿ ಬಹುತೇಕ ನಿಗದಿಯಾಗಿದೆ. 2022ರಲ್ಲಿ ಭಾರತ ತಂಡ ಹೆಚ್ಚು ಭಾರತದಲ್ಲಿಯೇ ಸರಣಿಯನ್ನು ಆಡಲಿದ್ದು ವಿದೇಶದಲ್ಲಿ ಕೂಡ ಕೆಲ ಪ್ರಮುಖ ಸರಣಿಯನ್ನು ಆಡಲು ಸಮಯ ನಿದಿಯಾಗಿದೆ.
ಇನ್ನು 2022ರಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು ಈ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು ದ್ರಾವಿಡ್ ಕೋಚ್ ಆಗಿ ತಂಡದ ಜೊತೆಯಿರಲಿದ್ದಾರೆ. ಈ ಇಬ್ಬರ ನೇತೃತ್ವದಲ್ಲಿ ಭಾರತ ಟ್ರೋಫಿಯನ್ನು ಗೆಲ್ಲಲಿದೆಯಾ ಎಂಬುದು ಕುತೂಹಲ ಮೂಡಿಸಿದೆ. ಇನ್ನು 2022ರಲ್ಲಿ ಭಾರತ ಇಂಗ್ಲೆಂಡ್‌ಗೆ ಪ್ರವಾಸ ಕೂಗೊಳ್ಳಲಿದ್ದು ಮೊದಲಿಗೆ ಈ ವರ್ಷ ಭಾರತೀಯ ಕ್ಯಾಂಪ್‌ನಲ್ಲಿ ಕೊರೊನಾಆವೈರಸ್ ಕಾಣಿಸಿಕೊಂಡ ಕಾರಣ ಮುಂದೂಡಿರುವ ಸರಣಿಯ ಅಂತಿಮ ಪಂದ್ಯ ಆಯೋಜನೆಯಾಗಲಿದೆ.
ಈ ವರ್ಷ ಟೀಮ್ ಇಂಡಿಯಾ ಆಡಲಿರುವ ಎಲ್ಲಾ ಸರಣಿಗಳ ವೇಳಾಪಟ್ಟಿಯನ್ನು ಮುಂದೆ ಓದಿ..

ಭಾರತಕ್ಕೆ ವೆಸ್ಟ್ ಇಂಡೀಸ್ ಪ್ರವಾಸ (ಫೆಬ್ರವರಿ)
ಏಕದಿನ ಸರಣಿ:
ಮೊದಲ ಏಕದಿನ - ಫೆಬ್ರವರಿ 6, ಅಹಮದಾಬಾದ್
2ನೇ ಏಕದಿನ - ಫೆಬ್ರವರಿ 9, ಜೈಪುರ
3ನೇ ಏಕದಿನ - ಫೆಬ್ರವರಿ 12, ಕೋಲ್ಕತ್ತಾ
ಟಿ20 ಸರಣಿ:
ಮೊದಲ ಟಿ20 - ಫೆಬ್ರವರಿ 15, ಕಟಕ್
2ನೇ ಟಿ20 - ಫೆಬ್ರವರಿ 18, ವಿಶಾಖಪಟ್ಟಣ
3ನೇ ಟಿ20 - ಫೆಬ್ರವರಿ 20, ತಿರುವನಂತಪುರ

