For Quick Alerts
ALLOW NOTIFICATIONS  
For Daily Alerts
 

IND Vs PAK: ಇಶಾನ್ ಕಿಶಾನ್ ಸ್ಫೋಟಕ ಅರ್ಧಶತಕ: ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು

India Vs Pakistan: ಕೊಲೊಂಬೊದ ಆರ್‌.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ 2026 ಗುಂಪು ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಮಣಿಸಿ ಭರ್ಜರಿ ಗೆಲವು ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಉತ್ತಮ ರನ್‌ ರೇಟ್‌ ಕಾಯ್ದುಕೊಳ್ಳುವುದಲ್ಲದೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ 6 ಅಂಕಗಳ ಮೂಲಕ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 175 ರನ್‌ಗಳನ್ನು ಕಲೆಹಾಕಿತು. ಇದರಲ್ಲಿ ಬಹುತೇಕ ರನ್‌ಗಳ ಪಾಲು ಆರಂಭಿಕನಾಗಿ ಅಭಿಷೇಕ್ ಶರ್ಮಾ ಜೊತೆ ಕಣಕ್ಕಿಳಿದ ಇಶಾನ್‌ ಕಿಶಾನ್‌ ಅವರದ್ದಾಗಿದೆ. ಅವರು ಕೇವಲ 40 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ ಬರೋಬ್ಬರಿ 77 ರನ್‌ಗಳನ್ನು ಕಲೆಹಾಕುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದೆಡೆ, ಬೌಲರ್‌ಗಳು ಸಹ ಮಾರಕ ಬೌಲಿಂಗ್ ದಾಳಿ ನಡೆಸಿ ಪಾಕ್‌ ಬ್ಯಾಟರ್‌ಗಳಿಗೆ ಕಾಡಿದರು.

India Defeat Pakistan in High-Voltage T20 World Cup 2India Defeat Pakistan in High-Voltage T20 World Cup 2026 Group Match at Colombo R Premadasa Stadium026 Group Match at Colombo R Premadasa Stadium

ಬಿರುಸಿನ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್

ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾಡಿದ, ಇಶಾನ್ ಕಿಶನ್ 77(40), ನಾಯಕ ಸೂರ್ಯಕುಮಾರ್ ಯಾದವ್ 32(29), ಶಿವಂ ದುವೆ 27(17), ತಿಲಕ್ ವರ್ಮಾ 25(24), ರಿಂಕು ಸಿಂಗ್ ಅಜೇಯ 11(4) ರನ್‌ ಸಿಡಿಸಿ ಮಿಂಚಿದರೆ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಹಾರ್ದಿಕ್‌ ಪಾಂಡ್ಯ ಹಾಗೂ ಅಕ್ಷರ್ ಪಾಟೇಲ್ ಶೂನ್ಯ ಸುತ್ತಿದರು.

ಪಾಕಿಸ್ತಾನ 114ಕ್ಕೆ ಆಲ್‌ ಔಟ್‌

ಭಾರತ ನೀಡಿದ 176 ರನ್‌ಗಳ ಗುರಿ ಮುಟ್ಟುವಲ್ಲಿ ವಿಫಲವಾಗಿ ಪಾಕಿಸ್ತಾನ ಸೋಲು ಕಂಡಿತು. ಪಾಕಿಸ್ತಾನವು 18 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 114 ರನ್‌ ಗಳಿಸಿ ಭಾರತದ ವಿರುದ್ಧ 61 ರನ್‌ಗಳ ಅಂತರದಿಂದ ಹೀನಾಯ ಸೋಲನುಭವಿಸಿತು. ಈ ಮೂಲಕ ಭಾರತದ ಬೌಲರ್‌ಗಳು ಪಾಕಿಸ್ತಾನದ ಬ್ಯಾಟರ್‌ಗಳ ವಿರುದ್ಧ ಹಿಡಿತ ಸಾಧಿಸಿ ಎಲ್ಲಾ ವಿಕೆಟ್‌ ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಯಾರಿಗೆ ಎಷ್ಟು ವಿಕೆಟ್?

ಭಾರತದ ಪರ ಬೌಲಿಂಗ್‌ ಮಾಡಿದ, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬೂಮ್ರಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಕಿಲ್ದೀಪ್‌ ಯಾದವ್ ಹಾಗೂ ತಿಲಕದ ವರ್ಮಾ ತಲಾ ಒಂದು ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಪಾಕಿಸ್ತಾನ ತಂಡವನ್ನು 114 ರನ್‌ಗಳಿ ಕಟ್ಟಿಹಾಕಿದರು.

ಭಾರತದ ನೀಡಿದ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು. ಪಾಕಿಸ್ತಾನದ ಬ್ಯಾಟರ್‌ಗಳು ಕೆಲ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಪಂದ್ಯದ ಅಂತ್ಯದಲ್ಲಿ ಭಾರತೀಯ ಬೌಲರ್‌ಗಳ ಮಾರಕ ದಾಳಿಯನ್ನು ಎದುರಿಸಲಾಗಲಿಲ್ಲ. ಈ ಮೂಲಕ ಪಾಕಿಸ್ತಾನ ತಂಡ ಅಂತಿಮವಾಗಿ ಗುರಿ ತಲುಪುವಲ್ಲಿ ವಿಫಲವಾಗಿ ಸೋಲಿಗೆ ಶರಣಾಯಿತು.

ಇನ್ನೂ ಈ ಜಯದಿಂದ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಾಗಿದ್ದು, ಮುಂದಿನ ಪಂದ್ಯಗಳತ್ತ ಹೆಚ್ಚಿನ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ. ಅಭಿಮಾನಿಗಳಲ್ಲೂ ಈ ಗೆಲುವು ಭಾರೀ ಉತ್ಸಾಹ ಮೂಡಿಸಿದೆ ಎಂದರೆ ತಪ್ಪಾಗಲಾರದು. ಇನ್ನೂ ಅಭಿಮಾನಿಗಳ ಪ್ರಾರ್ಥನೆಯಿಂದ ಮಳೆರಾಯ ಅಡ್ಡಿಯಾಗದೇ ಭಾರತ ತಂಡ ಪಾಕ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದೆ.

ಭಾರತ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬೂಮ್ರಾ, ವರುಣ್ ಚಕ್ರವರ್ತಿ.

Story first published: Sunday, February 15, 2026, 22:16 [IST]
Other articles published on Feb 15, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+