Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Under-19s Asia Cup: ಭಾರತ-ಪಾಕ್‌ ಫೈನಲ್‌ನಲ್ಲಿ ಫೈಟ್‌: ಸೆಮಿಫೈನಲ್‌ನಲ್ಲಿ ಲಂಕಾಗೆ ನಿರಾಸೆ

ದುಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್‌ ಸ್ಥಿರ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಅಂಡರ್ 19 ಏಷ್ಯಾ ಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಈ ಮೂಲಕ ಭಾರತ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ. ಟೀಮ್ ಇಂಡಿಯಾ 8ನೇ ಬಾರಿಗೆ ಫೈನಲ್‌ ಪ್ರವೇಶಿಸಿದ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ. ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಪಾಕ್ ತಂಡಗಳು ಮತ್ತೊಮ್ಮೆ ಮುಖಾಮುಖಿ ಆಗಲಿವೆ.

ಶ್ರೀಲಂಕಾ ನೀಡಿದ್ದ 139 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಆಯುಷ್ ಮಾತ್ರೆ 7 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಿದರು. ಸ್ಫೋಟಕ ಬ್ಯಾಟರ್‌ ವೈಭವ್ ಸೂರ್ಯವಂಶಿ (9) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಭಾರತ ಸಾಧಾರಣ ಮೊತ್ತವನ್ನು ಹಿಂಬಾಲಿಸಿದಾಗ 25 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಆರನ್ ಜಾರ್ಜ್ ಮತ್ತು ವಿಹಾನ್ ಮಲ್ಹೋತ್ರಾ ತಂಡಕ್ಕೆ ಆಧಾರವಾದರು.

India Crush SL by 8 Wickets to Enter U-19 Asia Cup Final To Face Pakistan

ಆರನ್ ಜಾರ್ಜ್, ವಿಹಾನ್ ಮಲ್ಹೋತ್ರಾ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುತ್ತಾ ಸಾಗಿದರು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಶ್ರೀಲಂಕಾ ಬೌಲರ್‌ಗಳು ವಿಫಲರಾದರು. ಭಾರತದ ಪರ ಆರನ್ ಜಾರ್ಜ್ ಅಜೇಯ 58 ರನ್‌ ಸಿಡಿಸಿದರು. ಇವರ ಕ್ಲಾಸಿಕ್‌ ಇನಿಂಗ್ಸ್‌ನಲ್ಲಿ 4 ಬೌಂಡರಿ, 1 ಸಿಕ್ಸರ್ ಸಿಡಿಸಿದರು. ವಿಹಾನ್ ಮಲ್ಹೋತ್ರಾ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 61 ರನ್‌ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ರನ್‌ ಕಲೆ ಹಾಕಲು ಪರದಾಟ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಟೀಮ್ ಇಂಡಿಯಾದ ಬೌಲರ್‌ಗಳ ಕರಾರುವಾಕ್‌ ದಾಳಿಗೆ ಲಂಕಾ ತಂಡದ ಬ್ಯಾಟರ್‌ಗಳ ಬಳಿ ಯಾವುದೇ ಉತ್ತರ ಇರಲಿಲ್ಲ. ಲಂಕಾ ತಂಡದ ಪರ ವಿರಣ್ ಚಾಮುದಿತ 19, ನಾಯಕ ವಿಮತ್ ದಿನಸಾರ 32, ಚಾಮಿಕ 19, ಸೇಥ್ಮಿಕ ಸೆನೆವಿರತ್ನೆ 30 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 138 ರನ್‌ ಸೇರಿಸಿತು. ಭಾರತದ ಪರ ಹೆನಿಲ್ ಪಟೇಲ್ ಹಾಗೂ ಕನಿಷ್ಕ್ ಚೌಹಾಣ ತಲಾ 2 ವಿಕೆಟ್‌ ಕಬಳಿಸಿದರು.

ಪಾಕ್‌ಗೆ ಭರ್ಜರಿ ಜಯ

ಈ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 26.2 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ತಂಡದ ಪರ ಅಬ್ದುಲ್ ಸುಭಾನ್ 4 ವಿಕೆಟ್‌ ಪಡೆದರು. ಪಾಕ್ ತಂಡ 16.3 ಓವರ್‌ಗಳಲ್ಲಿ 2 ವಿಕೆಟ್‌ಗೆ 122 ರನ್‌ ಕಲೆ ಹಾಕಿ ಜಯ ಸಾಧಿಸಿತು. ಪಾಕ್ ಪರ ಸಮೀರ್ ಮಿನ್ಹಾಸ್ ಅಜೇಯ 69 ರನ್‌f ಸಿಡಿಸಿದರು.

Story first published: Friday, December 19, 2025, 19:11 [IST]
Other articles published on Dec 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+