ಭಾರತಕ್ಕೆ ಶ್ರೀಲಂಕಾ ಪ್ರವಾಸ (ಫೆಬ್ರವರಿ-ಮಾರ್ಚ್)
ಟೆಸ್ಟ್ ಸರಣಿ:
ಮೊದಲ ಟೆಸ್ಟ್ - ಫೆಬ್ರವರಿ 25-ಮಾರ್ಚ್ 1, ಬೆಂಗಳೂರು
2ನೇ ಟೆಸ್ಟ್ - ಮಾರ್ಚ್ 5-9, ಮೊಹಾಲಿ
ಟಿ20 ಸರಣಿ:
ಮೊದಲನೇ ಟಿ20 - ಮಾರ್ಚ್ 13, ಮೊಹಾಲಿ
2 ನೇ ಟಿ20 - ಮಾರ್ಚ್ 15, ಧರ್ಮಶಾಲಾ
3 ನೇ ಟಿ20 - ಮಾರ್ಚ್ 18, ಲಕ್ನೋ
ಐಪಿಎಲ್(ಏಪ್ರಿಲ್-ಮೇ) ದಿನಾಂಕ ನಿಗದಿಯಾಗಿಲ್ಲ

ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ (ಜೂನ್)
ಟಿ20 ಸರಣಿ:
ಮೊದಲನೇ ಟಿ20 - ಜೂನ್ 9, ಚೆನ್ನೈ
2ನೇ ಟಿ20 - ಜೂನ್ 12, ಬೆಂಗಳೂರು
3ನೇ ಟಿ20 - ಜೂನ್ 14, ನಾಗ್ಪುರ
4ನೇ ಟಿ20 - ಜೂನ್ 17, ರಾಜ್‌ಕೋಟ್
5ನೇ ಟಿ20 - ಜೂನ್ 19, ದೆಹಲಿ

ಭಾರತದ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ (ಜುಲೈ)
ಮುಂದೂಡಲ್ಪಟ್ಟ ಟೆಸ್ಟ ಪಂದ್ಯ- ಜುಲೈ 1-5, ಬರ್ಮಿಂಗ್‌ಹ್ಯಾಮ್
ಟಿ20 ಸರಣಿ:
ಮೊದಲ ಟಿ20 - ಜುಲೈ 7, ಸೌತಾಂಪ್ಟನ್
2ನೇ ಟಿ20 - ಜುಲೈ 9, ಬರ್ಮಿಂಗ್‌ಹ್ಯಾಮ್
3ನೇ ಟಿ20 - ಜುಲೈ 10, ನಾಟಿಂಗ್‌ಹ್ಯಾಮ್
ಏಕದಿನ ಸರಣಿ:
ಮೊದಲ ಏಕದಿನ ಪಂದ್ಯ - ಜುಲೈ 12, ಲಂಡನ್
2ನೇ ಏಕದಿನ ಪಂದ್ಯ - ಜುಲೈ 14, ಲಂಡನ್
3ನೇ ಏಕದಿನ ಪಂದ್ಯ - ಜುಲೈ 17, ಮ್ಯಾಂಚೆಸ್ಟರ್

ವೆಸ್ಟ್ ಇಂಡೀಸ್‌ಗೆ ಭಾರತ ತಂಡದ ಪ್ರವಾಸ (ಜುಲೈ-ಆಗಸ್ಟ್)
3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿ
(ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ)
ಏಷ್ಯಾ ಕಪ್ (ಸೆಪ್ಟೆಂಬರ್)
(ಸ್ಥಳ, ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ)

ಭಾರತಕ್ಕೆ ಆಸ್ಟ್ರೇಲಿಯಾ ತಂಡದ ಪ್ರವಾಸ (ಸೆಪ್ಟೆಂಬರ್-ಅಕ್ಟೋಬರ್)
4 ಪಂದ್ಯಗಳ ಟೆಸ್ಟ್ ಸರಣಿ, 3 ಪಂದ್ಯಗಳ ಟಿ20 ಸರಣಿ
(ಸ್ಥಳ, ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ)
ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್, 2022 (ಅಕ್ಟೋಬರ್-ನವೆಂಬರ್)
(ಸ್ಥಳ, ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ)
ಭಾರತಕ್ಕೆ ಬಾಂಗ್ಲಾದೇಶ ಪ್ರವಾಸ (ನವೆಂಬರ್-ಡಿಸೆಂಬರ್)
2 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿ
(ಸ್ಥಳ, ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications