ಮನೀಶ್ ಪಾಂಡೆಗೆ ಮಡದಿಯಾದ ಮಂಗಳೂರಿನ ಮದಿಮಾಲ್: ಚಿತ್ರಗಳು

ಬೆಂಗಳೂರು, ಡಿಸೆಂಬರ್ 2: ಟೀಮ್ ಇಂಡಿಯಾ ಆಟಗಾರ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಮದುವೆ ಮುಂಬೈಯಲ್ಲಿ ಸೋಮವಾರ (ಡಿಸೆಂಬರ್ 2) ನೆರವೇರಿದೆ. ಮಂಗಳೂರಿನ ಮದುಮಗಳು (ತುಳು ಭಾಷೆಯಲ್ಲಿ ಮದಿಮಾಲ್) ಆಶ್ರಿತಾ ಶೆಟ್ಟಿ ಜೊತೆ ಮನೀಶ್, ಮದುವೆ ಬಂಧನಕ್ಕೆ ಒಳಗಾಗಿದ್ದಾರೆ.
30ರ ಹರೆಯದ ಪಾಂಡೆ ಮತ್ತು ದಕ್ಷಿಣ ಭಾರತ ನಟಿ, 26ರ ಹರೆಯದ ಆಶ್ರಿತಾ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬದ ಸದಸ್ಯರು, ಹತ್ತಿರದ ಸ್ನೇಹಿತರು ಪಾಲ್ಗೊಂಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಜನಪ್ರಿಯಗೊಂಡಿರುವ ಆಶ್ರಿತಾ, ಇಂದ್ರಜಿತ್ (ತಮಿಳು), ತೆಲಿಕೆದ ಬೊಳ್ಳಿ (ತುಳು), ಒರು ಕನ್ನಿಯುಮ್ ಮೂನು ಕಲಾವಾನಿಕಲಂ (ತಮಿಳು) ಇಂಥ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇಲ್ಲೀವರೆಗೆ ಒಟ್ಟು 5 ಚಿತ್ರಗಳಲ್ಲಿ ನಟಿಸಿರುವ ಆಶ್ರಿತಾ, ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದು ಹೆಚ್ಚು ಜನಪ್ರಿಯರಾಗಿದ್ದರು. ಮನೀಶ್-ಆಶ್ರಿತಾ ಮದುವೆಯ ಕೆಲವು ಆಕರ್ಷಕ ಚಿತ್ರಗಳು ಇಲ್ಲಿವೆ.

ಕೊಹ್ಲಿ ಅನುಸರಿಸಿದ ಪಾಂಡೆ
2017ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವರಿಸಿದ ವಿರಾಟ್ ಕೊಹ್ಲಿಯನ್ನು ಅನುಸರಿಸಿರುವ ಪಾಂಡೆ, ಚಿತ್ರನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಶುಭಕೋರಿದ ಎಸ್‌ಆರ್‌ಎಚ್
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಪಾಂಡೆ ಆಡುವ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಫ್ರಾಂಚೈಸಿ, ಮನೀಶ್-ಆಶ್ರಿತಾ ದಂಪತಿಗೆ ಟ್ವೀಟ್ ಮೂಲಕ ಶುಭ ಕೋರಿದೆ.

ಮದುವೆಗೆ ಟ್ರೋಫಿ ಉಡುಗೊರೆ
ಮನೀಶ್ ಹಸೆಮಣೆಗೇರುವ ಮುನ್ನಾದಿನ, ಡಿಸೆಂಬರ್ 1ರಂದು ಪಾಂಡೆ ನಾಯಕತ್ವದ ಕರ್ನಾಟಕ ತಂಡ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಜಯಿಸಿತ್ತು. ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಕರ್ನಾಟಕ 1 ರನ್‌ನಿಂದ ಸೋಲಿಸಿತ್ತು.

ಭಾರತ ಪರ ಬ್ಯಾಟಿಂಗ್
ಟೀಮ್ ಇಂಡಿಯಾ ಪರ ಪಾಂಡೆ 23 ಏಕದಿನ, 32 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 440, 587 ರನ್ ಗಳಿಸಿದ್ದಾರೆ. 120 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ಮನೀಶ್ 2,843 ರನ್ ಕಲೆ ಹಾಕಿದ್ದಾರೆ.

ಸರಣಿಗೆ ಮುಂದಾಗುತ್ತಿದ್ದೇನೆ
'ಭಾರತ ಪರ ಸರಣಿ ಆಡಲು ಎದುರು ನೋಡುತ್ತಿದ್ದೇನೆ. ಅದಕ್ಕೂ ಮುನ್ನ, ಪ್ರಮುಖ ಸರಣಿಗೆ ಮುಂದಾಗುತ್ತಿದ್ದೇನೆ; ನಾನು ನಾಳೆ ಮದುವೆಯಾಗುತ್ತಿದ್ದೇನೆ,' ಎಂದು ಡಿಸೆಂಬರ್ 1ರಂದು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಬಳಿಕ ಪಾಂಡೆ ಹೇಳಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications